370ನೇ ವಿಧಿರದ್ದು:ಪಂಜಾಬ್ನಲ್ಲಿ ನಾಳೆ ಬೃಹತ್ ಪ್ರತಿಭಟನೆ

ಮೊಗಾ,ಸೆಪ್ಟೆಂಬರ್ 14  ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ ಕೇಂದ್ರದ ಕ್ರಮ ವಿರೋಧಿಸಿ,ಕಾಶ್ಮೀರದಲ್ಲಿನ ಪ್ರಸಕ್ತ ಸ್ಥಿತಿಯವಿರುದ್ಧ ವಿದ್ಯಾರ್ಥಿಗಳು, ರೈತರು ಸೇರಿದಂತೆ ಹನ್ನೊಂದು ಸಂಘಟನೆಗಳ ಕಾರ್ಯಕರ್ತರು ಭಾನುವಾರ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.  

ವಿವಿಧ ರೈತ, ವಿದ್ಯಾಥರ್ಿ ಮತ್ತು ಕೈಗಾರಿಕಾ ಒಕ್ಕೂಟಗಳ ಪ್ರತಿಭಟನಾಕಾರರು ಮೊದಲು ಮೊಹಾಲಿಯಲ್ಲಿ ಸಮಾವೇಶಗೊಂಡು ನಂತರ ರಾಜ್ಯ ರಾಜಧಾನಿ ಚಂಡೀಗಡದವರೆಗೆ ವರೆಗೆ ಮೆರವಣಿಗೆ ನಡೆಸಲಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್ ಕೊಕ್ರಿ ಶನಿವಾರ ತಿಳಿಸಿದ್ದಾರೆ. 

ಸುಪ್ರೀಂಕೋರ್ಟ್ ನಿರ್ದೇಶನದಂತೆ ಅವರು ಇದಕ್ಕೆ ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೆ ನೋಟಿಸ್ ಸಹ ನೀಡಲಾಗಿದೆ ಎಂದರು. 

370 ನೇ ವಿಧಿ ರದ್ದುಪಡಿಸಿದ ಸರಕಾರದ ಕ್ರಮ ಕಣಿವೆಯಲ್ಲಿನ ಸಮಸ್ಯೆ ಪರಿಹರಿಸಲು ಯಾವುದೇ ಸಹಾಯ ಮಾಡಲಿಲ್ಲ ಬದಲಾಗಿ ಸಾಮಾನ್ಯ ಜನಜೀವನ ಮತ್ತಷ್ಟು ದುರ್ಬಲಗೊಂಡಿದೆ ಎಂದು ಅವರು ದೂರಿದರು.