ಪಂಚಾಯ್ತಿ ಚುನಾವಣೆ ಮುಂದಕ್ಕೆ : ಆಯೋಗಕ್ಕೆ ಪತ್ರ ಬರೆದ ಹೆಚ್.ಕೆ.ಪಾಟೀಲ್

ಬೆಂಗಳೂರು,ಮೇ.19, ಅವಧಿ ಮುಗಿಯುತ್ತಿರುವ   ಗ್ರಾಮ ಪಂಚಾಯಿತಿಗಳಿಗೆ ನಿಗದಿಯಂತೆ ಜೂನ್-ಜುಲೈ ನಲ್ಲಿ ಚುನಾವಣೆ ನಡೆಸದೆ ಕುಂಟು ನೆಪ ಹಾಕಿ, ಸಂವಿಧಾನ ಸಂಸ್ಥೆಗಳ  ಪಾವಿತ್ರತೆ ಹಾಳು ಮಾಡಲು  ಹೊರಟಿರುವ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಬಲವಾಗಿ ಖಂಡಿಸಿದ್ದಾರೆ.ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಅವರು,   ಪಂಚಾಯತಿಗಳಿಗೆ ಆಡಳಿತಗಾರರನ್ನು ಅಥವಾ ಆಡಳಿತ ಸಮಿತಿ ನೇಮಕ, ಸದಸ್ಯರ ನಾಮನಿರ್ದೇಶನ,ಚುನಾಯಿತ ಸದಸ್ಯರನ್ನು 3 ಅಥವಾ 6 ತಿಂಗಳು ಮುಂದುವರೆಸುವ ಅವಶ್ಯಕತೆಯೇನು ಎಂದು ಅವರು ಬಲವಾಗಿ ಪ್ರಶ್ನಿಸಿದ್ದಾರೆ.ಇದು ಜನವಿರೋಧಿ ಮತ್ತು  ಸಂವಿಧಾನ ವಿರೋಧಿ  ನೀತಿಯಾಗಿದೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
ಈಗಾಗಲೇ ಅಸ್ಥಿತ್ವದಲ್ಲಿರುವ ಪಂಚಾಯತಿಗಳಿಗೆ ಆಡಳಿತ ಸಮಿತಿಯ ಸದಸ್ಯರು ಅಥವಾ ಆಡಳಿತಗಾರರನ್ನು ಜಿಲ್ಲಾಧಿಕಾರಿಗಳು ನೇಮಿಸುವುದು ಕಾನೂನಾತ್ಮಕವಾಗಿ ಸಾಧ್ಯವಿಲ್ಲ. ಆದರೆ ಸರ್ಕಾರ, ಸದಸ್ಯರನ್ನು ನಾಮಕರಣ ಮಾಡುತ್ತೇವೆ. ಆಡಳಿತಗಾರರನ್ನು ನಾಮಕರಣ ಮಾಡುತ್ತೇವೆಂದು. ಆ ದಿಸೆಯಲ್ಲಿ ಸರ್ಕಾರ ಸಚಿವ ಸಂಪುಟ ಉಪ ಸಮಿತಿ ವರದಿ ತಯಾರಿಸಿ ಕಾನೂನಿನಲ್ಲಿರದ ನಾಮಕರಣ ಅವಕಾಶವನ್ನು ಹೇಗೆ ಪಡೆದುಕೊಳ್ಳಬೇಕು ಎನ್ನುವ ಕುರಿತು ಗಂಭೀರ ಚಿಂತನೆಯಲ್ಲಿದೆ ಎಂದರು.
