ಶೊಯೆಬ್ ಅಕ್ತರ್ ಹೇಳಿರುವುದು ಸತ್ಯ, ಅವ್ಯವಸ್ಥೆಯಿಂದ ಹೊರಬರಲು ಸಹಾಯ ಅಗತ್ಯವಿದೆ: ದನೀಶ್ ಕನೇರಿಯಾ

ಲಾಹೋರ್, ಡಿ 27, ಕ್ರಿಕೆಟ್ ದಿನಗಳಲ್ಲಿ ಹಿಂದೂ ಎಂಬ ಕಾರಣಕ್ಕೆನಾನು ಸಾಕಷ್ಟು ತಾರತಮ್ಯಕ್ಕೆ ಒಳಗಾಗಿದ್ದೆ ಎಂದು ಪಾಕಿಸ್ತಾನ ತಂಡದ ಮಾಜಿ ವೇಗಿ ಶೊಯೆಬ್ ಅಕ್ತರ್‌ ಹೇಳಿರುವುದು ಸತ್ಯ. ಆದಾಗ್ಯೂ ಈ ವಿಷಯವನ್ನು ರಾಜಕೀಯಗೊಳಿಸಬೇಡಿ ಎಂದು ಮಾಜಿ ಲೆಗ್ ಸ್ಪಿನ್ನರ್ ದನೀಶ್ ಕನೇರಿಯಾ ಜನರಿಗೆ ಕೋರಿದ್ದಾರೆ."ನನ್ನ ಜೀವನ ಉತ್ತಮ ಸ್ಥಿತಿಯಲ್ಲಿ ಇಲ್ಲ. ಈ ಅವ್ಯವಸ್ಥೆಯಿಂದ ಹೊರಬರಲು ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಸಹಾಯ ಮಾಡಬೇಕೆಂದು," ಅವರು ಮನವಿ ಮಾಡಿಕೊಂಡಿದ್ದಾರೆ."ಇಂದು, ನಾನು ವೇಗದ ಬೌಲಿಂಗ್ ದಂತಕತೆ ಶೋಯೆಬ್ ಅಖ್ತರ್ ಅವರ ಸಂದರ್ಶನವನ್ನು ನೋಡಿದೆ. ಸತ್ಯವನ್ನು ಹೇಳಿದ್ದಕ್ಕಾಗಿ ನಾನು ಅವರಿಗೆ ವೈಯಕ್ತಿಕವಾಗಿ ಧನ್ಯವಾದ ಹೇಳುತ್ತೇನೆ. ಅದೇ ಸಮಯದಲ್ಲಿ, ಕ್ರಿಕೆಟಿಗನಾಗಿ ನನ್ನನ್ನು ತುಂಬು ಹೃದಯದಿಂದ ಬೆಂಬಲಿಸಿದ ಎಲ್ಲ ಆಟಗಾರರಿಗೆ ನಾನು ಆಭಾರಿಯಾಗಿದ್ದೇನೆ. ನನ್ನ ಧಾರ್ಮಿಕ ಸಂಬಂಧವನ್ನು ಲೆಕ್ಕಿಸದೆ ನನ್ನನ್ನು ಬೆಂಬಲಿಸಿದ ನಿರ್ವಾಹಕರು, ಮಾಧ್ಯಮಗಳಿಗೆ ಮತ್ತು ಪಾಕಿಸ್ತಾನದ ನಾಗರಿಕರು ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ, " ಎಂದು ಅವರು ಹೇಳಿದರು."ಹಿಂದೂ ಧರ್ಮದ ಹಿನ್ನೆಲೆಯಲ್ಲಿ ಕನೇರಿಯಾ ಅವರನ್ನು ಪಾಕಿಸ್ತಾನ ತಂಡದ ಭಾಗವಾಗಲು ಇಷ್ಟಪಡದ ಅನೇಕರು ಇದ್ದಾರೆ ಎಂದು ಪಿಟಿವಿ ಕಾರ್ಯಕ್ರಮದ "ಗೇಮ್ ಆನ್ ಹೈ" ಶೀರ್ಷಿಕೆಯ ಸಂದರ್ಶನವೊಂದರಲ್ಲಿ, ಅಖ್ತರ್   ಆರೋಪಿಸಿದ್ದರು. "ಕನೇರಿಯಾ ಉತ್ತಮ ಪ್ರದರ್ಶನದ ಹೊರತಾಗಿಯೂ ಅವರನ್ನು ತಂಡದ ಸದಸ್ಯರು ನಿರಂತರವಾಗಿ ಅವಮಾನಿಸುತ್ತಿದ್ದರು. ಕೆಲವು ಆಟಗಾರರು ಕನೇರಿಯಾ ಜೊತೆ ಆಹಾರ ಸೇವಿಸಲು ಸಹ ನಿರಾಕರಿಸಿದ್ದಾರೆ ಎಂದು ಅಖ್ತರ್ ಬಹಿರಂಗ ಪಡಿಸಿದ್ದರು.ದನೀಶ್ ಕನೇರಿಯಾ 2000 ರಿಂದ 2010ರವರೆಗೆ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದಾರೆ. ಅನಿಲ್ ದಲ್ಪತ್ ಬಳಿಕ ಪಾಕ್ ಪ್ರತಿನಿಧಿಸಿದ ಎರಡನೇ ಹಿಂದೂ ಆಟಗಾರರಾಗಿದ್ದಾರೆ. ದಲ್ಪತ್ ಅವರು ಕನೇರಿಯಾ ಅವರ ಚಿಕ್ಕಪ್ಪ ಅವರು 1980ರಲ್ಲಿ ತಂಡದ ವಿಕೆಟ್ ಕೀಪರ್ ಆಗಿದ್ದರು."