ವಿಧಾನಸಭೆ ಲೋಕಸಭೆಗಳು ಅನುಭವ ಮಂಟಪಗಳಾಗಲಿ: ಕೌಜಲಗಿ

ಲೋಕದರ್ಶನ ವರದಿ

 ನವಲಗುಂದ 13: ವಚನ ಸಂಸ್ಕೃತಿಯು ಮುಖ್ಯವಾಗಿ ವೈದಿಕ ಪ್ರಣೀತ ಅಧಿಕಾರದ ಗುತ್ತಿಗೆಯನ್ನು ಪ್ರಶ್ನೆ ಮಾಡಿತು. ಅದಕ್ಕೆ ಪಯರ್ಾಯವಾದ ಒಂದು ಅಧಿಕಾರ ಕೇಂದ್ರವನ್ನು ಕಟ್ಟಲು ಪ್ರಯತ್ನಿಸಿತು. ಪ್ರಜಾಪ್ರಭುತ್ವಿಕರಣ ಪ್ರಕ್ರಿಯೆಗೆ ಚಾಲನೆ ನೀಡಿತು. ಸಮಾಜದ ಎಲ್ಲ ವರ್ಗಗಳ ಬಗ್ಗೆಯೂ ಅದು ಮಾತನಾಡಿತು ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ಕೆ.ಎಸ್. ಕೌಜಲಗಿ ಹೇಳಿದರು.

ಅವರು ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕನರ್ಾಟಕ ಜಾನಪದ ಪರಿಷತ್ತು, ಹುರಕಡ್ಲಿ ಅಜ್ಜ ಪುಣ್ಯಾಶ್ರಮದ ಸಹಯೋಗದಲ್ಲಿ ಹುರಕಡ್ಲಿ ಅಜ್ಜ ಪುಣ್ಯಾಶ್ರಮದಲ್ಲಿ ಜರುಗಿದ ಕಾಯಕಯೋಗಿ ಲಿಂ. ಕಲ್ಲನಗೌಡ ನಿಂಗನಗೌಡ ಜಂಗಲೆಪ್ಪಗೌಡ್ರ ಸ್ಮರಣಾರ್ಥ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ

ಮಾತನಾಡುತ್ತಿದ್ದರು.

 ಸಮಾಜದಲ್ಲಿ ವಿವಿಧ ವರ್ಗದ ಜನರು ಮಾತನಾಡತೊಡಗಿದ್ದೇ ವಚನ ಸಂಸ್ಕೃತಿಯ ರಾಜಕಾರಣದ ಬಹು ಮುಖ್ಯ ಸಾಧನೆಯಾಗಿದೆ. ಅಧಿಕಾರವು ಶಿಷ್ಟದಿಂದ ಪರಿಶಿಷ್ಟದ ಕಡೆಗೆ, ಪುರುಷ ಶಾಹಿಯಿಂದ ಲಿಂಗ ಸಂಬಂಧಿ ಸಮಾನತೆಯ ಕಡೆಗೆ ಹರಿಯುವಂತೆ ಮಾಡಿತು. ಅದು ಸಮಾಜದ ಅಂಚಿನಲ್ಲಿರುವ ವಂಚಿತರನ್ನು ತಬ್ಬಿಕೊಂಡಿತು. ದೇವಭಾಷೆಗೆ ಪ್ರತಿಯಾಗಿ ಕನ್ನಡಕ್ಕೆ ಮನ್ನಣೆ ನೀಡಿತು. ಪ್ರಜಾಪ್ರಭುತ್ವದ ನೆಲೆಯಲ್ಲಿ ಆಯ್ಕೆಗೊಂಡ ದೇಶವನ್ನು ಸುಭದ್ರವಾಗಿ ಒಯ್ಯುವ ನಮ್ಮ ಶಾಸಕರು, ಸಂಸದರು ಇರುವ ವಿಧಾನಸಭೆ, ಲೋಕಸಭೆಗಳು ಅನುಭವ ಮಂಟಪಗಳಾದರೆ ವಿಶ್ವದಲ್ಲಿ ನಮ್ಮ ದೇಶ ಮಾದರಿ ರಾಷ್ಟ್ರವಾಗುತ್ತದೆ ಎಂದು ಪುಣ್ಯದಂತೆ ಬಂದವರು ಉಪನ್ಯಾಸ ಮಾಲಿಕೆಯಡಿಯಲ್ಲಿ ಅವರು ಉಪನ್ಯಾಸ ನೀಡಿದರು.

                ಇಂಡಿಯನ್ ವಚರ್ುವಲ್ ವಿಶ್ವವಿದ್ಯಾಲಯ ಚೆನ್ನೈದಿಂದ ಸಮಾಜಸೇವೆಗಾಗಿ ನೀಡುವ ಗೌರವ ಡಾಕ್ಟರೇಟ್ ಪುರಸ್ಕೃತ ನವಲಗುಂದದ ಡಾ. ಅಬ್ದುಲ್ ರಜಾಕ್ ಎಂ. ನದಾಫ್ ಅವರನ್ನು ಉಭಯ ಪರಿಷತ್ತುಗಳು ಸನ್ಮಾನಿಸಿದವು.

                ಅಧ್ಯಕ್ಷತೆಯನ್ನು ಟಿ.ವ್ಹಿ. ಮಹಾಂತೇಶ ವಹಿಸಿದ್ದರು. ದತ್ತಿಗಳ ಪರಿಚಯವನ್ನು ಪ್ರೊ.ಸಿ.ಎಸ್. ಹೊಸಮಠ ಮಾಡಿದರು. ಅತಿಥಿ ಸ್ಥಾನದಿಂದ .ಬಿ. ಕೊಪ್ಪದ ಮಾತನಾಡಿದರು. ಪ್ರಾಸ್ತಾವಿಕವಾಗಿ ಬಿ.ಬಿ. ಹೊನ್ನಕುದುರಿ ಮಾತನಾಡಿದರು.

                ಎಲ್.ಬಿ. ಪಾಟೀಲ, ಎಸ್.ವ್ಹಿ. ಕಲ್ಲನಗೌಡರ, ಡಾ. ಬಿ.ವ್ಹಿ. ಹೊಸಕೇರಿ ಉಪಸ್ಥಿತರಿದ್ದರು.

                ಪ್ರಾರಂಭದಲ್ಲಿ ಅಡಿವೆಪ್ಪ ಕಮತರರಿಂದ ಪ್ರಾರ್ಥನೆ, ಸಂಜೀವಗೌಡ ಹಿರೇಗೌಡ್ರರಿಂದ ಸ್ವಾಗತ, ಶಿವಯೋಗಿ ಜಂಗಣ್ಣವರ ವಂದಣರ್ಾಪಣೆ ಜರುಗಿತು. ಪ್ರಕಾಶ ಹೂಗಾರ ಕಾರ್ಯಕ್ರಮ ನಿರೂಪಿಸಿದರು.