ಲೋಕದರ್ಶನ ವರದಿ
ಕುಮಟಾ: ಪ್ರೌಢ ಶಾಲೆ ಬಾಲಕಿ ಮೇಲೆ ಹಲ್ಲೆ ಮಾಡಿದ ಕೆಎಸ್ಆರ್ಟಿಸಿ ಬಸ್ ನಿರ್ವಾ ಹಕನ ವಿರುದ್ಧ ಆಕ್ರೋಶಗೊಂಡ ಬಾಲಕಿಯ ಪಾಲಕರು ಮತ್ತು ವನ್ನಳ್ಳಿ ಗ್ರಾಮಸ್ಥರು ಬುಧವಾರ ಸಂಜೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ನಿವರ್ಾಹಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ವನ್ನಳ್ಳಿಯ ನಿವಾಸಿ ಹಾಗೂ ಗುಡ್ಕಾಗಲ್ನ ತೌಹಿದ್ ಪ್ರೌಢ ಶಾಲೆ 8ನೇ ತರಗತಿಯ ವಿದ್ಯಾರ್ಥಿನಿ ಹಲ್ಲೆಗೊಳಗಾದವಳು. ಇವಳು ಪ್ರತಿನಿತ್ಯ ತನ್ನ ಸ್ನೇಹಿತರೊಂದಿಗೆ ವನ್ನಳ್ಳಿಯಿಂದ ಬಸ್ ಮೂಲಕ ಕುಮಟಾ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಅಘನಾಶಿನಿ ಬಸ್ ಮೂಲಕ ಗುಡ್ಕಾಗಲನ ಪ್ರೌಢ ಶಾಲೆಗೆ ತೆರಳುತ್ತಿದ್ದಳು. ಅದರಂತೆ ಬಾಲಕಿ ಬುಧವಾರ ಸಂಜೆ 5-30 ಗಂಟೆಗೆ ಕುಮಟಾ ಬಸ್ ನಿಲ್ದಾಣದಿಂದ ಹೊರಟ ವನ್ನಳ್ಳಿ ಬಸ್ ಮೂಲಕ ಎಂದಿನಂತೆ ಮನೆಗೆ ತೆರಳುತ್ತಿರುವಾಗ ಪಟ್ಟಣದ ಸುಭಾಸ್ ರಸ್ತೆಯಲ್ಲಿ ಚಲಿಸುತ್ತಿರುವಾಗ ನಿರ್ವಾಹಕ ಈ ಬಾಲಕಿ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಅವಮಾನಗೊಂಡ ಬಾಲಕಿ ಪಾಲಕಲರ ಬಳಿ ಹೇಳಿಕೊಂಡು ಅತ್ತಿದ್ದಾಳೆ. ಇದರಿಂದ ಆಕ್ರೋಶಗೊಂಡ ಬಾಲಕಿ ಪಾಲಕರು ಮತ್ತು ವನ್ನಳ್ಳಿ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ, ಬಸ್ನ್ನು ವನ್ನಳ್ಳಿಯಲ್ಲಿಯೇ ತಡೆದು ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ನಿರ್ವಾಹಕನನ್ನು ರಕ್ಷಣೆ ಮಾಡಿ, ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆಗೆ ಆಗಮಿಸಿದ ಗ್ರಾಮಸ್ಥರು ನಿರ್ವಾಹಕ ಬಾಲಕಿ ಮೇಲೆ ಹಲ್ಲೆ ಮಾಡಿರುವುದು ಕಾನೂನಿನ ವಿರುದ್ಧ ಅವರ ಮೇಲೆ ಸೂಕ್ತ ಕ್ರಮವಾಗಬೇಕು. ಇಲ್ಲವಾದರೆ ನಮ್ಮ ಕೈಗೆ ನೀಡಿ. ನಾವೇ ಪಾಠ ಕಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕಂಗಾಲಾದ ನಿರ್ವಾ ಹಕ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿರುವುದಲ್ಲದೆ ಇಂಥ ತಪ್ಪು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಎಚ್ಚರವಹಿಸುತ್ತೇನೆ ಎಂದು ಪರಿ ಪರಿಯಾಗಿ ಬೇಡಿಕೊಂಡಿದ್ದರಿಂದ ಗ್ರಾಮಸ್ಥರ ಕ್ಷಮೆ ನೀಡಿ, ಶಾಲಾ-ಕಾಲೇಜ್ ವಿದ್ಯಾಥರ್ಿಗಳಿಗೆ ಬಸ್ ನಿರ್ವಾಹಕರು ಕಿರುಕುಳ ನೀಡದಂತೆ ಎಚ್ಚರಿಸಿದ್ದಾರೆ.
ಈ ಪ್ರಕರಣ ಪೊಲೀಸ್ ಮೆಟ್ಟಿಲು ಏರುತ್ತಿದ್ದಂತೆ ಬಿಗುವಿನ ವಾತಾವರಣ ನಿಮರ್ಾಣವಾಗಿತ್ತು. ಹಾಗಾಗಿ ಠಾಣೆಗೆ ದೌಡಾಯಿಸಿದ ಕೆಎಸ್ಆರ್ಟಿಸಿ ಕುಮಟಾ ಘಟಕದ ವ್ಯವಸ್ಥಾಪಕಿ ಹಾಗೂ ಅಧಿಕಾರಿಗಳು ಆಗಮಿಸಿ, ರಾಜೀ ಸಂಧಾನ ಮಾಡಿಸಿದ್ದಾರೆ. ಪಾಸ್ ಇರುವ ಶಾಲಾ-ಕಾಲೇಜ್ ವಿದ್ಯಾರ್ಥಿ ಥರ್ಿಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸುವ ಭರಬಸೆ ನೀಡಿದ ಮೇಲೆ ಗ್ರಾಮಸ್ಥರು ರಾಜೀಗೆ ಒಪ್ಪಿಕೊಂಡು ಶಾಂತರಾಗಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.