ಹುಬ್ಬಳ್ಳಿ 03: ಸಧ್ಯದಲ್ಲೇ ನೈರುತ್ಯ ರೇಲ್ವೆ ವಲಯ, ಹುಬ್ಬಳ್ಳಿ ಸುಮಾರು 2500 ಗ್ರೂಪ್ ಡಿ ಹುದ್ದೆಗಳ ನೇಮಕಾತಿ ಮಾಡುವ ಕ್ರಮ ಕೈಗೊಳ್ಳಲಿದೆ ಎಂದು ಸಂಸದ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಅವರು ಇಂದು ಹುಬ್ಬಳ್ಳಿ ನೈರುತ್ಯ ರೇಲ್ವೆ ವಲಯದ ಮಹಾ ಪ್ರಬಂಧಕರ ಕಛೇರಿಯಲ್ಲಿ ಈ ವಲಯದ ಮಹಾ ಪ್ರಬಂಧಕ ಅಶೋಕ ಗುಪ್ತಾ ಹಾಗೂ ಇತರ ಉನ್ನತ ಅಧಿಕಾರಿಗಳ ಸಭೆ ನಡೆಸಿ ನೈರುತ್ಯ ರೇಲ್ವೆ ವಲಯದಲ್ಲಿ ಹಾಗೂ ವಿಶೇಷವಾಗಿ ಈ ಭಾಗದಲ್ಲಿ ನಡೆಯುತ್ತಿರುವ ಹಾಗು ಅನುಷ್ಠಾನಗೊಳ್ಳುತ್ತಿರುವ ಅಭಿವೃದ್ಧಿ ಯೋಜನೆಗಳು ಹಾಗು ಇತರ ಸಂಬಂಧಿತ ವಿಷಯಗಳು ಹಾಗೂ ಸಮಸ್ಯೆಗಳ ಕುರಿತು ಸಭೆ ನಡೆಸಿದಾಗ ಮಹಾಪ್ರಬಂಧಕ ಅಶೋಕ ಗುಪ್ತಾ ಅವರು ಈ ಮಾಹಿತಿ ನೀಡಿದ್ದಾರೆಂದು ಹೇಳಿದ್ದಾರೆ.
ಇದಲ್ಲದೇ ಬಹುದಿನಗಳ ಜನರ ನಿರೀಕ್ಷೆಯಿಂತೆ ಧಾರವಾಡ ರೈಲು ನಿಲ್ದಾಣವನ್ನು ರೂ 16 ಕೋಟಿ ವೆಚ್ಚದಲ್ಲಿ ಸರ್ವ ಸುಸಜ್ಜಿತವಾಗಿ ಆಧುನೀಕರಣ ಕಾಮಗಾರಿ ಆರಂಭವೂ ಇಷ್ಟರಲ್ಲಿಯೇ ಆಗಲಿದೆ ಎಂಬ ವಿಷಯವನ್ನೂ ಕೂಡಾ ಇದೇ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳು ಸಂಸದ ಜೋಶಿ ಅವರಿಗೆ ವಿವರ ನೀಡಿದ್ದಾರೆ.
