ದಿ. 24 ರಂದು ಟಾಟಾ ಮೋಟಾರ‌್ಸನಿಂದ ಅಪ್ರಂಟೈಸ್‌ಶಿಪ್ ಸಂದರ್ಶನ

Apprenticeship interview from Tata Motors on the 24th

ಧಾರವಾಡದ ಪ್ರತಿಷ್ಠಿತ ಕಂಪನಿಯಾದ ಟಾಟಾ ಮೋಟಾರ​‍್ಸ‌ವನವರು 2025 ರ ಪಿ.ಯು.ಸಿ (ಕಲಾ, ವಾಣಿಜ್ಯ ಮತ್ತು ವಿಜ್ಞಾನ) ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯರಿಗೆ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯ ಉತ್ಸವ ಸಭಾಭವನದಲ್ಲಿ ದಿ. 24 ರಂದು ಬೆಳಿಗ್ಗೆ 9.30ಕ್ಕೆ ಅಪ್ರಂಟೈಸ್‌ಶಿಪ್ ಹುದ್ದೆಗಳಿಗೆ ಸಂದರ್ಶನ ಏರಿ​‍್ಡಸಿದ್ದಾರೆ. 16 ರಿಂದ 20 ವರ್ಷದೊಳಗಿನ ವಯೋಮಾನದವರಾಗಿಬೇಕು. ಎಸ್‌.ಎಸ್‌.ಎಲ್‌.ಸಿ ಯಲ್ಲಿ ಕನಿಷ್ಠ 60ಅ ಅಂಕ ಮತ್ತು ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ 70ಅ (ಎಸ್‌.ಸಿ ್ಘ ಎಸ್ಟಿ ವಿದ್ಯಾರ್ಥಿಗಳು 60ಅ) ಅಂಕಗಳನ್ನು ಪಡೆದಿರಬೇಕು. ಅಪ್ರಂಟೈಸ್‌ಶಿಪ್ ತರಬೇತಿ 2 ವರ್ಷದ್ದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಸಮವಸ್ತ್ರ, ಪ್ರತಿ ತಿಂಗಳಿಗೆ 13000/- ಶಿಷ್ಯವೇತನದೊಂದಿಗೆ, ಬಸ್ಸಿನ ವ್ಯವಸ್ಥೆಯನ್ನು ಸಹ ಮಾಡಲಾಗುವುದು. 

ಆಸಕ್ತ ವಿದ್ಯಾರ್ಥಿಗಳು 7022042503 ಅಥವಾ 0836-2462202 ಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು ಹಾಗೂ ಣಣಠಿ://ರಿಠಟಿ.ಣಚಿಣಚಿಟಠಠ.ಛಿಠ/ಚಿಠಿಠಿಡಿಜಟಿಣಛಿಠಿ/ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಈ ಮೂಲಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.