ಆಸಿಫ್‌ ಅತ್ಯಂತ ಕಠಿಣ ಬೌಲರ್‌: ಕೇವಿನ್ ಪೀಟರ್ಸನ್

ಲಂಡನ್‌, ಏ 13,ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಮೊಹಮ್ಮದ್ ಆಸಿಫ್ ತಮ್ಮ ವೃತ್ತಿ ಬದುಕಿನಲ್ಲಿ ಎದುರಿಸಿದ ಅತ್ಯಂತ ಕಠಿಣ ಬೌಲರ್‌ ಎಂದು ಇಂಗ್ಲೆಂಡ್‌ನ ಮಾಜಿ ಆಟಗಾರ ಕೆವಿನ್‌ ಪೀಟರ್ಸನ್‌ ಹೇಳಿದ್ದಾರೆ. ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಕೆವಿನ್, ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು, ತಾವು ಎದುರಿಸಿದ ಅತ್ಯಂತ ಕಠಿಣ ಬೌಲರ್‌ ಯಾರೆಂದು ಹೆಸರಿಸಿದ್ದಾರೆ. "ಆತ ಬ್ಯಾನ್‌ ಆದ ಬಳಿಕ ನನ್ನನ್ನು ಒಳಗೊಂಡಂತೆ ವಿಶ್ವದ ಹಲವು ಬ್ಯಾಟ್ಸ್‌ಮನ್‌ಗಳಿಗೆ ಕೊಂಚ ನಿರಾಳವನ್ನುಂಟು ಮಾಡಿತು. ನಾನು ಎದುರಿಸಿದ ಅತ್ಯುತ್ತಮ ಬೌಲರ್‌ ಆತ. ಮೊಹಮ್ಮದ್‌ ಆಸಿಫ್ ಬೌಲಿಂಗ್‌ ಎದುರು ಹೇಗೆ ಬ್ಯಾಟ್‌ ಮಾಡಬೇಕು ಎಂಬುದೇ ನನಗೆ ತಿಳಿಯುತ್ತಿರಲಿಲ್ಲ," ಎಂದು ಪಾಕ್‌ನ ಮಾಜಿ ವೇಗದ ಬೌಲರ್‌ ಬಗ್ಗೆ ಪೀಟರ್ಸನ್‌ ಶ್ಲಾಘಿಸಿದ್ದಾರೆ.