ಸಮಾಜದಲ್ಲಿ ಕೆಲವು ಅಂಶಗಳು ವಿರೋಧಿಸುತ್ತಿದ್ದವು. ಆದಾಗ್ಯೂ, ನನ್ನನ್ನು ಪ್ರೀತಿಸುವ ಜನರ ವಿರುದ್ಧ ವಿರೋಧವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಾನು ಯಾವಾಗಲೂ ಜೀವನದಲ್ಲಿ ಸಕಾರಾತ್ಮಕವಾಗಿರುತ್ತೇನೆ ಮತ್ತು ಅಂತಹ ವಿರೋಧವನ್ನು ನಿರ್ಲಕ್ಷಿಸುತ್ತೇನೆ" ಎಂದು ಲೆಗ್ ಸ್ಪಿನ್ನರ್ ಹೇಳಿದರು.ಮ್ಯಾಚ್ ಫಿಕ್ಸಿಂಗ್ ಪ್ರಕರಣದಿಂದ 2012 ರಲ್ಲಿ ಕ್ರಿಕೆಟ್‌ನಿಂದ ಅಮಾನತುಗೊಂಡಿದ್ದ 39 ವರ್ಷದ ಕನೇರಿಯಾ, ತನ್ನ ಸಮಸ್ಯೆಗಳನ್ನು ಬಗೆಹರಿಸಲು ಪಾಕಿಸ್ತಾನದ ಅನೇಕ ವ್ಯಕ್ತಿಗಳನ್ನು ಸಂಪರ್ಕಿಸಿದ್ದರು. ಆದರೆ, ಅವರ ಪ್ರಯತ್ನಗಳು ವ್ಯರ್ಥವಾಯಿತು."ನನ್ನ ಜೀವನ ಉತ್ತಮ ಸ್ಥಿತಿಯಲ್ಲಿಲ್ಲ ಮತ್ತು ನನ್ನ ಸಮಸ್ಯೆಗಳನ್ನು ಪರಿಹರಿಸಲು ನಾನು ಪಾಕಿಸ್ತಾನ ಮತ್ತು ವಿಶ್ವದಾದ್ಯಂತದ ಅನೇಕ ವ್ಯಕ್ತಿಗಳನ್ನು ಸಂಪರ್ಕಿಸಿದೆ. ಆದರೂ, ನನಗೆ ಯಾವುದೇ ಸಹಾಯ ದೊರೆತಿಲ್ಲ. ಪಾಕಿಸ್ತಾನದ ಅನೇಕ ಕ್ರಿಕೆಟಿಗರ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಆದರೆ, ನನ್ನ ಸಮಸ್ಯೆ ಇನ್ನೂ ಬಗೆಹರಿದಿಲ್ಲ ," ಎಂದರು."ನಾನು ಕ್ರಿಕೆಟಿಗನಾಗಿ ಪಾಕಿಸ್ತಾನಕ್ಕೆ ಸಾಧ್ಯವಿರುವ ಎಲ್ಲವನ್ನೂ ನೀಡಿದ್ದೇನೆ ಮತ್ತು ಅದರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ.  ಅಗತ್ಯವಿರುವ ಸಮಯದಲ್ಲಿ ಪಾಕಿಸ್ತಾನದ ಜನರು ನನಗೆ ಸಹಾಯ ಮಾಡುತ್ತಾರೆ ಎಂದು ನಾನು ಸಕಾರಾತ್ಮಕವಾಗಿ ಹೇಳುತ್ತೇನೆ."ಅವ್ಯವಸ್ಥೆಯಿಂದ ನನ್ನನ್ನು ಪಾರು ಮಾಡಲು ಗೌರವಾನ್ವಿತ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನ ಮತ್ತು ಇತರ ದೇಶಗಳ ಕ್ರಿಕೆಟ್ ಆಡಳಿತಗಾರರು ಸೇರಿದಂತೆ ಪಾಕಿಸ್ತಾನದ ಎಲ್ಲ ಪ್ರಸಿದ್ಧ ಆಟಗಾರರ ಬೆಂಬಲ ನನಗೆ ಬೇಕು. ದಯವಿಟ್ಟು ಮುಂದೆ ಬಂದು ನನಗೆ ಸಹಾಯ ಮಾಡಿ," ಇದೇ ವೇಳೆ ಕನೇರಿಯಾ ಅಂಗಲಾಚಿದರು.ಪಾಕಿಸ್ತಾನ ಪರ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಕನೇರಿಯಾ ನಾಲ್ಕನೇ ಸ್ಥಾನದಲ್ಲಿದ್ದು, ವೇಗದ ಬೌಲರ್‌ಗಳಾದ ವಾಸಿಮ್ ಅಕ್ರಮ್, ವಕಾರ್ ಯೂನಿಸ್ ಮತ್ತು ಇಮ್ರಾನ್ ಖಾನ್ ಮಾತ್ರ ಇದ್ದಾರೆ. 62 ಟೆಸ್ಟ್‌ಗಳಲ್ಲಿ 261 ವಿಕೆಟ್‌ಗಳನ್ನು ಹೊಂದಿರುವ ಲೆಗ್ ಸ್ಪಿನ್ನರ್ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿದ್ದಾರೆ.