ಮೊದಲ ಹಂತವಾಗಿ ಈಗಿರುವ ಧಾರವಾಡ ರೈಲು ನಿಲ್ದಾಣ ಕಟ್ಟಡ ಹೊಸ ಆಧುನಿಕ ವಿನ್ಯಾಸದೊಂದಿಗೆ ನಿಮರ್ಾಣವಾಗಲಿದ್ದು ವಿಶ್ರಾಂತಿ ಕೊಠಡಿ, ಟಿಕೇಟ್ ಕೌಟರ್ಗಳು, ರೈಲ್ವೆ ರಿಜರ್ವೇಶನ್ ಕೊಠಡಿ ವಿವಿದ ಸೌಲಭ್ಯಗಳನ್ನು ಗುರುತಿಸುವ ಫಲಕಗಳು ಇತ್ಯಾದಿಗಳು ಒಳಗೊಂಡಿವೆ. ನಂತರದ ಹಂತದಲ್ಲಿ ಪ್ಲಾಟ್ಫಾರ್ಮಗಳ ಸುಧಾರಣೆ, ಮೇಲ್ ಸೇತುವೆ, ಕೆಳ ಸೇತುವೆಗಳ ನಿಮರ್ಾಣ, ಎಲ್ಲ ಪ್ಲಾಟ್ಫಾರ್ಮಗಳ ಜೋಡಣೆಗೆ ಫುಟ್ ಓವರ ಬ್ರಿಡ್ಜ್ ಇತ್ಯಾಧಿಗಳು ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೇ ಚಚರ್ೆಯಲ್ಲಿ ಹುಬ್ಬಳ್ಳಿ-ಅಂಕೋಲಾ, ತುಮಕೂರು-ಚಿತ್ರದುರ್ಗ-ದಾವಣಗೇರೆ ಹೊಸ ಮಾರ್ಗ ನಿರ್ಮಣ ಕಾರ್ಯಗಳ ಹಾಗೂ ಹುಬ್ಬಳ್ಳಿ, ಚಿಕ್ಕಜಾಜೂರ, ಹೊಸಪೇಟೆ ಟೆನೈನ್ಘಾಟ್ ಜೋಡು ಮಾರ್ಗಗಳ ಕಾಮಗಾರಿಗಳ ಪ್ರಗತಿ, ಅಳ್ನಾವರ ರೈಲ್ವೆ ನಿಲ್ದಾಣದ ಸುಧಾರಣೆ ಕಾರ್ಯ, ಧಾರವಾಡ ಕಲ್ಯಾಣ ನಗರ ರಸ್ತೆ ಕೆಳಸೇತುವೆ ನಿಮರ್ಾಣ ಕಾರ್ಯ ಹಾಗು ವಿಭಾಗದಲ್ಲಿ ಬರುವ ಹಲವಾರು ಮೇಲ್ಸೇತುವೆ, ಕೆಳಸೇತುವೆಗಳ ನಿಮರ್ಾಣ ಹಾಗೂ ಸುಧಾರಣಾ ಕಾರ್ಯಗಳು (ಅಣ್ಣಿಗೇರಿ, ರಾಮಾಪುರ, ಕಂಬಾರಗಣವಿ, ಉಣಕಲ್ ಇತ್ಯಾದಿ) ಕುಸುಗಲ್-ಅಮರಗೋಳ ಬೈಪಾಸ್ ರೈಲು ಮಾರ್ಗ ನಿಮರ್ಾಣ ಹಲವಾರು ರೈಲುಗಳ ಅಗತ್ಯ ಸ್ಥಳಗಳಿಗೆ ನಿಲುಗಡೆ ವಿಷಯಗಳ ಪ್ರಸ್ತಾಪ ಸಭೆಯಲ್ಲಿ ವಿಸ್ತೃತವಾಗಿ ಚಚರ್ೆಗೆ ಬಂದ ವಿಷಯಗಳಾಗಿದ್ದವು.
ಸಭೆಯಲ್ಲಿ ಮಹಾ ಪ್ರಬಂಧಕರಲ್ಲದೇ ಹುಬ್ಬಳ್ಳಿ ವಿಭಾಗೀಯ ಪ್ರಬಂಧಕ, ಮುಖ್ಯ ನಿವರ್ಾಹಣ ಪ್ರಬಂಧಕ, ಮುಖ್ಯ ವಾಣಿಜ್ಯ ಪ್ರಬಂಧಕ, ಉಪಮಹಾಪ್ರಬಂಧಕ, ರೈಲ್ವೆ ವಿಕಾಸ ನಿಗಮದ ಹಿರಿಯ ಅಧಿಕಾರಿಗಳು ಹಾಗೂ ಹಲವಾರು ವಲಯಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದು ಸಂಸದರಿಗೆ ವಿವರ ನೀಡಿದರು.