ಕಾಂಗ್ರೆಸ್ ಅಧಿವೇಶನಕ್ಕೆ ಕುಡಚಿಯಿಂದ 217 ವಾಹನಗಳ ವ್ಯವಸ್ಥೆ

Arrangement of 217 vehicles from Kudachi for Congress Adhiveshan

ಹಾರೂಗೇರಿ 23: ಬೆಳಗಾವಿಯಲ್ಲಿ 1924ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಂಭ್ರಮಕ್ಕೆ ಕುಡಚಿ ವಿಧಾನಸಭೆ ಮತಕ್ಷೇತ್ರದಲ್ಲಿ 217 ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ಸಹಸ್ರಾರು ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು. 

ಪಟ್ಟಣ ಸಮೀಪದ ಬೀರ​‍್ಪನಮಡ್ಡಿಯಲ್ಲಿರುವ ಶಾಸಕರ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಡಿ.27ರಂದು ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವದ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. 

ಬೆಳಗಾವಿಯಲ್ಲಿ ಡಿ.26-27 ರಂದು ನಡೆಯಲಿರುವ ಬೃಹತ್ ಕಾಂಗ್ರೆಸ್ ಸಮಾವೇಶವು ಅಭೂತಪೂರ್ವ ಮತ್ತು ಐತಿಹಾಸಿಕವಾಗಿದೆ. ಕಾರ್ಯಕರ್ತರನ್ನು ಒಗ್ಗೂಡಿಸಿ, ಬೂತ್ ಮಟ್ಟದಿಂದ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು. ಸಮಾವೇಶದ ಯಶಸ್ಸಿಗೆ ಎಲ್ಲ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕೆಂದು ಹೇಳಿದ ಅವರು ಕುಡಚಿ ಮತಕ್ಷೇತ್ರದ ರೈತರ ಸಮಸ್ಯೆಗಳ ಬಗ್ಗೆ ಶಾಸಕಾಂಗ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದು, ರೈತರ ಕಬ್ಬು ಸಗಣೆಗೆ ತೋಟಪಟ್ಟಿಗಳ ರಸ್ತೆಗಳ ದುರಸ್ಥಿಗೆ ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ತಮ್ಮಣ್ಣವರ ತಿಳಿಸಿದರು. 

ಕಾಂಗ್ರೆಸ್ ಮುಖಂಡರಾದ ಡಾ.ಸಿ.ಬಿ.ಕುಲಿಗೋಡ, ಕುಡಚಿ ಬ್ಲಾಕ್ ಅಧ್ಯಕ್ಷ ಪ್ರದೀಪ ಹಾಲ್ಗುಣಿ, ಎನ್‌.ಎಸ್‌.ಚೌಗಲಾ, ಧನಪಾಲ ಶಿರಹಟ್ಟಿ, ವರ್ಧಮಾನ ಬದ್ನಿಕಾಯಿ, ಸಾಹೇಬಲಾಲ ರೋಹಿಲೆ, ಅಲ್ಲಾವುದ್ದಿನ ರೋಹಿಲೆ, ಬಸನಗೌಡ ಪಾಟೀಲ, ರವಿಶಂಕರ ನರಗಟ್ಟಿ, ರಾಮಣ್ಣ ಶಿರಹಟ್ಟಿ, ಪರ​‍್ಪ ಖೇತಗೌಡರ, ಹನಮಂತಸಾಬಗೌಡ ನಾಯಿಕ, ಶ್ರೀಶೈಲ ಅಂಗಡಿ, ಇಲಾಯಿ ಕಾಗವಾಡೆ, ಗಿರೆಪ್ಪ ಬಳಿಗಾರ, ತಮ್ಮನಗೌಡ ಪಾಟೀಲ, ನಿಜಗುಣಿ ಪಾಟೀಲ, ವಿಠ್ಠಲ ಭಂಡಗಾರ, ಸುಭಾಸ ದಳವಾಯಿ, ಭೀಮು ಪಾರ್ಥನಳ್ಳಿ, ರವಿ ಮುರಗಣ್ಣವರ, ಈಶ್ವರ ಗಿಣಿಮುಗೆ, ವಿನೋದ ದರುರೆ, ಕಲ್ಮೇಶ ಕಾಂಬಳೆ, ರವಿ ಕರೋಶಿ, ವರ್ಧಮಾನ ಶಿರಹಟ್ಟಿ, ಭೀಮು ಚೌಗಲಾ ಹಾಗೂ ಕುಡಚಿ ಮತಕ್ಷೇತ್ರದ 32 ಗ್ರಾಮಗಳ ಕಾರ್ಯಕರ್ತರು, ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.