ನೌಕರರ ಸಮಸ್ಯೆ ಪರಿಹರಿಸುವುದಾಗಿ ಅರುಣ ಶಹಾಪೂರ ಭರವಸೆ

ಬೆಳಗಾವಿ 3: ಅಥಣಿ- ಕರ್ನಾಟಕ ರಾಜ್ಯ ವೃತ್ತಿ ಶಿಕ್ಷಣ ಇಲಾಖೆ ಜೆ.ಓ.ಸಿ.ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಲೀನ ವಂಚಿತ 530 ಜನ ಬೋಧಕ/ಬೋಧಕೇತರರನ್ನು ವಿಲೀನಾತಿಗೆ ಶೀಘ್ರ ವಾಗಿ ಪರಿಗಣಿಸಿ ವಿಲೀನ ಗೊಳಿಸಬೇಕೆಂದು ಕರ್ನಾಟಕ ರಾಜ್ಯ ವಿಲೀನ ವಂಚಿತ ನೌಕರರ ಹೋರಾಟ ಸಮೀತಿಯ ರಾಜ್ಯಾಧ್ಯಕ್ಷ ಡಾ.ರಾಮಣ್ಣಾ ದೊಡ್ಡನಿಂಗಪ್ಪಗೋಳ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಅವರು ಅಥಣಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪೂರ ಅವರಿಗೆ ಬೇಟಿಯಾಗಿ ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಯವರು ಶಿಕ್ಷಣ ಮಂತ್ರಿಯಾಗಿದ್ದಾಗ ಸರ್ಕಾರವೇ ಜೆ.ಓ.ಸಿ.ಯಲ್ಲಿರುವ 3746 ಜನ ಒಟ್ಟು ಸಿಬ್ಬಂದಿಯನ್ನು ಅವರವರ ವಿದ್ಯಾರ್ಹತೆಗನುಗುನವಾಗಿ ವಿಲೀನಾತಿ ನೀಡಬೇಕೆಂದು ದಿ.18-11-2010 ರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಅಂಗೀಕರಿಸಿತು. 

ಎಲ್ಲ ನೌಕರರಿಗೂ ವಿಲೀನ ನೀಡುವ ಉದ್ದೇಶಕ್ಕಾಗಿಯೇ ದಿನಾಂಕ : 07-05-2010 ರಂದು ಸರ್ಕಾರವು ಜೆ.ಓ.ಸಿ. ಕೋರ್ಸನ್ನು ಮುಚ್ಚಿತು. ಹೀಗಾಗಿ ಅಲ್ಲಿರುವ ನೌಕರರಿಗೆ ಸರ್ಕಾ ರದ ಬೇರೆ ಬೇರೆ ಇಲಾಖೆಗಳಲ್ಲಿ ವಿಲೀನಗೊಳಿಸುವುದೊಂದೆ ಮಾರ್ಗವಾಗಿತ್ತು. ಇಂತಹ ಸಂದರ್ಭದಲ್ಲಿ ಸಾರ್ವಶಿಕ್ಷಣ ಇಲಾಖೆಯ ನಿರ್ದೇಶಕರಾದ ಹರೀಶಗೌಡವರು ಎಲ್ಲ ಸಿಬ್ಬಂದಿಯನ್ನು ವಿಲೀನಗೊಳಿಸುವ ಕುರಿತು ಪ್ರಸ್ತಾವಣೆಯನ್ನು ಕೂಡ ಸಲ್ಲಿಸಿದ್ದರು. 

ಪ್ರತಿಯೊಂದು ಪತ್ರಿಕೆಗಳಲ್ಲಿಯೂ ಸರ್ಕಾರ 3746 ಜನ ಸಿಬ್ಬಂದಿಯ ವಿಲೀನಾತಿ ಕುರಿತು ಮಾತನಾಡುತ್ತಾ ಬಂದು 2011 ರಲ್ಲಿ ಕೇವಲ 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದವರಿಗೆ ಮಾತ್ರ ವಿಲೀನಾತಿ ನೀಡಿ 5 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದ ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸಿ ನೌಕರರ ಬದುಕಿಗೆ ಬಹುದೊಡ್ಡ ಹೊಡೆತ ಬಿದ್ದಂತಾಗಿದೆ ಎಂದರು. 

ಹೀಗಾಗಿ 530 ಜನ ಸಿಬ್ಬಂದಿ ಸರ್ಕಾರವೇ ವೃತ್ತಿ ಶಿಕ್ಷಣ ಇಲಾಖೆಯನ್ನು ಮುಚ್ಚಿರುವದರಿಂದ ಇತ್ತ ಅರೆಕಾಲಿಕ ಹುದ್ದೆಯಿಲ್ಲದೆ ಸರ್ಕರದಲ್ಲಿ ವಿಲೀನಾತಿಯನ್ನು ಹೊಂದದೆ ಅತಂತ್ರ ಸ್ಥಿತಿಯಲ್ಲಿ ಬದುಕುವಂತಾಗಿದೆ. ಸದರೀ ಸಿಬ್ಬಂದಿ ನೇಮಕಾತಿ ವಯೋಮಿತಿ ಕೂಡ ಮಿರಿದ್ದಾರೆ. ಬೇರೆ ಇಲಾಖೆಯಲ್ಲಿ ನೇಮಕಾತಿ ಹೊಂದುವ ಅವಕಾಶವೂ ಇಲ್ಲ. ಇಲಾಖೆಯನ್ನು ಸರ್ಕಾ ರವೇ ಮುಚ್ಚಿದ್ದರಿಂದ ಅಲ್ಲಿರುವ ಎಲ್ಲರಿಗೂ ವಿಲೀನಾತಿ ನೀಡುವುದು ನ್ಯಾಯೋಚಿತವಾಗಿದೆ. 

ಅವರ ಬೇಡಿಕೆಗಳು- ಹೈಯರ್ ಮತ್ತು ಫೈಯರ್ ಎನಿಸುವಂತೆ ಸೇವೆಯಿಂದ ಕೈಬಿಟ್ಟ ನಮ್ಮನ್ನು ತಕ್ಷಣ ವೃತ್ತಿ ಶಿಕ್ಷಣ ಅರೆಕಾಲಿಕ ನೌಕರರಾಗಿ ಸೇವೆಯಲ್ಲಿ ಮುಂದುವರೆಸಲು ತಕ್ಷಣದಿಂದಲೇ ಕ್ರಮ ಕೈಗೊಳ್ಳಬೇಕು. ನೀಡಿದ ಭರವಸೆಯಂತೆ ಎಲ್ಲ 3746 ನೌಕರರಲ್ಲಿ ವಿಲೀನ ವಂಚಿತರಾದ 530 ನೌಕರರಿಗೂ ಸಹ ಸೇವಾ ವಿಲೀನ ನೀಡಿ ಶಾಸನ ಮೂಲ ಉದ್ದೇಶವನ್ನು ಪೂರ್ಣಗೊಳಿಸಬೇಕು. 

ಸೇವಾ ಖಾಯಂಮಾತಿ ಅಥವಾ ಸೇವಾ ವಿಲೀನಾತಿಗೆ ಸಂಬಂಧಿಸಿದ ಪೂರ್ವ ಪ್ರಕರಣಗಳಲ್ಲಿ 2 ವರ್ಷಗಳ ಸೇವೆಯನ್ನು ಕನಿಷ್ಠ ಮಾನದಂಡವಾಗಿ ಪರಿಗಣಿಸಲಾದ ನಿದರ್ಶನಗಳಿದ್ದರೂ ಸಹ 5 ವರ್ಷಗಳ ಗರಿಷ್ಠ ಸೇವೆಯನ್ನು ನಿಯಮಗಳಲ್ಲಿ ಕೇಳಲಾಗಿದೆ. ವಿಲೀನ ಅರ್ಹತೆಗೆ 2 ವರ್ಷಗಳ ಸೇವೆಯನ್ನು ನಮಗೂ ಪರಿಗಣಿಸಿ ಪಾಸ್ಟ ಪ್ರಾಕ್ಟಿಸ್ಸೀನ ಮುಂದುವರಿಕೆಮಾಡಬೇಕು.

  ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಿಲೀನ ವಂಚಿತ ನೌಕರರ ಹೋರಾಟ ಸಮೀತಿಯ ರಾಜ್ಯಾಧ್ಯಕ್ಷ ಡಾ.ರಾಮಣ್ಣಾ ದೊಡ್ಡನಿಂಗಪ್ಪಗೋಳ, ಸಿಬ್ಬಂದಿಗಳಾದ ಗುರುರಾಜ ಜಾಧವ, ಎಸ್.ಪಿ.ಜಾಧವ ಮುಂತಾದವರು ಉಪಸ್ಥಿತರಿದ್ದರು.