ನೆಹರೂ ವಿವಿ ಕ್ಯಾಂಪಸ್ ಮೇಲೆ ದಾಳಿ: ಭುಗಿಲೆದ್ದ ವಿದ್ಯಾರ್ಥಿಗಳ ಆಕ್ರೋಶ

ನವದೆಹಲಿ,  ಜನವರಿ 6,  ಜವಾಹರ ಲಾಲ್ ನೆಹರೂ ವಿಶ್ವವಿದ್ಯಾನಿಯಲದ  ಕ್ಯಾಂಪಸ್  ಮೇಲೆ ಮುಸುಕುಧಾರಿ ಗೂಂಡಾಗಳು  ನಡೆಸಿದ ಹಲ್ಲೆ, ಧಾಂದಲೆಗೆ  ದೇಶದ ಉದ್ದಗಕ್ಕೂ   ವ್ಯಾಪಕ ಟೀಕೆ ವ್ಯಕ್ತವಾಗಿ  , ಇದನ್ನು ಖಂಡಿಸಿ  ವಿದ್ಯಾರ್ಥಿಗಳ ಆಕ್ರೋಶ ಮಡುಗಟ್ಟಿದೆ.  'ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ದೇಶಾದ್ಯಂತ ವಿದ್ಯಾರ್ಥಿಗಳ ವಿರುದ್ಧ ಸಮರ ಸಾರಿ, ವಿಶ್ವವಿದ್ಯಾನಿಲಯಗಳನ್ನೂ  ಆಶಾಂತಿಯ  ಬೀಡನ್ನಾಗಿ ಮಾಡುತ್ತಿದೆ ಎಂದು ಜೆಎನ್ಯು ಮಾಜಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಟೀಕಿಸಿದ್ದಾರೆ.

ಇದು ಲಜ್ಜೆಗೇಡಿ ಸರ್ಕಾರ. ಮೊದಲು ಶುಲ್ಕ ಏರಿಸಿತು. ವಿದ್ಯಾರ್ಥಿಗಳು ಇದಕ್ಕೆ ಪ್ರತಿಭಟನೆ ವ್ಯಕ್ತಪಡಿಸಿದಾಗ ಪೊಲೀಸರಿಂದ ಹಲ್ಲೆ ಮಾಡಿಸಿತು. ವಿದ್ಯಾರ್ಥಿಗಳು ಕದಲದಿದ್ದಾಗ ಸರ್ಕಾರ ಗೂಂಡಾಗಳನ್ನು ಕಳುಹಿಸಿ ಹಲ್ಲೆ ಮಾಡಿಸಿ ಅಮಾಯಕರ ಬಲಿಗೆ ಹಾತೊರೆಯುತ್ತಿದೆ ಎಂದು ಅವರು  ಎಂದು ಟ್ವೀಟ್ ಮಾಡಿದ್ದಾರೆ.ದೊಣ್ಣೆ, ರಾಡ್ ಹಾಗೂ ಮತ್ತಿತರ ಮಾರಕ ಆಯುಧಗಳನ್ನು ಹೊಂದಿದ್ದ ಮುಸುಕುಧಾರಿಗಳು  ರಾತ್ರಿ ಕ್ಯಾಂಪಸ್ಗೆ ನುಗ್ಗಿ ನಡೆಸಿದ ದಾಂಧಲೆಯಲ್ಲಿ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಐಶ್ ಘೋಷ್ ಸೇರಿದಂತೆ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಕ್ಯಾಂಪಸ್ನಲ್ಲಿ ಸುಮಾರು ಎರಡು ಗಂಟೆ ಕೋಲಾಹಲ ನಡೆದಿತ್ತು.ಈ ಘಟನೆ ಖಂಡಿಸಿ ದೇಶದಾದ್ಯಂತ ವಿಧ್ಯಾರ್ಥಿಗಳ ಪ್ರತಿಭಟನೆ ಭುಲೆದ್ದಿದೆ.ಕಾಲೇಜು  ತರಗತಿ ಬಹಿಷ್ಕರಿಸಿ  ಅನೇಕ ಕಡೆ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ.