ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕನ ಕೊಲೆ ಯತ್ನ: ನಾಲ್ವರು ಬಿಹಾರಿಗಳು ಮಾಜಾಳಿ ಚೆಕ್ ಪೋಸ್ಟ್‌ ನಲ್ಲಿ ವಶಕ್ಕೆ

ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕನ ಕೊಲೆ ಯತ್ನ:  ನಾಲ್ವರು ಬಿಹಾರಿಗಳು ಮಾಜಾಳಿ ಚೆಕ್ ಪೋಸ್ಟ್‌ ನಲ್ಲಿ ವಶಕ್ಕೆ  Attempt to murder Congress leader Gopalakrishna Nayak

ಕಾರವಾರ 25: ಅಂಕೋಲದ ಕೇಣಿ ಗ್ರಾಮದ  ಬಳಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಎಂಬುವವರ  ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೆ ಯತ್ನ ಮಾಡಿದ್ದಾರೆ.  

ತಮ್ಮನ್ನು ಹಿಂಬಾಲಿಸಿ ಬಂದದ್ದ್ನು ಗಮನಿಸಿದ ಗೋಪಾಲಕೃಷ್ಣ ನಾಯಕ ಹತ್ತಿರದಲ್ಲೇ ಇದ್ದ ಬ್ಯಾಂಕ್ ಒಂದಕ್ಕೆ  ಒಳಹೊಕ್ಕು , ತಪ್ಪಿಸಿಕೊಂಡಿದ್ದಾರೆ. ಆದರೆ ಆ ವೇಳೆಗೆ ಅವರ ತಲೆಗೆ ಪೆಟ್ಟು ಬಿದ್ದಿತ್ತು ಎನ್ನಲಾಗಿದೆ.ಅವರ  ತಲೆಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ. ರಾಡ್ ನಿಂದ ಹೊಡೆದ ಹಿನ್ನೆಲೆಯಲ್ಲಿ ಅವರನ್ನು  ಅಂಕೋಲಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಸ್ಕ್ಯಾನಿಂಗ್ ಮಾಡಲು ಹೊನ್ನಾವರಕ್ಕೆ ಕಳುಹಿಸಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಗೋಪಾಲಕೃಷ್ಣ ನಾಯಕ ಮೇಲೆ ಕೊಲೆಯತ್ನ  ಮಾಡಿದ ನಾಲ್ವರನ್ನು ಕರ್ನಾಟಕ ಗೋವಾ ಗಡಿ  ಮಾಜಾಳಿ ಚೆಕ್ ಪೋಸ್ಟ್‌ ನಲ್ಲಿ  ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದ್ದು, ಅವರ ವಿಚಾರಣೆ ನಡೆಯುತ್ತಿದೆ.  

ವಶಕ್ಕೆ ಪಡೆದ ನಾಲ್ವರು ಬಿಹಾರಿಗಳು ಎನ್ನಲಾಗಿದ್ದು, ಇದು ಸುಫಾರಿ ಕೊಟ್ಟು ಮಾಡಿಸಿದ ಹಲ್ಲೆ ಎನ್ನಲಾಗುತ್ತಿದೆ.  ಗೋಪಾಲಕೃಷ್ಣ ಸಚಿವ ಸಂತೋಷ ಲಾಡ್ ಹಾಗೂ ಗೃಹ ಸಚಿವ ಪರಮೇಶ್ವರ ಅವರ ಅಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಕಾರವಾರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿದ್ದಾರೆ. 


Karawar Crime News