ಪಗಡೆಯಾಟ ಭಾರತೀಯ ಪರಂಪರೆಯ ಪ್ರತೀಕ: ವೈದ್ಯ

Pagadeyata Symbol of Indian Heritage: Vaidya

ಯರಗಟ್ಟಿ 03: ‘ಪಗಡೆ ಆಟಕ್ಕೆ ರಾಷ್ಟ್ರೀಯ ಮಾನ್ಯತೆ ದೊರೆಯಬೇಕು, ಪಗಡೆ ಭಾರತೀಯ ಪರಂಪರೆಯ ಪ್ರತೀಕ’ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. 

ಸಮೀಪದ ಸತ್ತಿಗೇರಿ ಗ್ರಾಮದ ರಾಮಲಿಂಗೇಶ್ವರ, ವೀರಭದ್ರೇಶ್ವರ, ಮಲ್ಲಿಕಾರ್ಜುನ, ಮಳಿಮಲ್ಲೇಶ್ವರ ದೇವಸ್ಥಾನ ಕಾರ್ತಿಕೋತ್ಸವ ನಿಮಿತ್ಯ ರಾಜ್ಯ ಮಟ್ಟದ ಪಗಡೆಯಾಟದ ಉದ್ಘಾಟಕರಾಗಿ ಅವರು ಮಾತನಾಡಿದರು. 

ಮಹಾಭಾರತದ ಇತಿಹಾಸದಲ್ಲಿ ಪಗಡ್ಕ್ೃಯಾಟ್ಕ್ರದಿಂದಾಗಿ ಪಾಂಡವರು ಸಕಲ ಐಶ್ವರ್ಯಗಳನ್ನೂ ಕಳೆದುಕೊಳ್ಳುವ ಕತೆಯಿಂದ  ಜೂಜಿನ ಮಹತ್ವವನ್ನು ವರ್ಣಿಸಲಾಗಿದೆ. ದೇವಾನು ದೇವತ್ಕ್ೃಗಳು ಮನರಂಜನೆಗಾಗಿ ಸ್ಪರ್ಧಾ ಮನೋಭಾವ ಪ್ರದರ್ಶಿಸಲು ಪಗಡೆ ಆಟವಾಡುತ್ತ್ಕ್ರಿದ್ದರೆಂಬ ಸಂಗತಿಯನ್ನು ನಮ್ಮ ಪುರಾಣಗಳು ಸಾರುತ್ತವೆ, ಎಂದರು. ಪಗಡೆಯಾಟವೂ ಒಂದು ಕಲಾ ಪ್ರಕಾರವಾಗಿದ್ದು ಹಿರಿಯ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಶಾಸನ ನೀಡಬೇಕು ಎಂದು ಅವರು ಆಗ್ರಹಿಸಿದರು. 

ಸ್ಥಳೀಯ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಪಗಡೆಗೆ ಚಾಲನೆ ನೀಡಿದರು. 

ಸ್ವಾಮೀಜಿ ಸಾನಿದ್ಯ ವಹಿಸಿ ಮಾತನಾಡಿದರು. ಪಾಶ್ಚಿಮಾತ್ಯ ಕ್ರೀಡೆಗಳ ಪ್ರಭಾವದಿಂದಾಗಿ ದೇಸಿ ಕ್ರೀಡೆಗಳು ಜನಮಾನಸದಿಂದ ನೇಪಥ್ಯಕ್ಕೆ ಸರಿಯ್ಕ್ರುತ್ತಿದ್ದು ವಿಷಾದನೀಯ, ಕುಲಗೋಡ ತಮ್ಮಣ್ಣ ಪ್ರತಿಷ್ಠಾನ ಪರಂಪರೆ ಉಳಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು. ಬಿಜಾಪೂರ, ಬೆಳಗಾವಿ, ಬಾಗಲಕೋಟೆ ಹಾಗೂ ಮಹ್ಕ್ೃರಾಷ್ಟ್ರದಿಂದ ಹಾಗೂ ಯರಗಟ್ಟಿ-ಸವದತ್ತಿ ತಾಲೂಕುಗಳಿಂದ ಆಗಮಿಸಿದ್ದ 50 ಪಗಡೆ ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. 

ಗ್ರಾ. ಪಂ. ಉಪಾಧ್ಯಕ್ಷ ಗುರು ವಾಲಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ, ಪಿಕೆಪಿಎಸ್ ಅಧ್ಯಕ್ಷ ಲಕ್ಷ್ಮಣ ನಾಯ್ಕರ ಪಿಕೆಪಿಎಸ್ ಉಪಾಧ್ಯಕ್ಷ ಬಸವರಾಜ ಹೊಂಗಲ,  ಬಂಗಾರೆಪ್ಪ ಹರಳಿ, ಪ್ರಕಾಶ ವಾಲಿ, ಶ್ರೀಶೈಲ ಯರಗಣವಿ, ಶ್ರೀಶೈಲ ಸಂಗಪ್ಪನ್ನವರ, ಉಮೇಶ ಮಾಗುಂಡನ್ನವರ, ಚಂದ್ರ​‍್ಪ ಸಿ. ಹೊಸಮನಿ, ಗುರ​‍್ಪ ಶೆಟ್ಟರ, ಬಸವರಾಜ ಬಿರಾದಾರಾಪಾಟೀಲ, ಅಶೋಕ ರಾಯರ, ಯಲ್ಲಪ್ಪ ಮುನ್ಯಾಳ, ಈರ​‍್ಪ ಮಿರ್ಜಿ, ಶಿವಾನಂದ ನಿಂ. ಬಳಿಗಾರ, ಯಲ್ಲಪ್ಪ ನಾಗನ್ನವರ, ಗುರಯ್ಯ ಸಾಲಿಮಠ, ನಾಗಪ್ಪ ಪಾ. ಮಿಲ್ಲಾನಟ್ಟಿ, ಶ್ರೀಕಾಂತ ಕರಲಿಂಗಪ್ಪನವರ ಸೇರಿದಂತೆ ಅಪಾರ ಪಗಡೆ ಪ್ರಿಯರು, ಗ್ರಾಮಸ್ಥರು, ಗಣ್ಯರು ಉಪಸ್ಥಿತರಿದ್ದರು.