ಕೊಪ್ಪಳ 24: ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮತದಾರರ ಪರಿಶೀಲನಾ ಕಾರ್ಯಕ್ರಮ (ಇ.ವಿ.ಪಿ)ದ ಅಂಗವಾಗಿ ರಾಜಕೀಯ ರಾಜಕೀಯ ಪಕ್ಷಗಳು ಕೂಡಲೇ ಎಲ್ಲಾ ಮತಗಟ್ಟೆಗಳಿಗೆ ಬೂತ್ ಲೆವಲ್ ಎಜೆಂಟ್ಗಳನ್ನು ನೇಮಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಹೇಳಿದರು. ಅವರು ತಮ್ಮ ಕಚೇರಿಯಲ್ಲಿ ಇತ್ತೀಚೆಗೆ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮತದಾರರ ಪರಿಶೀಲನಾ ಕಾರ್ಯಕ್ರಮ (ಇ.ವಿ.ಪಿ) ಕುರಿತು ರಾಜಕೀಯ ಪಕ್ಷಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆ-2020ರ ಅಂಗವಾಗಿ ಸೆಪ್ಟೆಂಬರ್. 01 ರಿಂದ ಅಕ್ಟೋಬರ್. 15 ರವರೆಗೆ ಇ.ವಿ.ಪಿ ಕಾರ್ಯಕ್ರಮ, ಸೆಪ್ಟೆಂಬರ್. 01 ರಿಂದ 30 ರವರೆಗೆ ಬಿ.ಎಲ್.ಒ ಗಳಿಂದ ಮನೆ-ಮನೆಗೆ ಭೇಟಿ ಮೂಲಕ ಪರಿಶೀಲನೆ, ಅಕ್ಟೋಬರ್. 15 ಇಂಟಿಗ್ರೇಟೆಡ್ ಡ್ರಾಫ್ಟ್ ಎಲೆಕ್ಟರಲ್ ರೋಲ್ನ ಪ್ರಕಟಣೆ, ಅಕ್ಟೋಬರ್. 15 ರಿಂದ ನವೆಂಬರ್. 30 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಕ್ಲೈಮ್ ಮಾಡುವ ಅವಧಿ, ನವೆಂಬರ್. 02, 03, 09, 10 ರಂದು ವಿಶೇಷ ಪ್ರಚಾರ, ಡಿಸೆಂಬರ್. 15 ರಂದು ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿ, 2020ರ ಜನವರಿ. 01 ರಿಂದ 15 ರವರೆಗೆ ಮತದಾರರ ಪಟ್ಟಿಯ ಅಂತಿಮ ಪ್ರಕಟಣೆ ಕಾರ್ಯಕ್ರಮ ನಡೆಯಲಿದೆ.
ಮತದಾರರ ಪರಿಶೀಲನಾ ಕಾರ್ಯಕ್ರಮ (ಇ.ವಿ.ಪಿ); ಭಾರತ ಚುನಾವಣಾ ಆಯೋಗವು ಎಲ್ಲಾ ಮತದಾರರಿಗೆ ಮತದಾರರ ಪಟ್ಟಿಯಲ್ಲಿಯ ವಿವರಗಳನ್ನು ಪರಿಶೀಲಿಸಿ, ತಿದ್ದುಪಡಿಗಳಿದ್ದಲ್ಲಿ ಸರಿಪಡಿಸಿಕೊಳ್ಳಲು ಅವಕಾಶವನ್ನು ನೀಡಿದ್ದು, ಸೆಪ್ಟೆಂಬರ್. 01 ರಿಂದ ಅಕ್ಟೋಬರ್. 