ಸಂಕೇಶ್ವರ 07: ಪಟ್ಟಣದ ಮಾಜಿ ಪುರಸಭೆ ಸದಸ್ಯ ಹಾಗೂ ಉದ್ಯಮಿ ಅಶೋಕ ನಾಗಪ್ಪ ಕರಜಗಿ(60), ಅವರು ಗುರುವಾರ ಬೆಳಿಗ್ಗೆ ನಿಧನ ಹೊಂದಿದರು.
ಮೃತರು ಪಟ್ಟಣದ ಪ್ರಖ್ಯಾತ ವೈದ್ಯ ಹಾಗೂ ಹಾಲಿ ಪುರಸಭೆ ಸದಸ್ಯ ಜಯಪ್ರಕಾಶ್ ಕರಜಗಿ ಅವರ ಸಹೋದರನಾಗಿದ್ದರು. ಮೃತರು ತಮ್ಮ ಹಿಂದೆ ತಂದೆ, ತಾಯಿ, ಇಬ್ಬರು ಸಹೋದರರು, ಸಹೋದರಿಯರು, ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಗುರುವಾರ ಸಂಜೆ ರುದ್ರ ಭೂಮಿಯಲ್ಲಿ ನೆರೆವೇರಿತು. ಸಾವಿರಾರು ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.