ಮಹಿಳೆಯರು ಆರ್ಥಿಕವಾಗಿ ಮುಂದುವರೆಯಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸಹಾಯ, ಸಹಕಾರ

ಮುದ್ದೇಬಿಹಾಳ 06: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮಹಿಳೆಯರಿಗೆ ಆರ್ಥಿಕ ಸಹಾಯ ನೀಡುವ ಮೂಲಕ  ಸಮಾಜದಲ್ಲಿ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿರುವುದರಿಂದ ಇಂದು  ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಲು ಸಹಕಾರಿಯಾಗಿದ್ದಾರೆ ಎಂದು ವಿಜಯಪುರ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು. 

ಪಟ್ಟಣದ  ಮದರಿ ಕಲ್ಯಾಣ ಮಂಟಪದಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ ಪ್ರಾಯೋಜಿತ ಪ್ರಗತಿಬಂಧು, ಸ್ವ-ಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮವನ್ನು ವಿಜಯಪುರ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಉದ್ಘಾಟಿಸಿದರು. 

ಈ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ನಾಗೇಶ ಎನ್ ಪಿ ಅವರು ಮಾತನಾಡಿ ಯೋಜನೆಯಡಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಧರ್ಮಸ್ಥಳ ಗ್ರಾಮಾಭೀವೃದ್ಧಿ ಯೋಜನೆಯವರು ಅವಶ್ಯಕತೆ ಇರುವಂತಹ ಸ್ಥಳಗಳಲ್ಲಿ ಶುದ್ಧಗಂಗಾಘಟಕ, ಶುದ್ಧ ಕುಡಿಯುವ ನೀರು, ಕೆರೆ ಹೋಳೆತೇವು ಕಾರ್ಯಕ್ರಮ ಕೆರೆ ಪುನಚ್ಛೇತನ ಕಾರ್ಯಕ್ರಮ, ತಾಲೂಕಿನಲ್ಲಿ 214 ವಿದ್ಯಾರ್ಥಿಗಳಲ್ಲಿ ಸುಮಾರು ರೂ. 19.86 ಲಕ್ಷ ಮೊತ್ತದ ಸುಜ್ಞಾನನಿಧಿ ಶಿಷ್ಯವೇತನ ದೇವಸ್ಥಾನಗಳಿಗೆ ಸುಮಾರು 18.50 ಲಕ್ಷ ಮೊತ್ತದ ಹಿಂದೂರುದ್ರಭೂಮಿ ಹಾಗೂ ಇತರೆ ಕಾಮಗಾರಿಗಳಿಗೆ ರೂ8.97 ಲಕ್ಷ ಮೊತ್ತ ಅನುದಾನ, ತಾಲೂಕಿನಲ್ಲಿ 218 ಫಾಲನುಭವಿಗಳು ಮಾಶಾಸನ ಪಡೆಯುತ್ತಿರುತ್ತಾರೆ. ಮಾಶಾಸನ ಪಡೆಯುವ ಫಲಾನುಭವಿಗಳಿಗೆ ಇಲ್ಲಿಯವರೆಗೆ ಒಟ್ಟು 7 ವಾತ್ಸಲ್ಯ ಮನೆರಚನೆ ಸುಮಾರು 2 ಲಕ್ಷ ಮೊತ್ತ ಅನುದಾನ, ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳಿಗೆ ಹಾಸಿಗೆ, ಹೊದಿಕೆ, ಪಾತ್ರೆ, ಚಾಪೆ ಸೀರೆ, ಆಹಾರ ಕಿಟ್ ನೀಡುತ್ತಿರುವುದು, ವಾಟರ್ ಬೆಡ್, ವೀಲ್ ಚೇರ್, ವಾಕಿಂಗ್ ಸ್ಟಿಕ್, ಇಲ್ಲಿಯವರೆಗೆ 258 ಜನರಿಗೆ ಸುಮಾರು 7.35 ಲಕ್ಷ ಮೊತ್ತದ ಸಲಕರಣೆ ವಿತರಣೆ ಮಾಡಲಾಗಿದೆ.  

