ಪಾಟ್ನಾ,ಆ 31 : ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿಗೆ ಗೌರವ ಸಲ್ಲಿಸಲು ರಾಜ್ಯದಲ್ಲಿ ಅವರ ಪ್ರತಿಮೆ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಘೋಷಿಸಿದರು.
ಅರುಣ್ ಜೇಟ್ಲಿಯವರ ಜನ್ಮ ದಿನವನನ್ನು ಪ್ರತಿವರ್ಷ ರಾಜ್ಯ ಸಮಾರಂಭವಾಗಿ ಆಚರಿಸಲಾಗುವುದು ಎಂದು ಅವರು ತಿಳಿಸಿದರು.
ಅರುಣ್ ಜೇಟ್ಲಿ ಅವರು ಅಸಾಧಾರಣ,ಅದ್ಭುತ ವ್ಯಕ್ತಿ. ಅವರು ಕೇಂದ್ರದಲ್ಲಿ ವಿವಿಧ ಸಚಿವಾಲಯಗಳ ಜವಾಬ್ದಾರಿಯನ್ನು ಬಹಳ ಯಶಸ್ವಿಯಾಗಿ ನಿರ್ವಹಿಸಿದ್ದರು ಎಂದು ಗುಣಗಾನ ಮಾಡಿದ್ದಾರೆ.
ಕಳೆದ ವಾರ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣಕ್ಕೆ ಅರುಣ್ ಜೇಟ್ಲಿ ಹೆಸರಿಡಲು ನಿರ್ಧರಿಸಿತ್ತು.
ಅರುಣ್ ಜೇಟ್ಲಿ ಕಳೆದ 24 ರಂದು ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.