ಕೊಪ್ಪಳಕ್ಕೆ ಕನ್ನಡ ಜ್ಯೋತಿ ರಥಯಾತ್ರೆ ಆಗಮನ: ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ

ಕೊಪ್ಪಳ 19: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡ ಜ್ಯೋತಿ ರಥ ಯಾತ್ರೆಯು ಅಕ್ಟೋಬರ್ 19ರಂದು ಕೊಪ್ಪಳ ಜಿಲ್ಲೆಯಾದ್ಯಾಂತ ಸಂಚರಿಸಲು ಕೊಪ್ಪಳಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಶುಕ್ರವಾರದಂದು ಜಿಲ್ಲಾಡಳಿತದಿಂದ ಕನ್ನಡ ರಥವನ್ನು ಬರಮಾಡಿಕೊಂಡು ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು. 

ಜಿಲ್ಲಾಡಳಿತ ಭವನದ ಆವರಣದಲ್ಲಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ನಲೀನ ಅತುಲ್ ಅವರು ನಾಡ ದೇವತೆ ತಾಯಿ ಭುವನೇಶ್ವರಿ ಪುತಳಿಗೆ ಮಾಲಾರೆ​‍್ಣ ಹಾಗೂ ಪುಷ​‍್ಾರೆ್ಪನ ಮಾಡಿದರು. ಬಳಿಕ ಕನ್ನಡ ಬಾವುಟ ಹಿಡಿದು ರಥ ಯಾತ್ರೆಗೆ ಚಾಲನೆ ನೀಡಿದರು. 

ಇದೆ ವೇಳೆ ತಾಯಿ ಭುವನೇಶ್ವರಿಗೆ ಜೈ, ನಾಡ ದೇವತೆಗೆ ಜೈ, ಕರುನಾಡಿಗೆ ಜೈ, ಕನ್ನಡ ಸಾಹಿತ್ಯ ಪರಿಷತ್ತಿಗೆ ಜೈ ಸೇರಿದಂತೆ ಕನ್ನಡ ಹಾಗೂ ಕನ್ನಡ ನಾಡಿನ ಪರ ಘೋಷಣೆಗಳು ಮೊಳಗಿದವು. ಡೊಳ್ಳು ಕುಣಿತವು ಕನ್ನಡ ಜ್ಯೋತಿ ರಥ ಯಾತ್ರೆಗೆ ಮೆರಗು ಹೆಚ್ಚಿಸಿತು. 

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ ಮರಬನಳ್ಳಿ, ಕೊಪ್ಪಳ ತಹಶಿಲ್ದಾರರಾದ ವಿಠ್ಠಲ ಚೌಗಲಾ, ತಾ.ಪಂ ದುಂಡಪ್ಪ ದುರಾದಿ, ಸಾಹಿತಿಗಳಾದ ಡಾ ಮಹಾಂತೇಶ್ ಮಲ್ಲನಗೌಡರ್ ಸೇರಿದಂತೆ ಕಸಾಪ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.