ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಿದರೆ ಕಲೆ ಬೆಳೆಯಲು ಸಾಧ್ಯ : ಎಚ್‌. ಸುರೇಶ

Art can grow if local artists are encouraged: H. Suresh

ಬೆಳಗಾವಿ 03: ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಿದರೆ ನಿಜವಾಗಿ ಕಲೆ ಉಳಿಯುತ್ತದೆ, ಬೆಳೆಯುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಎಚ್‌. ಸುರೇಶ ಹೇಳಿದ್ದಾರೆ.

ಬೆಳಗಾವಿಯ ಚನ್ನಮ್ಮನಗರದ ಆರ್ಕಿಡ್ಸ್‌ ಅಪಾರ್ಟ್‌ ಮೆಂಟ್ ನಲ್ಲಿ ಭಾನುವಾರ ಸಂಜೆ ಸ್ಪಂದನಾ ಮೆಲೋಡೀಸ್ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.  ನಮ್ಮ ಊರಲ್ಲೇ ಇದ್ದರೂ ನಮಗೆ ಎಷ್ಟೋ ಜನರ ಪ್ರತಿಭೆ ಗೊತ್ತಿರುವುದಿಲ್ಲ. ಅಂತವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು. ಈ ದಿಸೆಯಲ್ಲಿ ಸ್ಪಂದನಾ ಮೆಲೋಡೀಸ್ ಕಾರ್ಯ ಶ್ಲಾಘನೀಯವಾಗಿದೆ. ಕಳೆದ 7 ವರ್ಷದಲ್ಲಿ ಇಂತಹ ಬಹಳಷ್ಟು ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತ ಬಂದಿದೆ ಎಂದು ಅವರು ಹೇಳಿದರು. ಸಂಗಾತ ಹಲವು ರೋಗಗಳಿಗೆ ಮದ್ದು. ಅದರಲ್ಲೂ ಹಳೆಯ ಹಾಡುಗಳು ನಿಜವಾಗಿ ನಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುವ ಮೂಲಕ ಬದುಕಿನಲ್ಲಿ ನೆಮ್ಮದಿ ನೀಡುತ್ತವೆ ಎಂದು ಸುರೇಶ ಹೇಳಿದರು. ರವಿ ಬಜಂತ್ರಿ, ಶಾಂತಾ ಆಚಾರ್ಯ, ವಿಶ್ವನಾಥ ದೇಸಾಯಿ, ಭುಜಂಗ ಪಾಟೀಲ, ಮಹೇಶ ಕುಲಕರ್ಣಿ, ಕವಿತಾ ಜಾಧವ, ಶೃತಿ ಕಾಮತ್, ಶೃತಿ ಹಿರೇಮಠ, ದಕ್ಷಾ ಬಾಲೋಜಿ ಹಾಡುಗಳನ್ನು ಹಾಡಿದರು.  ಎಸ್ ಜೆ ಡಾನ್ಸ್‌ ಅಕಾಡೆಮಿ ಮಕ್ಕಳು ನೃತ್ಯ ಮಾಡಿದರು.  ರವಿ ಬಜಂತ್ರಿ ಅವರ ಕಾರ್ಯಕ್ರಮ ವೈವಿದ್ಯ ಕೂಡ ಪ್ರೇಕ್ಷಕರನ್ನು ರಂಜಿಸಿತು. ಶಾಂತಾ ಆಚಾರ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಳೆದ 7 ವರ್ಷದಲ್ಲಿ ಸ್ಪಂದನಾ ಮೆಲೋಡೀಸ್ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಈವರೆಗೆ 50ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಲಾಗಿದೆ ಎಂದರು.  

ಕುಮಾರಿ ಪೂರ್ಣಾ ಹೆಗಡೆ ಪ್ರಾರ್ಥನೆ ಹಾಡಿದಳು. ಶುಭಾ ಹೆಗಡೆ ಪರಿಚಯಿಸಿದರು. ಎಂ.ಜಿ.ರಾವ್, ಸುನೀತಾ ಸುರೇಶ್, ಎಂ.ಕೆ.ಹೆಗಡೆ, ಗುರುರಾಜ ಭಟ್, ಮನೋಜ್ ಮಾಲಗತ್ತೆ, ವೆಂಕಟೇಶ ಸರ್ನೋಬತ್, ರವಿ ಆಚಾರ್ಯ, ಮಂಗಲಾ ಧಾರವಾಡಕರ್, ಬೀನಾ ರಾವ್ ಮೊದಲಾದವರು ಉಪಸ್ಥಿತರಿದ್ದರು. ಸಂಗೀತಾ ಪಾಟೀಲ ಮತ್ತು ಪ್ರೀತಿ ಬೂರ್ಸೆ ನಿರೂಪಿಸಿದರು.