ಅರಣ್ಯ ಇಲಾಖೆ ಸಿಬ್ಬಂದಿಯ ಮೇಲೆ ಹಲ್ಲೆ: 1 ವರ್ಷ ಸಾದಾ ಕಾರಾಗೃಹ ಶಿಕ್ಷೆ

Assault on forest department staff: 1 year simple imprisonment

ಕೆಳ ನ್ಯಾಯಾಲಯದ ತೀರ್ಪು : ಭಾಗಶಃ ಬದಲಾವಣೆ ಜೊತೆಗೆ ತೀರ್ಪು ಪುರಸ್ಕರಿಸಿದ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ  

ಕಾರವಾರ 17: ಮುಂಡಗೋಡ ಚೌಡಳ್ಳಿಯಲ್ಲಿ ಅರಣ್ಯ ಇಲಾಖೆಯ ವಸತಿ ಗೃಹಕ್ಕೆ ನುಗ್ಗಿ ಸಿಬ್ಬಂದಿಗೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಮೊದಲ ಮತ್ತು ಎರಡನೇ ಅಪರಾಧಿಗಳಿಗೆಕೆಳ ನ್ಯಾಯಾಲಯ ನೀಡಿದ ತೀರ​‍್ುನ್ನು ಭಾಗಶಃ ಬದಲಾವಣೆ ಜೊತೆಗೆ ಶಿರಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಪುರಸ್ಕರಿಸಿದ್ದಾರೆ.ಅಪರಾಧಿ ಗೋವಿಂದ ರಾಠೋಡ್ ಮಾಡಿದ ತೀರ​‍್ು ಪುನರ್ ಪರೀಶೀಲನಾ ಅರ್ಜಿಯನ್ನು ಹೆಚ್ಚವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ್ ಕಿಣಿ ತಿರಸ್ಕರಿಸಿದ್ದಾರೆ. ಮುಂಡಗೋಡ ಜೆಎಂಎಫ್ ಸಿ ನೀಡಿದ ತೀರ​‍್ುನ ದಂಡದ ಮೊತ್ತವನ್ನು ರೂ. 4500 ರಿಂದ 2500 ರೂ.ಗೆ ಇಳಿಸಿದ್ದಾರೆ.ಮೂರನೇ ಆರೋಪಿ ಘಟನೆ ನಡೆದಾಗ ಅಪ್ರಾಪ್ತ ನಿದ್ದ ಕಾರಣಕ್ಕೆ ಬಾಲ ನ್ಯಾಯಾಲಯಕ್ಕೆ ಮುಂದಿನ ವಿಚಾರಣೆ ಗೆ ಶಿಫಾರಸ್ಸು ಮಾಡಲಾಗಿದೆ.2016 ರಲ್ಲಿ ಮುಂಡಗೋಡ ಠಾಣೆಯಲ್ಲಿ 241/2016 ದಾಖಲಾಗಿತ್ತು. ಆರೋಪಿ ಗೋವಿಂದ ಹಾಗೂ ಆತನ ಪತ್ನಿ ಶಾರದಾ ಸೇರಿಅರಣ್ಯ ಸಿಬ್ಬಂದಿ ಅರುಣ್‌ ಕುಮಾರ್ ಸೀತಾರಾಂ ಕಾಶಿ ಹಾಗೂ ಆತನ ಪತ್ನಿ ಮೇಲೆ ಹಲ್ಲೆ ಮಾಡಿದ್ದರು . ಕರ್ತವ್ಯಕ್ಕೆ ಅಡ್ಡಪಡಿಸಿ, ಹಲ್ಲೆಮಾಡಿ ಗಾಯಗೊಳಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದರು. ಇವರಿಗೆ ಮುಂಡಗೋಡ ಜೆಎಂಎಫ್ ಸಿಯಲ್ಲಿ 1 ವರ್ಷ ಸದಾ ಸಜೆ, ದಂಡ 4500 ರೂ ಹಾಗೂ ದೂರುದಾರರಿಗೆ ತಲಾ ಹತ್ತು ಸಾವಿರ ಪರಿಹಾರ ನೀಡುವಂತೆ ತೀರ​‍್ು ನೀಡಿ ಆದೇಶಿಸಿತ್ತು. ಇದರ ವಿರುದ್ಧ ಅಪಾದಿತರು ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಕೆಳ ನ್ಯಾಯಾಲಯ ದ ತೀರ​‍್ುನ್ನು ಭಾಗಶಃ ಎತ್ತಿ ಹಿಡಿದಿದೆ. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಎಂ.ಮಳಗೀಕರ್ ವಾದಿಸಿದ್ದರು....