ಸೈನ್ಯ, ಮಾಧ್ಯಮ ರಂಗ, ಕೃಷಿ ರಂಗ ಈ ಕ್ಷೇತ್ರಗಳು ಸಮಾಜದ ಅಭಿವೃದ್ಧಿಗಾಗಿ ಪ್ರಮುಖ ಪಾತ್ರ ವಹಿಸುತ್ತವೆ : ಶಿವಯೋಗಿ ಶಿವಾಚಾರ್ಯ
ಹಾವೇರಿ 22: ದೇಶ ಕಾಯುವ ಕಾಯಕ ಮಾಡುವ ಸೈನ್ಯ,ದೇಶದಲ್ಲಿ ನಡೆಯುವ ಘಟನೆಗಳನ್ನು ವರದಿ ಮಾಡುವ ಮಾಧ್ಯಮ ರಂಗ ಹಾಗೂ ಪ್ರತಿಯೊಂದು ಜೀವಿಗೂ ಅನ್ನ,ಆಹಾರ ಪೂರೈಸುವ ಕೃಷಿ ರಂಗ ಈ ಮೂರು ಕ್ಷೇತ್ರಗಳು ಸಮಾಜದ ಅಭಿವೃದ್ಧಿಗಾಗಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕರಜಗಿ ಗೌರಿಮಠದ ಪೂಜ್ಯ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ನಗರದ ಮಲ್ಲಿಕಾರ್ಜುನ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಸಂಭ್ರಮ-2024-25ರ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಪತ್ರಕರ್ತರು,ಮಾಧ್ಯಮ ಮಿತ್ರರು ಹಾಗೂ ವೈದ್ಯರನ್ನು ಸನ್ಮಾನಿಸಿ ಮಾತನಾಡಿದರು.
ಪತ್ರಿಕಾ ಮಾಧ್ಯಮ ಸಮಾಜದ ಅಂಕು-ಡೊಂಕು ತಿದ್ದುವುದರ ಜೊತೆಗೆ ಆರೋಗ್ಯಪೂರ್ಣ ಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಪತ್ರಕರ್ತನ ಲೇಖನಿ ಖಡ್ಗಕ್ಕಿಂತ ಹರಿತವಾಗಿರುತ್ತದೆ.ಅದೇ ರೀತಿ ವೈದ್ಯರು ಜನರ ಅರೋಗ್ಯ ಕಾಪಾಡುತ್ತಾರೆ.ವೇದವು ವೈದ್ಯೋ ನಾರಾಯಣೋ ಹರಿ ಎಂದು ಕರೆದಿದೆ.ಇಂದಿನ ಆಧುನಿಕ ಯುಗದಲ್ಲಿ ಸಂಸ್ಕಾರ, ಸಂಸ್ಕೃತಿ, ಮೌಲ್ಯ ಕಡಿಮೆಯಾಗುತ್ತಿದೆ.ಗುಣಾತ್ಮಕ ಶಿಕ್ಷಣ ಕೊಡುವ ಮೂಲಕ ಸುಂದರ ಸಮಾಜ ನಿರ್ಮಿಸಲು ಮುಂದಾಗಬೇಕು ಎಂದರು.
ಹಿರಿಯ ಸಾಹಿತಿ,ಪತ್ರಕರ್ತ ಮಹಾಂತೇಶ ಅಂಗೂರ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳ ವೈಜ್ಞಾನಿಕ ಮನೋಭಾವನೆ ಹೆಚ್ಚಿಸುತ್ತದೆ.ಮುದ್ದು ಮಕ್ಕಳು ವಿವಿದ ಬಗೆಯ ವಿಶೇಷ ಮಾದರಿಗಳನ್ನು ಚೆನ್ನಾಗಿ ಮಾಡಿದ್ದಾರೆ ಎಂದ ಅವರು ಅನುಭವಿ ಶಿಕ್ಷಕರೊಂದಿಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕಾರ ಕೊಡುವ ಮೂಲಕ ಶಾಲೆಯ ಸಮಗ್ರ ಅಭಿವೃದ್ದಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ.ನಮ್ಮೆಲ್ಲರನ್ನು ಗೌರವಿಸಿದ್ದು ಸಂತಸ ತಂದಿದೆ ಎಂದರು.