ಸರ್ಕಾರದ ರಾಜಕೀಯ ದುರುದ್ದೇಶದ ಈ ಕ್ರಮ ಯಾವುದೇ ನ್ಯಾಯಾಲಯಗಳಲ್ಲಿ ಊರ್ಜಿತವಾಗುವುದಿಲ್ಲ . ಕಾನೂನುಬಾಹಿರವಾದ, ನಾಮನಿರ್ದೇಶನ ಬಲದಿಂದ ಪಂಚಾಯತಿಗಳ ಮೂಲಕ ರಾಜಕೀಯ ಮಾಡಬೇಕೆನ್ನುವ ಸರ್ಕಾರದ ದುರುದ್ದೇಶ, ಅನವಶ್ಯಕ ಗೊಂದಲ ಸೃಷ್ಠಿ ಮಾಡಲಿದೆ ಎಂದು ದೂರಿದರು .
ವಿಶ್ವದಲ್ಲಿ ಕೊರೋನಾ ಸೋಂಕಿನ  ಹಾವಳಿಯಿಂದಾಗಿ ವಿಶ್ವವೇ ತತ್ತರಿಸಿದೆ. ಈ ಸಂಕಷ್ಟದ ಕಾಲದಲ್ಲಿ  ಚುನಾವಣೆಗಳು ನಡೆಯಬೇಕಿದೆ. ಈ ಸಂದರ್ಭದಲ್ಲಿ ಗಾಬರಿಗೊಂಡ ಸರ್ಕಾರ ಪಂಚಾಯತಿ ಚುನಾವಣೆಗಳನ್ನು ಮುಂದೂಡಬೇಕು ಎಂದು  ಚುನಾವಣಾ ಆಯೋಗಕ್ಕೆ ವಿನಂತಿಸಿಕೊಂಡಿದೆ. ಕಳೆದ ಜುಲೈ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಪಂಚಾಯತ ರಾಜ್ ಕಾನೂನಿನಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿ ಮೀಸಲಾತಿ ಕುರಿತಂತೆ ಇದ್ದ ಅವಧಿಯನ್ನು ಬದಲಾಯಿಸಿ ತಿದ್ದುಪಡಿಯನ್ನು ಮಾಡಿದೆ . ಮೀಸಲಾತಿ ಅವಧಿ ಬದಲಾಯಿಸಿರುವುದರಿಂದ ಹೊಸ ಮ್ಯಾಟ್ರಿಕ್ಸ್ ಮಾಡಬೇಕಾಗಿದೆ. ಈ ದಿಸೆಯಲ್ಲಿ ನಡೆಯಬೇಕಿದ್ದ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಚುನಾವಣೆ ಮುಂದೂಡಿಕೆ ಆಯಿತು ಎಂದು ಸರ್ಕಾರ ಭಾವಿಸಿಕೊಂಡಿದೆ.
ಸಂವಿಧಾನದ 73ನೇ ತಿದ್ದುಪಡಿಯ ಆಶಯಗಳು, ರಾಜ್ಯ ಪಂಚಾಯತ ಅಧಿನಿಯಮಗಳು ಪಕ್ಷಾತೀತ   ಗ್ರಾಮ ಪಂಚಾಯತಿಗಳಿಗೆ ಸದಾವಕಾಲ ಚುನಾಯಿತ ಸದಸ್ಯರು ಇರಬೇಕು ಎನ್ನುವ ಬದ್ದತೆ ಹೊಂದಿದೆ . ಈ ಹಿನ್ನೆಲೆಯಲ್ಲಿ ರಾಜಕೀಯವಾಗಿ ಈ ಸಂಸ್ಥೆಗಳು ದುರ್ಬಳಕೆ ಆಗದಂತೆ ರಾಜ್ಯ ಚುನಾವಣಾ ಆಯೋಗ ಎಚ್ಚರಿಕೆ ವಹಿಸಿ ಸಕಾಲದಲಲ್ಇ ಚುನಾವಣೆ ನಡಯುವಂತೆ ನೋಡಿಕೊಂಡು ಸಂವಿದಾನದ ಆಶಯ  ಕಾಪಾಡಬೇಕು ಎಂದು ಕೆಲಸ ಎಂದು  ಹೆಚ್.ಕೆ.ಪಾಟೀಲ್ ಮನವಿ ಮಾಡಿದ್ದಾರೆ.