ಆಶಾ ಕಾರ್ಯಕರ್ತರು ಯಾವುದೇ ಪ್ರತಿಫಲಾಪೇಕ್ಷೆ ಬಯಸುವುದಿಲ್ಲ

ಲೋಕದರ್ಶನವರದಿ

ರಾಣೇಬೆನ್ನೂರು: ಜೂ.10: ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಕೋವಿಡ್-19 ವೈರಸ್ ಮಹಾಮಾರಿ ರೋಗವು ತನ್ನ ಕಬಂದ ಬಾಹು ಚಾಚಿದೆ.   ರಾಜ್ಯದಲ್ಲಿ ಅನಿರೀಕ್ಷಿತ ಬೆಳವಣಿಗೆಯಲ್ಲಿ ಸೊಂಕು ಹರಿಡಿದ್ದು, ವಾರಿಯರ್ಸ್ಗಳು ಯುದ್ಧೋಪಾದಿಯಲ್ಲಿ ತಮ್ಮ ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಕರ್ತವ್ಯವನ್ನು ದೇವರ ಸೇವೆಯೆಂದು ಭಾವಿಸಿ ಮಾಡಿದ್ದರಿಂದ ಅಧಿಕ ಪ್ರಮಾಣದಲ್ಲಿ ಸಾವು ನೋವು ಕಾಣದೇ, ನಾವೆಲ್ಲರೂ ಜಿಲ್ಲೆ ಮತ್ತು ತಾಲೂಕಿನಲ್ಲಿ ಶಾಂತಿ ನೆಮ್ಮದಿಯಿಂದ ಬದುಕನ್ನು ಸಾಗಿಸಲು ಸಾಧ್ಯವಾಗಿದೆ ಎಂದು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಬಿ.ಶೃತಿ ಹೇಳಿದರು.

ಅವರು ಬುಧವಾರ ತಾಲೂಕಿನ ಹಿರೇಬಿದರಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ ಭವನದಲ್ಲಿ ನಡೆದ ಆಶಾ, ಆರೋಗ್ಯ ಮತ್ತು ಪತ್ರಕರ್ತರು ಸೇರಿದಂತೆ ನಡೆದ ವಾರಿಯರ್ಸ್ಗಳಿಗೆ ಅಭಿನಂದನಾ ಸನ್ಮಾನ ಸಮಾರಂಭದಲ್ಲಿ ಗ್ರಾಮಸ್ಥರ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕರೋನಾ ವೈರಸ್ ಸೊಂಕು ರೋಗದಿಂದ ಜಿಲ್ಲೆ ಮತ್ತು ತಾಲೂಕಿನ ನಾಗರೀಕರು ಮುಕ್ತವಾಗಿದ್ದು, ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.   ಕೊನೆಯ ದಿವಸಗಳಲ್ಲಿ ಸೋಂಕಿತರು ಇರುವರೆಂಬ ಮಾಹಿತಿಯೊಂದಿಗೆ ಆರೋಗ್ಯ ಇಲಾಖೆ ಸಕರ್ಾರದ ಆದೇಶಾನುಸಾರ ಮುಂಜಾಗೃತಾ ಕ್ರಮವಾಗಿ ಆಶಾ ಮತ್ತು ಅಂಗನವಾಡಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂಧಿಗಳ ಮೂಲಕ ಪ್ರತಿಯೊಂದು ಗ್ರಾಮೀಣ ಪ್ರದೇಶಗಳಲ್ಲಿ ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವಾಗಿತ್ತು. 

 ಇಂದಿಗೂ ಸಹ ಮನೆ-ಮನೆಗೆ ತೆರಳಿ ಮಾಹಿತಿ ಪಡೆದು ಜನರಲ್ಲಿ ಜಾಗೃತಿಯುಂಟು ಮಾಡುವ ಕೆಲಸ ಆಶಾ ಕಾರ್ಯಕರ್ತರು ಮಾಡುತ್ತಿದ್ದೇವೆ.   ನಮ್ಮ ಪಾಲಿಗೆ ಬಂದಿರುವುದು ಭಗವಂತನ ಸೇವೆ ಎಂದು ಭಾವಿಸಿದ್ದೇವೆ.  ನಾಗರೀಕರು ಸಂಪೂರ್ಣ ಸಹಕಾರ ನೀಡಿದಾಗ ಮಾತ್ರ ಮುಕ್ತವಾಗಿರಲು ಸಾಧ್ಯವಾಗುವುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಹಕಾರಿ ಸಂಘದ ವ್ಯವಸ್ಥಾಪಕ ಗೋವಿಂದಪ್ಪ ಹನುಮಂತಪ್ಪ ಅಂಕಸಾಪುರ ಅವರು ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯ ನಡೆಯುವ ವಿಧ್ಯಮಾನಗನುಸಾರವಾಗಿ ಇಲ್ಲಿನ ನಾಗರೀಕರೊಂದಿಗೆ ಆಶಾ ಕಾರ್ಯಕರ್ತರು ಬೆರೆತು ಕೆಲಸ ಮಾಡಬೇಕಾಗುತ್ತದೆ. 

