ಪೊಲೀಸರ ನ್ಯಾಯವಾದಿಗಳ ನಡುವೆ ವಗ್ವಾದ: ನಾಗರಿಕರ ಪರದಾಟ

ಬೆಳಗಾವಿ, ಜುಲೈ 10: ನಗರದ ನ್ಯಾಯಾಲಯದ ಆವರಣದ ಬಳಿ ಕಾರು ಪಾಕರ್ಿಂಗ್ ಮಾಡುವ ವಿಚಾರಕ್ಕೆ ಸಂಬಂಧಿಸಿ ನ್ಯಾಯವಾದಿಗಳು ಮತ್ತು ಪೊಲೀಸ್ರ ಮಧ್ಯೆ ವಾಗ್ವಾದ ನಡೆದು ನ್ಯಾಯವಾದಿಗಳು ನಡು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆ ವಾಹನ ಸವಾರರು ಪರದಾಡಿದ ಘಟನೆ ಶುಕ್ರವಾರ ನಡೆದಿದೆ. 

ಶುಕ್ರವಾರ ನಗರದ ನ್ಯಾಯಾಲಯದ ಆವರಣದಲ್ಲಿ ಪೊಲೀಸರ ಮತ್ತು ನ್ಯಾಯಾವಾದಿಗಳ ನಡುವೆ ಈ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ನ್ಯಾಯವಾದಿಗೆ ಅವಾಚ್ಯವಾಗಿ ಪೊಲೀಸ್ ಪೇದೆ ನಿಂದಿಸಿದ್ದಾನೆ ಎಂದು ಆರೋಪಿಸಿ ಸ್ಥಳಕ್ಕೆ ಪೇದೆಯನ್ನು ಕರೆಯಿಸುವಂತೆ ಒತ್ತಾಯಿಸಿ ನ್ಯಾಯವಾದಿಗಳು ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ರಸ್ತೆ ತಡೆ ನಡೆಸಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು. 

ನ್ಯಾಯವಾದಿಗಳು ನ್ಯಾಯಾಲಯದ ಎದುರು ರಸ್ತೆ ತಡೆ ನಡೆಸುತ್ತಿದ್ದಂತೆ ಎರಡು ಬದಿಯಲ್ಲಿ ಸಾಗಬೇಕಾಗಿದ್ದ ವಾಹನ ಸವಾರರು ಮತ್ತು ಸಾರ್ವಜನಿಕರು ಪೊಲೀಸರ ಮತ್ತು ನ್ಯಾಯವಾದಿಗಳ ನಡೆಉವೆ ನಡೆದ ವಾಕ್ ಸಮರ ನೋಡುತ್ತ ಹಲವು ಗಂಟೆಗಳ ಕಾಲ ರಸ್ತೆಯಲ್ಲಿ ನಿಂತು ಅಸಹಾಯಕತೆಯನ್ನು ವ್ಯಕ್ತಪಡಿಸಿದ ದೃಶ್ಯ ಕಂಡು ಬಂದಿತು. ಅಲ್ಲದೆ ಇದೇ ವೇಳೆಯಲ್ಲಿ ಆಗಮಿಸಿದ ಆಂಬುಲೆನ್ಸ್ ವಾಹನಕ್ಕೂ ಪೊಲೀಸರಾಗಲಿ ಅಥವಾ ನ್ಯಾಯವಾದಿಗಳಾಗಲಿ ಹೋಗಲು ದಾರಿ ನೀಡದೆ ಅವಮಾನವಿಯವಾಗಿ ನಡೆದುಕೊಂಡರು ಎನ್ನುವ ಮಾತು ಮಾತ್ರ ಸ್ಥಳದಲ್ಲಿನ ನಾಗರಿಕರಿಂದ ಕೇಳಿ ಬಂತು. 

ನ್ಯಾಯಾಲಯದ ಆವರಣದ ಬಳಿ ಕಾರು ಪಾಕರ್ಿಂಗ್ ವಿಚಾರಕ್ಕೆ ಸಂಬಂಧಿಸಿ ವಕೀಲರು ಪೊಲೀಸ್ರ ಮಧ್ಯೆ ವಾಗ್ವಾದ ಆರಂಭವಾಯಿತು. ಸಾರ್ವಜನಿಕ ಸ್ಥಳದಲ್ಲಿ ಕಾರು ನಿಲ್ಲಿಸಿದ್ದು ಸರಿ ಅಲ್ಲ ಎಂದು ಪೊಲೀಸರು ಹೇಳಿದರೂ ವಕೀಲರು ಕಾರು ತೆಗೆಯಲಿಲ್ಲ. ನಂತರ ವಕೀಲರಿಗೆ ಅವಾಚ್ಯ ಶಬ್ದಗಳಿಂದ ಪೊಲೀಸ್ ಪೇದೆ ನಿಂದಿಸಿದ್ದಾನೆ ಎಂದು ಆರೋಪಿಸಿ ಸ್ಥಳಕ್ಕೆ ಪೇದೆಯನ್ನು ಕರೆಯಿಸುವಂತೆ ಒತ್ತಾಯಿಸಿ ವಕೀಲರು ರಸ್ತೆ ತಡೆ ನಡೆಸಿದರು. ಗಂಡ ಹೆಂಡಿರ ನಡುವೆ ಕೂಸು ಗಾಸು ಆದದಂತೆ ನ್ಯಾಯವಾದಿಗಳ ಮತ್ತು ಪೊಲೀಸರ ನಡುವೆ ಸಾರ್ವಜನಿಕರು ಪರದಾಡುವಂತಾಯಿತು.

ನಂತರ ಘಟನಾ ಸ್ಥಳಕ್ಕೆ ಎಸಿಪಿ ನಾರಾಯಣ ಭರಮನಿ ಭೇಟಿ ನೀಡಿದರು. ನ್ಯಾಯವಾದಿಗಳನ್ನು ನಿಂದಿಸಿದ್ದಾರೆ ಎನ್ನಲಾದ ಪೊಲೀಸ ಪೇದೆಯನ್ನು ಅಧಿಕಾರಿಗಳು ಸ್ಥಳಕ್ಕೆ ಕರೆಯಿಸಿದರು. ಪೇದೆ ಸಾರ್ವಜನಿಕವಾಗಿ ಕ್ಷಮೆ ಕೇಳಿದರೂ ಕೂಡಾ ಕೈ ಜೋಡಿಸಿ ಸಾರಿ ಕೇಳುವಂತೆ ನ್ಯಾಯವಾದಿಯೊಬ್ಬರು ಒತ್ತಾಯಿಸಿದರು ಎನ್ನಲಾಗಿದೆ. ಪರಿಸ್ಥಿತಿ ಕೈ ಮೀರುವ ವಿಷಯ ಅರಿತ ಎಸಿಪಿ ಪರಿಸ್ಥಿತಿ ತಿಳಿಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.