ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ 2024ನೇ ಸಾಲಿನ ಪಶಸ್ತಿ ಪ್ರದಾನ
ಮುಖ್ಯಮಂತ್ರಿ, ಸಚಿವರಿಂದ ಪ್ರಶಸ್ತಿ ಪುರಸ್ಕೃತರಿಗೆ ಗೌರವ
ಬೆಂಗಳೂರು 03: ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ವಿಕಲಚೇತನರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ 2024ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ನಿರ್ದೇಶನಾಲಯದ ವತಿಯಿಂದ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಈ ಬಾರಿ ವಿಕಲಚೇತನರ ಆರೈಕೆದಾರರಿಗೂ ಪ್ರಶಸ್ತಿ ಪ್ರದಾನ ಮಾಡಿದ್ದು ವಿಶೇಷ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ಅಯೋಜಿಸಿದ್ದ ವಿಕಲಚೇತನರ ದಿನಾಚರಣೆ - ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
*ರಾಜ್ಯ ಪ್ರಶಸ್ತಿ ಪುರಸ್ಕೃತರು*
ವಿಕಲಚೇತನರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ವ್ಯಕ್ತಿಗಳಿಗೆ ರಾಜ್ಯ ಪ್ರಶಸ್ತಿಯನ್ನು ನೀಡಲಾಗಿದ್ದು, ಈ ಬಾರಿ ಬೆಳಗಾವಿ ಜಿಲ್ಲೆ ಮೂಡಲಗಿ ತಾಲ್ಲೂಕಿನ ಗುಲಗಂಜಿ ಕೊಪ್ಪದ ಹನುಮಂತ ಹಾವಣ್ಣನವರ, ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಮರ್ತೂರ ಗಲ್ಲಿಯ ಸಬಿಯಾ ಬೇಗಂ, ದಾವಣಗೆರೆ ಜಿಲ್ಲೆಯ ಬ್ರಹ್ಮಸಮುದ್ರದ ಮಹಾಂತೇಶ ಬ್ರಹ್ಮ, ರಾಯಚೂರಿನ ಮಂಡಿಪೇಟೆಯ ಹೊನ್ನಪ್ಪ, ಮೈಸೂರಿನ ಚಾಮುಂಡಿಬೆಟ್ಟದ ಎನ್. ಶ್ರೀಧರ ದೀಕ್ಷಿತ್, ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಕೊಳೂರಿನ ಮಹೇಶ ರಾಮನಾಥ ತೋಟದ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.ಉಡುಪಿಯ ಹೆಗ್ಗುಂಜೆ ಗ್ರಾಮದ ಉಮೇಶ್ ಕುಂದರ್, ಬೆಂಗಳೂರು ಹೆಬ್ಬಗೋಡಿ ಸಮೀಪದ ಕಮ್ಮಸಂದ್ರದ ಅನಿಲ್ ಡಿ. ಅಲ್ಮೇಡ್ಲಾ, ರಾಯಚೂರು ಜಿಲ್ಲೆ ಲಿಂಗಸಗೂರಿನ ಹಿರೇಜಾವೂರಿನ ನಾಗರಾಜ ನಾಡಗೌಡರ, ಬೆಂಗಳೂರು ಗೊರಗುಂಟೆಪಾಳ್ಯದ ಮೇಘನಾ ಜೋಯಿಸ್, ಮೈಸೂರಿನ ಬೋಗಾದಿಯ ಡಿ. ಮಧುಸೂದನ, ಬೆಂಗಳೂರು ಆಂಧ್ರಹಳ್ಳಿ ಕಾಳಿಕಾನಗರದ ವಿ. ಮಂಜುಳಾ, ಬೆಳಗಾವಿ ಜಿಲ್ಲೆ ಬೈಲಹೊಂಗಲ ಗುಂಡ್ಲೂರ ಚಾಳದ ಫಕ್ಕಿರಗೌಡ ಚನ್ನಬಸಪ್ಪ ಪಾಟೀಲ್ ಹಾಗೂ ಗದಗ ಜಿಲ್ಲೆ ಮುಂಡರಗಿಯ ವಿಜಯಕುಮಾರ್ ಎಚ್. ಬಣಕಾರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
*ಅತ್ಯುತ್ತಮ ಸಂಸ್ಥೆಗಳಿಗೆ ಪ್ರಶಸ್ತಿ*
ವಿಕಲಚೇತನರ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಎರಡು ಅತ್ಯುತ್ತಮ ಸಂಸ್ಥೆಗಳಿಗೆ ಪ್ರಶಸ್ತಿ ಸಂದಿವೆ.ಬೆಂಗಳೂರು ಬಸವೇಶ್ವರನಗರದ ಆಶಾ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆಸಲ್ಪಡುವ ಅಕಾಡೆಮಿ ಫಾರ್ ಹ್ಯಾಂಡಿಕ್ಯಾಪ್ಸ್ ಅಂಡ್ ಆಟಿಸಂ ಮತ್ತು ಬಾಗಲಕೋಟೆ ಜಿಲ್ಲೆ ಹುನಗುಂದ ದ ಬಿಜಾಪುರ ಇಂಟಿಗ್ರೇಟೆಡ್ ರೂರಲ್ ಡೆವಲಪ್ ಮೆಂಟ್ ಸೊಸೈಟಿ ಈ ಪ್ರಶಸ್ತಿಗೆ ಭಾಜನವಾಗಿದೆ.*ಉತ್ತಮ ಸಂಸ್ಥೆಗಳಿಗೆ ಪ್ರಶಸ್ತಿ*ವಿಕಲಚೇತನರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ 8 ಉತ್ತಮ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರಿನ ಜೆ.ಪಿ.ನಗರದ ಕೆಎಸ್ ಆರ್ ಟಿಸಿ ಲೇಓಟ್ ನ ಈಶಾನ್ಯ ಇಂಡಿಯಾ ಫೌಂಡೇಶನ್, ಬೆಂಗಳೂರಿನ ಮಲ್ಪಿಪಲ್ ಸ್ಲೈರೋಸಿಸ್ ಸೊಸೈಟಿ ಆಫ್ ಇಂಡಿಯಾ, ಕೊಪ್ಪಳದ ಇನ್ನರ್ ವ್ಹೀಲ್ ಕ್ಲಬ್, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ದೇವಲಾಪುರದ ದಿ ಅಪಾಸ್ತೋಲಿಕ್ ಕಾರ್ಮೇಲ್ ವಿದ್ಯಾ ವಿಕಾಸ ಕೇಂದ್ರ ಈ ಪ್ರಶಸ್ತಿಗೆ ಅರ್ಹವಾಗಿವೆ.ವಿಜಯಗರ ಜಿಲ್ಲೆ ಹೊಸಪೇಟೆಯ ಸಾಧ್ಯ ಟ್ರಸ್ಟ್ ಫಾರ್ ಸೋಶಿಯಲ್ ಡೆವಲಪ್ ಮೆಂಟ್, ಮೈಸೂರಿನ ದ್ವಾರಕಾನಗರದ ಕರುಣಾಮಯಿ ಫೌಂಡೇಶನ್, ಬುದ್ಧಿಮಾಂದ್ಯ ಮಕ್ಕಳ ವಸತಿಶಾಲೆ ಹಾಗೂ ಚಿಕ್ಕಮಗಳೂರು ಜಿಲ್ಲೆ ಎನ್. ಆರ್. ಪುರ ತಾಲ್ಲೂಕಿನ ಚೆಟ್ಟಿ ಕುಡಿಗೆಯ ಸಂತ ಬೆನೆಡಿಕ್ಟ್ ಹೋ ಸಂಸ್ಥೆಗೆ ಪ್ರಶಸ್ತಿ ಸಂದಿದೆ.
*ವಿಶೇಷ ಸನ್ಮಾನ*
ಬೆಂಗಳೂರಿನ ಹೆಬ್ಭಾಳದ ವಿನಾಯಕನಗರದ ಸಮ ಫೌಂಡೇಶನ್ ವಿಶೇಷ ಸನ್ಮಾನಕ್ಕೆ ಪಾತ್ರವಾಗಿದೆ.
*ವಿಶೇಷ ಶಿಕ್ಷಕರಿಗೆ ಪ್ರಶಸ್ತಿ*ವಿಶೇಷ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಐದು ವಿಶೇಷ ಶಿಕ್ಷಕರಿಗೆ ಪ್ರಶಸ್ತಿ ಸಂದಿವೆ. ಬೀದರನ ಗುಮ್ಮೆ ಕಾಲೋನಿಯ ಅರವಿಂದ್, ಬೆಳಗಾವಿ ಕೋಟೆಯ ಆರಾಧನಾ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಗಜಾನನ, ಹಾಸನ ಜಿಲ್ಲೆ ಸಕಲೇಪುರದ ರೋಟರಿ ಶ್ರವಣದೋಷವುಳ್ಳ ಮಕ್ಕಳ ಶಾಲೆಯ ಪ್ರಾಂಶುಪಾಲ ಲೋಕೇಶ್ ಅವರು ಈ ಪಶಸ್ತಿಗೆ ಆಯ್ಕೆಯಾಗಿದ್ದಾರೆ.ಬೆಂಗಳೂರು ವೆಂಕಟೇಶಪುರದ ಜ್ಯೋತಿ ಸೇವಾ ಅಂಧ ಮಕ್ಕಳ ಶಾಲೆಯ ಅನ್ನಮ್ಮ ವರ್ಗೀಸ್ ಹಾಗೂ ಬೆಂಗಳೂರು ಅನೇಕಲ್ ತಾಲ್ಲೂಕಿನ ಹುಸ್ಕೂರಿನ ವಿಶೇಷ ಶಿಕ್ಷಕ ಕರೆಪ್ಪ ಹರಿಜನ ಅವರು ಈ ವಿಶೇಷ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
*ಆರೈಕೆದಾರರ ಭತ್ಯೆಗೆ ಆಯ್ಕೆಯಾದ ಐವರು ಫಲಾನುಭವಿಗಳು*
ಬೆಂಗಳೂರಿನ ಪಿಜಿ ಹಳ್ಳಿಯ ವಿಕಲಚೇತನ ಎಚ್. ಅನನ್ಯ ಅವರ ತಾಯಿ ಚೇತನಾ ಹರೀಶ್, ಬನ್ನೇರಘಟ್ಟದ ಪಿಳ್ಳಗನಹಳ್ಳಿಯ ಮಹಮ್ಮದ್ ಖದೀರ್ ಅವರ ತಾಯಿ ಅಮ್ರೀನ್, ಬೆಂಗಳೂರು ಮೋತಿನಗರದ ಪೂಜಾ ಅವರ ತಾಯಿ ತುಳಸಿ, ವಿಲ್ಸನ್ ಗಾರ್ಡ್‌ನ್ ನ ಪಿ.ಎಂ. ಕಾವ್ಯ ಅವರ ತಾಯಿ ಸುಶೀಲ ಹಾಗೂ ಬೆಂಗಳೂರು ಆಡುಗೋಡಿಯ ಎಚ್ .ಎಂ. ಗಾಯಿತ್ರಿಯವರ ಆರೈಕೆದಾರರಾದ ಎಚ್.ಎಂ. ನಿರ್ಮಲಾ ಅವರಿಗೆ ಭತ್ಯೆಯ ಚೆಕ್ ನ್ನು ಹಸ್ತಾಂತರಿಸಲಾಯಿತು.