 ಕೊರೊನಾ ವೈರಸ್ ಸೋಂಕು ಭೀತಿಯಲ್ಲಿಯೂ ಸಹ ಅವರು ತಮ್ಮ ಜೀವದ ಹಂಗು ತೊರೆದು ಮನೆ-ಮಠ ಬಿಟ್ಟು ನಾಗರೀಕರ ಸೇವೆಯಲ್ಲಿ ತೊಡಗಿಕೊಳ್ಳುವುದು ಅಸಾಮಾನ್ಯ ಸಂಗತಿಯಾಗಿದೆ ಎಂದ ಅವರು ಇಂತಹವರ ಸೇವಾ ಕಾರ್ಯಕ್ಕೆ ನಾವೆಲ್ಲರೂ ಮೆಚ್ಚುಗೆಯ ಜೊತೆಗೆ ಗೌರವಿಸುವ ಕಾರ್ಯ ಮಾಡುವುದು ಮಾನವೀಯ ಗುಣಧರ್ಮವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಹಾಯಕ ಅರೋಗ್ಯಾಧಿಕಾರಿ ಕೆ.ಎಚ್.ಪ್ರಶಾಂತ, ಶಾರದಾ ದೇವೆಂದ್ರಪ್ಪ ಬಳ್ಳಾರಿ, ಮಮತಾ ಚಂದ್ರಪ್ಪ ಗೂರಪ್ಪನವರ, ಪವಿತ್ರಾ ದಿಬ್ಬದ, ಪತ್ರಕರ್ತ ಶಿವಯೋಗಿ ಮಹಾನುಭಾವಿಮಠ ಸೇರಿದಂತೆ ಆಶಾ ಮತ್ತು ಆರೋಗ್ಯ ಸಿಬ್ಬಂದಿ ಸೇರಿದಂತೆ ಮತ್ತಿತರರನ್ನು ಸನ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು. 

ಗ್ರಾಮ ಪಂಚಾಯತ್ ಅಧ್ಯಕ್ಷ ಸುಭಾಷ್ ಶಿವಪ್ಪ ಪೂಜಾರ ಅವರು ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ವೇದಿಕೆಯಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದಿಳ್ಳೆಪ್ಪ ಶೆದಿಯಪ್ಪ ಚಂದಾಪುರ, ಗ್ರಾಸಿಂ ಜನಕಲ್ಯಾಣ ಸಂಸ್ಥೆಯ ಗೋವಿಂದಪ್ಪ ಬಳ್ಳಾರಿ, ನಿದರ್ೇಶಕರಾದ ಮಂಜಪ್ಪ ಕುಮರಿ, ವೆಂಕಟೇಶ್ ಬಳ್ಳಾರಿ, ಹುಚ್ಚಪ್ಪ ಸಂಗಾನವರ, ಚಂದ್ರಪ್ಪ ಚಂದಾಪುರ, ಮಲ್ಲಪ್ಪ ಬಿರಾಳ, ಸಣ್ಣಿಂಗಪ್ಪ ಬಿರಾಳ, ಸುರೇಶ್ ನಿಟ್ಟೂರ, ಬಸಪ್ಪ ಹ್ಯಾಡ್ಲರ, ಸುರೇಶ್ ಕಂಚಿಕೇರಿ, ಮಂಜುನಾಥ ಸಿದ್ದಪ್ಪ ಚಲವಾದಿ, ಚನ್ನಬಸನಗೌಡ ಸಾಹುಕಾರ, ಸಣ್ಣಿಂಗಪ್ಪ ಅಂಕಸಾಪುರ, ಉಮೇಶ್ ಬಿರಾಳ ಸೇರಿದಂತೆ ಗ್ರಾಮದ ಅನೇಕ ಗಣ್ಯರು, ಮುಖಂಡರು ಸಹಕಾರಿ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.