ಡಾ.ಸಂಗಮೇಶ ದೊಡ್ಡಗೌಡ್ರ ಮಾತನಾಡಿ ಶ್ರೀಗಳು ಸುಂದವಾದ ಕಟ್ಟಡದ ಜೊತೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಮಕ್ಕಳು ಅದ್ಬುತವಾಗಿ ಮಾಡಿದ ಇಂದಿನ ವಿಜ್ಞಾನ ವಸ್ತು ಪ್ರದರ್ಶನ ನೋಡಿ ತುಂಬಾ ಸಂತಸವಾಗಿದೆ ಎಂದರು.
ಮುಖ್ಯೋಪಾಧ್ಯಯರಾದ ಶಂಕರ ಅಕ್ಕಸಾಲಿ ಮಾತನಾಡಿ ಕಳೆದ ಒಂದು ವಾರದಿಂದ ಎಲ್ಲ ಸಿಬ್ಬಂದಿ ವರ್ಗ ಮಕ್ಕಳಿಗೆ ಆಹಾರ ತಯಾರಿಕೆ ಹಾಗೂ ಸಂಗ್ರಹಣಾ ವಿಧಾನ,ಜಡೆ ಹೆಣೆಯುವುದು,ಜಾನಪದ ಗೀತೆ, ಭಕ್ತಿಗೀತೆ, ಭಾವಗೀತೆ,ಸ್ಪರ್ಧೆ ಮತ್ತು ವಿಶ್ವ ದಾರ್ಶನಿಕರ ವೇಷ -ಭೂಷಣ,ಏಕ ಪಾತ್ರ ಅಭಿನಯ, ರಂಗೋಲಿ ಹಾಗೂ ಮೆಹಂದಿ ಹೀಗೆ ವಿವಿಧ ರೀತಿಯ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿದವು. ಪಾಲಕರು ಮತ್ತು ಪೋಷಕರು ಕಾರ್ಯಕ್ರಮ ನೋಡಿ ಸಂತಸ ಪಟ್ಟರು ಎಂದರು.
ಹಿರಿಯ ಪತ್ರಕರ್ತರಾದ ಮಾಲತೇಶ ಅಂಗೂರ,ನಾಗರಾಜ ಕುರುವತ್ತೆರ, ಕೇಸವಮೂರ್ತಿ,ನಿಂಗಪ್ಪ ಚಾವಡಿ,ಗುರುದತ್ತ ಭಟ್,ನಾರಾಯಣ ಹೆಗಡೆ,ವಿರೇಶ ಮಡ್ಲೂರ,ನಿಂಗಪ್ಪ ಆರೇರ,ಮಂಜುನಾಥ ದಾಸಣ್ಣನವರ,ಫಕ್ಕಿರಸ್ವಾಮಿ ಮಟ್ಟೆಣ್ಣನವರ,ಜಿ.ಎಸ್ ನದಾಫ್,ಹಿರಿಯ ಮಾಧ್ಯಮ ಮಿತ್ರರಾದ ಶಿವಕುಮಾರ ಹುಬ್ಬಳ್ಳಿ,ಫಕ್ಕೀರಯ್ಯ ಗಣಾಚಾರಿ,ಅಣ್ಣಪ್ಪ ಬಾರ್ಕಿ,ಬಾಪು ನಂದಿಹಳ್ಳಿ,ಮಾರುತಿ ಬಿ ಎಂ,ಶಂಕರ ಕೊಪ್ಪದ,ಫಕ್ಕೀರಗೌಡ ಪಾಟೀಲ,ರವಿ ಹೂಗಾರ ಹಾಗೂ ವೈದ್ಯರಾದ ಡಾ. ಗುಹೇಶ ಪಾಟೀಲ, ಡಾ. ಶರಣಬಸವ ಅಂಗಡಿ, ಡಾ. ಸಂಗಮೇಶ ದೊಡ್ಡಗೌಡ್ರ, ಡಾ.ಶಿವಾನಂದ ಕೆಂಬಾವಿ, ಡಾ. ದಯಾನಂದ ಸುತಕೋಟಿ, ಡಾ. ಸಿದ್ದನಗೌಡ, ಡಾ. ಗಂಗಯ್ಯ ಕುಲಕರ್ಣಿ ಮುಂತಾದವರನ್ನು ಶ್ರೀಗಳು ಸನ್ಮಾನಿಸಿದರು.ಎಲ್ಲ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.ಪೋಷಕರು,ಪಾಲಕರು ಮತ್ತು ಮಕ್ಕಳು ಕಾರ್ಯಕ್ರಮ ನೋಡಿ ಸಂಭ್ರಮಿಸಿದರು.ಕುಮಾರಿ ಚೇತನಾ ಮತ್ತು ಗೌಸಿಯಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು