ಬೆಳಗಾವಿ : ಬಸ್ ಸಿಟ್‌ಗಾಗಿ ಜಗಳ ವಿಕೋಪಕ್ಕೆ ತಿರುಗಿ ಗಲಾಟೆ ನಡೆದಿದ್ದು, ಹೊರಟಿದ್ದ ಬಸ್ ತಡೆದು ಗಂಡ ಹಾಗೂ ಗರ್ಭೀಣಿ ಹೆಂಡತಿಗೆ ಅನ್ಯ ಕೋಮಿನ ಯುವಕರು ಗುಂಪೋಂದು ಮನಸೋ ಇಚ್ಚೆ ಹಲ್ಲೆ ಮಾಡಿ ಫರಾರಿಯಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಮಸರಗುಪ್ಪಿ ಗ್ರಾಮದ ಬಳಿ ಸೋಮವಾರ ರಾತ್ರಿ ನಡೆದಿರುವ ಬಗ್ಗೆ ವರದಯಾಗಿದ್ದು, ತನ್ನ ತಂದೆ ತಾಯಿಯನ್ನು ಹೊಡೆಯುತ್ತಿದ್ದಾರೆ ಎಂದು ಹಲ್ಲೆಗೆ ಒಳಗಾದ ದಂಪತಿಯ ಪುಟ್ಟ ಮಗಳು ಬಸ್ಸಿನಲ್ಲಿದ್ದವರ ಮುಂದೆ ಕೈಮುಗಿದು ಪರಿ ಪರಿಯಾಗಿ ಬೇಡಿಕೊಂಡ ಘಟನೆ ಕಂಡವರ ಮನ ಮರಗಿಸುವಂತೆ ಮಾಡಿದೆ.
ಸಂಕೇಶ್ವರ ಬಸ್ ನಿಲ್ದಾಣದಲ್ಲಿ ಗೋಕಾಕಗೆ ಹೊರಟಿದ್ದ ಬಸ್‌ನಲ್ಲಿ ಜನಜಂಗುಳಿ ಇತ್ತು. ಈ ಸಂದರ್ಭದಲ್ಲಿ ತನ್ನ ಪತ್ನಿ ಗರ್ಭೀಣಿ ಇದ್ದಾಳೆ ಎನ್ನುವ ಕಾರಣದಿಂದ ಸಿಟು ಹಿಡಿದಿದ್ದ ಪತಿ ಹಾಗೂ ಪಕ್ಕದಲ್ಲಿದ್ದ ಅನ್ಯ ಕೋಮಿನ ಮಹಿಳೆಯರು ಸಿಟಿಗಾಗಿ ತಂಟೆ ತೆಗೆದಿದ್ದರು. ಬಳಿಕ ಬಸ್ಸು ಹೊರಟು ಹುಕ್ಕೇರಿ ತಾಲೂಕಿನ ನೇರಲಿ ಮಸರಗುಪ್ಪಿ ಗ್ರಾಮದ ನಡುವೆ ಹೋಗುತ್ತಿದ್ದಂತೆ ಜಗಳ ವಿಕೋಪ ಹಾದಿ ಹಿಡಿಯಿತು. ಗೋಕಾಕ ತಾಲೂಕಿನ ಸಿಂಧಿಕುರಬೇಟ ಗ್ರಾಮದ ಅನ್ಯಕೋಮೀನ ಮಹಿಳೆಯರು ಮನೆಯವರಿಗೆ ಕರೆ ಬರಲು ಹೇಳಿದ್ದಾರೆ.
ಕರೆ ಮಾಡಿದ ಹಿನ್ನಲೆ ಸಿನಿಮೇಯ ರೀತಿಯಲ್ಲಿ ಬಂದು ಬಸ್ಸು ತಡೆದ ಸುಮಾರು 12ರಿಂದ 15 ಜನರಿದ್ದ ಅನ್ಯ ಕೋಮೀನ ಯುವಕರ ತಂಡವು ಬೈಕ್ ಮೇಲೆ ಬಂದು ಮಸರಗುಪ್ಪಿ ಕ್ರಾಸ್ ಬಳಿ ಬಸ್ ಅಡ್ಡಗಟ್ಟಿ ಗರ್ಭೀಣಿ ಮಹಿಳೆ ಹಾಗೂ ಪತಿಗೆ ಮನಸೋ ಇಚ್ಚೆ ಹೊಡೆದಿದ್ದಾರೆ. ನನ್ನ ತಂದೆ-ತಾಯಿಗೆ ತುಂಬಾ ಹೊಡೆದಿದ್ದಾರೆ ಎಂದು ಕಣ್ಣೀರು ಹಾಕುತ್ತದ ಬಸ್ಸಿನಲ್ಲಿ ಇದ್ದ ಪ್ರಯಾಣಿಕರ ಮುಂದೆ ಹಲ್ಲೆಗೆ ಒಳಗಾದ ದಂಪತಿಯ ಪುಟ್ಟ ಮಗಳು ಪರಿ ಪರಿಯಾಗಿ ಹೇಳುತ್ತ ತಿರುಗುತ್ತಿದ್ದ ಕಂಡವರ ಮನ ಕರಗುವಂತೆ ಮಾಡಿತು.
ಹುಕ್ಕೇರಿ ತಾಲೂಕಿನ ಮಸರಗುಪ್ಪಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಪತಿಯನ್ನು ಯುವಕರು ಹೊಡೆಯುತ್ತಿದ್ದಂತೆ ನನ್ನ ಪತಿಗೆ ಹೊಡೆಯ ಬೇಡಿ ಎಂದು ಬಿಡಿಸಲು ಹೋದ ಪತ್ನಿಗೂ ಹೊಡೆದಿದ್ದಾರೆ. ಆದರೆ ಸಿಟಿಗಾಗಿ ಬಸ್ಸಿನಲ್ಲಿ ಆದ ಒಂದು ಸಣ್ಣ ಜಗಳ ವಿಕೋಪಕ್ಕೆ ತಿರುಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಈ ಘಟನೆಯಲ್ಲಿ ಪರಪ್ಪ ಶಿವಪ್ಪ ನಾಸಿಪುಡಿ ಇತನ ಪತ್ನಿ ಸುನಿತಾ ಪರಪ್ಪ ನಾಶಿಪುಡಿ ಎಂಬವರ ಮೇಲೆ ಹಲ್ಲೆ ಮಾಡಲಾಗಿದೆ. ಪತಿ ಹಾಗೂ ಪತ್ನಿ ಇಬ್ಬರನ್ನು ಬಸ್ಸಿನಿಂದ ಕೆಳಗೆ ಎಳೆದು ಖದೀಮರು ಮನ ಬಂದಂತೆ ಹೊಡೆದಿದ್ದಾರೆ. ಪರಸಪ್ಪ ತನ್ನ ಪತ್ನಿ ಗರ್ಭೀಣಿ ಅಂತಾ ಹೇಳಿದರೂ ಲೆಕ್ಕಿಸದೆ ಮನಬಂದAತೆ ಹಲ್ಲೆ ಮಾಡಿದ್ದಾರೆ. ಸದ್ಯ ಸಂಕೇಶ್ವರ ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ.