ಮಗುವಿನ ಭೇಟಿಗೆ ಅವಕಾಶ: ಧರಣಿ ಕೈಬಿಟ್ಟ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್

ಬೆಂಗಳೂರು, ಫೆ.10 :    ಪತ್ನಿ ತನ್ನ ಮಕ್ಕಳನ್ನು ನೋಡಲು ಬಿಡುತ್ತಿಲ್ಲ ಎಂದು ಆರೋಪಿಸಿ ಆಕೆಯ ಮನೆ ಎದುರು ಭಾನುವಾರ ಅಹೋರಾತ್ರಿ ಧರಣಿ ಕುಳಿತಿದ್ದ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್  ಅವರನ್ನು ಡಿಸಿಪಿ ಭೀಮಶಂಕರ್ ಮನವೊಲಿಸಿ ರಾತ್ರಿ ತನ್ನ ಮನೆಗೆ ಕರೆದೊಯ್ದು ಬೆಳಗ್ಗೆ ಮಕ್ಕಳನ್ನು ನೋಡಲು ವ್ಯವಸ್ಥೆ ಮಾಡಿದರು. ಇದರಿಂದ ಅರುಣ್ ತನ್ನ ಧರಣಿ ಕೈಬಿಟ್ಟು ತನ್ನ ಕರ್ತವ್ಯದ ಸ್ಥಳಕ್ಕೆ ತೆರಳಿದ್ದಾರೆ.

ವಸಂತನಗರದಲ್ಲಿದ್ದ ಪತ್ನಿ ಅತಿ ಗಣ್ಯರ (ವಿವಿಐಪಿ)  ಭದ್ರತಾ ವಿಭಾಗದ ಡಿಸಿಪಿ ಇಲಕಿಯಾ ಅವರ ಮನೆ ಮುಂಭಾಗದ ಪುಟ್‌ಪಾತ್‌ನಲ್ಲಿ ಭಾನುವಾರ  ಸಂಜೆಯಿಂದ  ಕಲ್ಬುರ್ಗಿಯ ಅಂತರಿಕ ಭದ್ರತಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಅರುಣ್  ರಂಗರಾಜನ್ ಅವರು ಧರಣೀ ಕುಳಿತಿದ್ದರು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಡಿಸಿಪಿ ಭೀಮಶಂಕರ್ ಗೂಳೇದ್ ಹಾಗೂ  ಪತ್ನಿ ಧರಣಿ ಅಂತ್ಯಗೊಳಿಸಿ ತಮ್ಮ ಮನೆಗೆ ಕರೆದುಕೊಂಡು ಹೋಗಿ ಸೋಮವಾರ ಬೆಳಿಗ್ಗೆ  ಮಕ್ಕಳನ್ನು ನೋಡಲು ಅವಕಾಶ ಕಲ್ಪಿಸಿದ್ದಾರೆ. 

ಕಲ್ಬುರ್ಗಿಯಿಂದ ಬಂದಿದ್ದ ಅರುಣ್  ರಂಗರಾಜನ್  ಅವರಿಗೆ ಪತ್ನಿ ಇಲಕಿಯಾ ಕರುಣಾಕರನ್ ಅವರು ಮನೆಬಾಗಿಲು ತೆಗೆಯದೆ ಮಕ್ಕಳನ್ನು  ನೋಡಲು ಅವಕಾಶ ನೀಡಿರಲಿಲ್ಲ. ಇದರಿಂದ ಬೇಸತ್ತ ಎಸ್‌ಪಿ ಅರುಣ್ ರಂಗರಾಜನ್ ಅವರು ಪತ್ನಿಯ  ಮನೆ ಮುಂದೆಯೇ ಆಹೋರಾತ್ರಿ ಧರಣಿ ನಡೆಸಿದ್ದರು. 

ಇಲಕಿಯಾ ಹಾಗೂ ಅರುಣ್ ರಂಗರಾಜನ್ ಅವರು ಪರಸ್ಪರ  ಪ್ರೀತಿಸಿ ಮದುವೆಯಾಗಿದ್ದರೂ ಇಬ್ಬರ ನಡುವೆ ಸಾಮರಸ್ಯ ವಿಲ್ಲದಿದ್ದರಿಂದ ನ್ಯಾಯಾಲಯದ  ಮೆಟ್ಟಿಲೇರಿ ವಿಚ್ಚೇಧನ ಪಡೆದುಕೊಂಡು ದೂರವೇ ಉಳಿದಿದ್ದರು. ಇದೀಗ ಮಕ್ಕಳನ್ನು ಪತ್ನಿ ತೋರಿಸುತ್ತಿಲ್ಲ ಎಂದು ಆರೋಪಿಸಿ ಅರುಣ್ ಬೇಸರ ವ್ಯಕ್ತಪಡಿಸಿದ್ದಾರೆ.