ಸೇವೆ ಸಲ್ಲಿಸುತ್ತಿರುವಾಗಲೇ ಹೃದಯಾಘತಾದಿಂದ ಯೋಧ ನಿಧನ
A soldier died of a heart attack while serving
ನೇಸರಗಿ 03: ಸಮೀಪದ ದೇಶನೂರ ಗ್ರಾಮದ ವೀರಯೋಧ ಹವಾಲ್ದಾರ ರಾಜು ಮಹಾದೇವ ಕಡಕೋಳ (38) ಎಂಬ ವೀರಯೋಧ ಬೆಳಗಾವಿಯಲ್ಲಿ ಆರ್ಮಿ ಸೇವೆ ಸಲ್ಲಿಸುತ್ತಿರುವಾಗ ಸೋಮವಾರದಂದು ರಾತ್ರಿ ಹೃದಯಘಾತದಿಂದ ಮೃತಪಟ್ಟು ವೀರಮರಣ ಹೊಂದಿರುವ ಘಟನೆ ನಡೆದಿದೆ.
ಕಳೆದ 15 ವರ್ಷಗಳಿಂದ 115 ನೇ ಮರಾಠ ಏನಪೆಂಟ್ರಿ ಬಟಾಲಿಯನಲ್ಲಿ ಸೇವೆ ಸಲ್ಲಿಸಿದ್ದಾರೆ. ವೀರಯೋಧನ ಮೃತದೇಹವು ಮಂಗಳವಾರ ಮದ್ಯಾಹ್ನ 4-00 ಘಂಟೆಗೆ ಬಂದಾಗ ಕುಟುಂಬಸ್ಥರ, ದೇಶನೂರ ಗ್ರಾಮಸ್ಥರ ದುಃಖದಲ್ಲಿ ಮುಳಗಿತ್ತು. ಹನುಮಾನ ನಗರದಿಂದ ಆರಂಭವಾದ ವೀರಯೋಧನ ಮೃತದೇಹದ ಮೆರವಣಿಗೆ ಅಮರ ರಹೇ ರಾಜು ಕಡಕೋಳ ಅಮರ ರಹೇ ಎಂಬ ಘೋಷನೆಯೊಂದಿಗೆ ಕರ್ನಲ್ ವಿಕ್ರಂ ಶೆಂಗಾ ಸಂತಲಾ ನೇತೃತ್ವದಲ್ಲಿ ಮಿಲಿಟರಿ ಅಧಿಕಾರಿಗಳು, ಜವಾನ ಯೋಧರ ಪರೆಡ ಮೂಲಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ನಾನಾಸಾಹೇಬ ಪಾಟೀಲ, ದೇಶನೂರ, ಮೋಹರೆ, ನೇಸರಗಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಸದಸ್ಯರು, ನಿವೃತ್ತ ಸೈನಿಕರು, ಕಾರ್ಯನಿರತ ಸೈನಿಕರು, ಮೃತ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.ಮೃತರು ಪತ್ನಿ, ಸಹೋದರ, ಸಹೋದರಿಯರು ಅಪಾರ ಬಳಗವನ್ನು ಅಗಲಿದ್ದಾರೆ.
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ 