ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ, ಮುಂದಿನ ವರ್ಷ ‘ಫೇಸ್ ಟೂ ಫೇಸ್’ ತರಗತಿ ಇರುವುದಿಲ್ಲ

ಲಂಡನ್, ಮೇ ೨೦, ಕೋವಿಡ್ -೧೯ ಹಿನ್ನಲೆಯಲ್ಲಿ  ಮುಂದಿನ ಶೈಕ್ಷಣಿಕ ವರ್ಷದಲ್ಲಿ   ‘ಫೇಸ್ ಟೂ ಫೇಸ್’ ತರಗತಿಗಳು ಇರುವುದಿಲ್ಲ ಎಂದು ಕೇಂಬ್ರಿಡ್ಜ್  ವಿಶ್ವವಿದ್ಯಾಲಯ ದೃಢಪಡಿಸಿದೆ. ಅನ್ ಲೈನ್ ನಲ್ಲಿ  ವಿಡಿಯೋ ಕಾನ್ಫರೆನ್ಸ್ ಮೂಲಕ ಪಠ್ಯಾಂಶಗಳನ್ನು  ಬೋಧಿಸಲಾಗುವುದು  ಎಂದು ತಿಳಿಸಿದೆ.ಒಂದು ವೇಳೆ ಸಾಮಾಜಿಕ ಅಂತರ ಕಾಯ್ದು ಕೊಂಡು ತರಗತಿ ನಡೆಸಲು ಅವಕಾಶ ಕಲ್ಪಿಸದರೆ.  ಸಣ್ಣ ಸಣ್ಣ  ಬೋಧನಾ ಗುಂಪುಗಳಿಗೆ ತರಗತಿ ನಡೆಸುವ  ಅವಕಾಶಗಳಿವೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ. ಕೊರೊನಾ ಸಾಂಕ್ರಾಮಿಕದಿಂದಾಗಿ ಈ ಬಾರಿ ವಿಶ್ವವಿದ್ಯಾಲಯವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಸಾಮಾಜಿಕ ಅಂತರದ ಬಗ್ಗೆ  ಮಾರ್ಗಸೂಚಿಗಳು ಬದಲಾದ ಪಕ್ಷದಲ್ಲಿ  ವಿಶ್ವವಿದ್ಯಾಲಯ ಮುಖ್ಯಸ್ಥರು  ತಮ್ಮ ತೀರ್ಮಾನವನ್ನು  ಬದಲಾಯಿಸಿಕೊಳ್ಳುವ ಅವಕಾಶವಿದೆ ಎಂದು ಬಿಬಿಸಿ ವರದಿ ಮಾಡಿದೆ.ಕಳೆದ ಮಾರ್ಚ್ ನಲ್ಲಿ  ವಿಶ್ವವಿದ್ಯಾಲಯದ ಎಲ್ಲ ತರಗತಿಗಳನ್ನು ಅನ್ ಲೈನ್ ನಲ್ಲಿ ಮುಂದುವರಿಸಲಾಯಿತು. ಪರೀಕ್ಷೆಗಳನ್ನು ಕೂಡ ಆನ್ ಲೈನ್ ನಲ್ಲೇ  ನಡೆಸಲಾಯಿತು. ಮಾಂಚೆಸ್ಟರ್  ವಿಶ್ವವಿದ್ಯಾಲಯ ಕೂಡಾ ಇದೇ  ಮಾದರಿ  ಅನುಸರಿಸಿದೆ. ಮುಂದಿನ  ಶೈಕ್ಷಣಿಕ ವರ್ಷದಲ್ಲಿ  ಎಲ್ಲಾ ತರಗತಿಗಳನ್ನು  ಆನ್ ಲೈನ್  ಮೂಲಕ ಮಾತ್ರ  ಬೋಧಿಸಲಾಗುವುದು  ಎಂದು ತಿಳಿಸಿದೆ.