ಡಾಽಽ ವೀರೇಶ ಪಾಟೀಲ ಮಾತನಾಡಿ ಆರ್ಥಿಕ, ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲೂ ಉನ್ನತ ಸಾದನೆಯ ಜೋತೆ ಸರಕಾರಗಳಿಗೆ ತಿರುಗಿ ನೋಡುವಂತ ಪ್ರೇರಣೆ ಕೆಲಸ ಮಾಡುತ್ತಿದ್ದಾರೆ ಎಂದರು. ಮಲ್ಲಿಕಾರ್ಜುನ ಮದರಿ ಇವರು ಯೋಜನೆಯವರು ಮಾಡಿದ ಎಲ್ಲಾ ಕೆಲಸಕಾರ್ಯಗಳು ಜನಪ್ರತಿನಿಧಿಗಳಿಗೆ, ಸಮಾಜಮುಖಿ ಕೆಲಸ ಮಾಡುತ್ತಿರುವ ಮಾದರಿಯಾಗಿದ್ದಾರೆ. ಜಿಲ್ಲಾ ನಿರ್ದೇಶಕರಾದ ಸಂತೋಷಕುಮಾರ ರೈ ಇವರು ಒಕ್ಕೂಟಗಳ ನಿರ್ವಹಣೆ ಬಗ್ಗೆ ಪಧಾಧಿಕಾರಿಗಳ ಜವಬ್ದಾರಿ ತಮ್ಮ ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ತರಬೇತಿಯಲ್ಲಿ ಮಾರ್ಗದರ್ಶನ ನೀಡಿದರು, ಸಬಾ ಕಾರ್ಯಕ್ರಮದ ಅಧ್ಯಕ್ಷರಾದ ಕೆ ವಾಯ್, ಬಿರಾದಾರ ಅಧ್ಯಕ್ಷರು, ಪವಾಡ ಬಸವೆಶ್ವರ ಟ್ರಸ್ಟ್‌, ಇವರು ನಮ್ಮ ಬಸರಕೊಡ ಗ್ರಾಮದ ಬಸವೇಶ್ವರ ದೇವಸ್ಥಾನದ ಅಭಿವೃದ್ಧಿ 3 ಲಕ್ಷ ಡಿಡಿ ಹಾಗೂ ಅನುದಾನಿತ ಶಾಲೆಗೆ ಕಳೆದ 2 ವರ್ಗದಿಂದ ಶಿಕ್ಷಕರನ್ನು ನೀಡಿದ್ದು, ವಿದ್ಯಾರ್ಥಿಗಳ ಶಿಷ್ಯ ವೇತನ ಹಿಂದೂರುದ್ರಭೂಮಿಗಳ ಅಬಿವೃದ್ಧಿಗೆ ಹಾಗೂ ಸಮಾಜಮುಖಿ ಕಾರ್ಯಗಳು ನಿರ್ವಹಿಸುತ್ತಿರುವುದರಿಮದ ನಮ್ಮ ತಾಲೂಕಿನ ಮಹಿಳೆಯರಿಗೆ ಮತ್ತು ಮೂಲ ಸೌಕರ್ಯಗಳಿಗೆ ಶಕ್ತಿ ತುಂಬುವತಾಂಗಿದೆ. ಬ್ಯಾಂಕ ಆಫ್ ಬರೊಡಾ ಪ್ರಂಬಧಕರಾದ  ಭವಾನಿಪ್ರಸಾದ ಎನ್ ಜಿ ರವರು ನಿಮ್ಮ ಸಂಘಗಳ ಎಲ್ಲಾ ಖಾತೆಗಳು ನಮ್ಮ ಬ್ಯಾಂಕಿನಲ್ಲಿ ಸಿಸಿ ಖಾತೆಗಳಾಗಿ ತೆರೆಯಲಾಗಿದೆ, ನಿಮ್ಮ ಎಲ್ಲಾ ಸಂಘದ ವ್ಯವಹಾರಗಳು ಸಿಸಿ ಖಾತೆಗಳ ಮುಖಾಂತರ ನಡೆಯುತ್ತದೆ ಎಂದು ಮಾತನಾಡಿದರು.  

ಈ ವೇಳೆ ಅಭ್ಯೂದಯ ಪಿಯು ಸಾಯನ್ಸ್‌ ಕಾಲೇಜಿನ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ, ಗಣ್ಯರಾದ ಶ್ರೀಶೈಲ ದೊಡಮನಿ, ಉಪಸ್ಥಿತರಿದ್ದರು. ಹಾಗೂ ವೀರೇಶ ಡವಳಗಿ, ಮೇಲ್ವಿಚಾರಕರಾದ ಕುಮಾರಿ ನೇತ್ರಾವತಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು ಮೇಲ್ವಿಚರಕಾರದ ನಿಂಗನಗೌಡ ಇವರು ವಂದಿಸಿದರು, ಕಾರ್ಯಕ್ರಮದಲ್ಲಿ ತಾಲೂಕಿನ 80 ಒಕ್ಕೂಟ ಪದಾದಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು, ಸೇವಾಪ್ರತಿನಿಧಿಗಳು, ಅಖಅ ಸೇವಾದರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.