ಮುಂಬೈ, ಆಗಸ್ಟ್ 24 ಬಾಲಿವುಡ್ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಆಲಿಯಾ ಭಟ್ ನಟಿಸುತ್ತಿರುವ 'ಇನ್ ಶಾ ಅಲ್ಲಾ' ಚಿತ್ರ ಹಾಲಿವುಡ್ ನ 'ಪ್ರೆಟಿ ವುಮೆನ್' ಚಿತ್ರದಿಂದ ಸ್ಫೂರ್ತಿ ಪಡೆದಿದೆ ಎನ್ನಲಾಗಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿದ್ದಾರೆ. 1990 ರಲ್ಲಿ ಬಿಡುಗಡೆಯಾದ ಹಾಲಿವುಡ್ ನ 'ಪ್ರೆಟಿ ವುಮನ್' ಚಿತ್ರದಿಂದ 'ಇನ್ ಶಾ ಅಲ್ಲಾ ' ಪ್ರಭಾವಿತಗೊಂಡಿದೆ ಎಂಬ ಮಾತುಗಳು ಬಿಟೌನ್ ನಲ್ಲಿ ಕೇಳಿಬರುತ್ತಿದೆ. ಈ ಚಿತ್ರವು ರಿಚರ್ಡ್ಗೆರೆ ಮತ್ತು ಜೂಲಿಯಾ ರಾಬಟ್ರ್ಸ ಅವರ ವೃತ್ತಿಜೀವನದ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದಾಗಿದ್ದು, ಹಾಲಿವುಡ್ ನ ಸಾರ್ವಕಾಲಿಕ ಅತ್ಯುತ್ತಮ ರೋಮ್ಯಾಂಟಿಕ್ ಚಿತ್ರ ಎನಿಸಿಕೊಂಡಿದೆ. 'ಇನ್ ಶಾ ಅಲ್ಲಾ' ಚಿತ್ರದಲ್ಲಿ ಆಲಿಯಾ 25 ವರ್ಷದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸಲ್ಮಾನ್, 40 ವರ್ಷದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.