ಅಕ್ಷರಧಾಮಾ ಮಂದಿರದ ಬಳಿ ಪೊಲೀಸ್ ವಾಹನದ ಮೇಲೆ ದಾಳಿ

  ನವದೆಹಲಿ, ಸೆ 22  ದೆಹಲಿಯ ಅಕ್ಷರಧಾಮಾ ಮಂದಿರದ ಬಳಿ ಪೊಲೀಸ್ ವಾಹನದ ಮೇಲೆ ನಾಲ್ವರು ಗುರುತು ಪತ್ತೆಯಾಗದ ದಾಳಿಕೋರರು ಭಾನುವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.    

  ಮಂಡಾವಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ದುರ್ಘಟನೆಯಲ್ಲಿ ಈವರೆಗೆ ಯಾವುದೇ ಸಾವು ನೋವಿನ ವರದಿ ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.    

  ದಾಳಿಕೋರರ ಪತ್ತೆಗಾಗಿ ವ್ಯಾಪಕ ಶೋಧ ಕಾಯರ್ಾಚರಣೆ ನಡೆಸಲಾಗಿದ್ದು ಈವರೆಗೆ ಯಾರನ್ನೂ ಬಂಧಿಸಿಲ್ಲ. ತನಿಖೆ ಪ್ರಗತಿಯಲ್ಲಿದೆ ಎಂದು ವರದಿಯಾಗಿದೆ.