ಆಸ್ತಿ ಖಾತೆ ಗಣಿಕೀಕೃತ ಕಡ್ಡಾಯ: ಮುಖ್ಯಾಧಿಕಾರಿ ಮೋಹನ ಜಾಧವ

Asset Account Computerized Compulsory: Headmaster Mohan Jadhav

ತಾಳಿಕೋಟಿ 28: ಸಾರ್ವಜನಿಕರು ತಮಗೆ ಸಂಬಂಧಿತ ಆಸ್ತಿಗಳ ಖಾತೆಗಳನ್ನು ಗಣಿಕೀಕೃತಗೊಳಿಸಿ ಕೊಳ್ಳುವುದು ಕಡ್ಡಾಯವಾಗಿದ್ದು ಪಟ್ಟಣದ ಎಲ್ಲ ಆಸ್ತಿ ಮಾಲೀಕರು ತಮ್ಮ ತಮ್ಮ ಆಸ್ತಿಗಳ ಖಾತೆಗಳನ್ನು ಗಣಿಕೀಕೃತ ಮಾಡಿಸಿಕೊಳ್ಳಬೇಕೆಂದು ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ ತಿಳಿಸಿದ್ದಾರೆ. 

ಸಿಟಿಎಸ್ ಆಸ್ತಿಯಾದಲ್ಲಿ ಸಿ.ಟಿ.ಎಸ್‌.ಉತಾರೆ, ಸಿಟಿಎಸ್ ನಕ್ಷೆ, ಮಾಲೀಕರ ಭಾವಚಿತ್ರ, ಮನೆಯ ಜಿಪಿಎಸ್ ಫೋಟೊ, ಓಟರ ಐಡಿ ಅಥವಾ ಪ್ಯಾನ್ ಕಾರ್ಡ, ಸನ್ 2024- 25 ನೇ ಸಾಲಿನ ಎಸ್‌.ಎಸ್‌.ಸನ್ 2024- 25 ರವರೆಗೆ ಭರಣಾ ಮಾಡಿದ ನೀರಿನ ಕರ, ಅರ್ಜಿ ನಮೂನೆ ಕಟ್ಟಡ ಪರವಾನಗಿ ಅಥವಾ ಪೂರ್ಣಗೊಂಡ ಪ್ರಮಾಣ ಪತ್ರ ಲಗತ್ತಿಸಬೇಕೆಂದು ಅವರು ತಿಳಿಸಿದ್ದಾರೆ.ಬಿನ್ ಶೇತ್ಕಿ ಆಸ್ತಿ ಆದಲ್ಲಿ ಎನ್‌ಎ ಆರ್ಡರ್ ಕ್ಟಾಪಿ, ಕೆಜಿಪಿ ಅಥವಾ ನಕ್ಷೆ, ಖರೀದಿ ಬಾಂಡ್ ಮನೆ ಅಥವಾ ಖಾಲಿ ಜಾಗೆ ಜಿಪಿಎಸ್ ಫೋಟೋ, ಮಾಲೀಕರ ಭಾವಚಿತ್ರ ವೋಟರ್ ಐಡಿ ಅಥವಾ ಪ್ಯಾನ್ ಕಾರ್ಡ್‌ ಸನ್ 2024- 25 ನೇ ಸಾಲಿನ ಎಸ್‌.ಎ.ಎಸ್‌. ನೀರಿನ ಕರ ಭರಣಾ ಮಾಡಿದ ಚಲನ, ಅರ್ಜಿ ನಮೂನೆ ಕಟ್ಟಡ ಪರವಾನಿಗೆ ಅಥವಾ ಪೂರ್ಣಗೊಂಡ ಪ್ರಮಾಣ ಲಗತ್ತಿಸಿ ಪುರಸಭೆ ಕಂದಾಯ ವಿಭಾಗದಲ್ಲಿ ಅರ್ಜಿ ಸಲ್ಲಿಸಿ ಗಣಕೀಕೃತ ಉತಾರೆ ಪಡದು ಕೊಳ್ಳಬೇಕೆಂದು ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.