15 ರವರೆಗೆ ಅವಧಿಯನ್ನು ನಿಗದಿಪಡಿಸಿರುತ್ತದೆ. ಈ ಕಾರ್ಯಕ್ರಮದಡಿಯಲ್ಲಿ ಪ್ರತಿ ಮತದಾರರು ತಮ್ಮ ವಿವರಗಳು ಮತದಾರರ ಪಟ್ಟಿಯಲ್ಲಿ ಸರಿಯಾಗಿ ಮುದ್ರಿತವಾಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಆದ್ದರಿಂದ ಜಿಲ್ಲೆಯ ಮತದಾರರು ಎನ್.ವಿ.ಎಸ್.ಪಿ ತಿತಿತಿ.ಟಿತಠಿ.ಟಿ ವೋಟರ್ ಹೆಲ್ಪಲೈನ್ ಮೋಬೈಲ್ ಆ್ಯಪ್, ಕಾಮನ್ ಸವರ್ಿಸ್ ಸೆಂಟರ್, ಅಟಲ್ಜೀ ಜನಸ್ನೇಹಿ ಕೇಂದ್ರ, ಜಿಲ್ಲಾಡಳಿತ ಭವನದಲ್ಲಿರುವ 19500-ಸಂಪರ್ಕ ಕೇಂದ್ರ, ಸಹಾಯಕ ಆಯುಕ್ತ ಕಾಯರ್ಾಲಯ, ತಹಶೀಲ್ದಾರ ಕಾಯರ್ಾಲಯದ ವೋಟರ್ ಫ್ಯಾಶಿಲೇಷನ್ ಸೆಂಟರ್, ಈ ಕೇಂದ್ರಗಳಲ್ಲಿ ಅಥವಾ ಜಾಲತಾಣಗಳ ಮೂಲಕ ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಬಹುದು ಮತ್ತು ಯಾವುದಾದರೂ ಸೇರ್ಪಡೆ, ತಿದ್ದುಪಡಿಗಳಿದ್ದಲ್ಲಿಯೂ ಕೂಡ ನಿಗದಿತ ಅಜರ್ಿ ಸಲ್ಲಿಸಬಹುದಾಗಿರುತ್ತದೆ. ರಾಜಕೀಯ ಪಕ್ಷಗಳು ಕೂಡಲೇ ಎಲ್ಲಾ ಮತಗಟ್ಟೆಗಳಿಗೆ ಬೂತ್ ಲೆವಲ್ ಲೆವಲ್ ಎಜೆಂಟ್ಗಳನ್ನು ನೇಮಿಸುವುದು ಹಾಗೂ ಈ ಎಜೆಂಟ್ಗಳು ನಿಗದಿಪಡಿಸಿದ ಮತಗಟ್ಟೆ ವ್ಯಾಪ್ತಿಯಲ್ಲಿಯ ಎಲ್ಲಾ ಮತದಾರರು ಇ.ವಿ.ಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಲು ಹಾಗೂ ಯಾವುದೇ ತಿದ್ದುಪಡಿಗಳಿದ್ದಲ್ಲಿ ಮಾಡಿಸಿಕೊಳ್ಳಲು ಜಾಗೃತಿ ಮೂಡಿಸುವುದು ಮತ್ತು ಬೂತ್ ಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ ಪರಿಶೀಲನೆ ಮತ್ತು ತಿದ್ದುಪಡಿಗಳನ್ನು ಮಾಡಿಸಲು ಸಹಕರಿಸಬೇಕು.
ಮತದಾರರ ವಿವರ; ಕೊಪ್ಪಳ ಜಿಲ್ಲೆಯ 60-ಕುಷ್ಟಗಿ ವಿಧನಸಭಾ ಕ್ಷೇತ್ರದಲ್ಲಿ 272 ಮತಗಟ್ಟೆಗಳು ಹಾಗೂ 228269 ಮತದಾರರಿದ್ದಾರೆ. 61-ಕನಕಗಿರಿ ವಿಧನಸಭಾ ಕ್ಷೇತ್ರದಲ್ಲಿ 261 ಮತಗಟ್ಟೆಗಳು ಹಾಗೂ 214830 ಮತದಾರರು, 62-ಗಂಗಾವತಿ ವಿಧನಸಭಾ ಕ್ಷೇತ್ರದಲ್ಲಿ 233 ಮತಗಟ್ಟೆಗಳು ಹಾಗೂ 196490 ಮತದಾರರು, 63-ಯಲಬುಗರ್ಾ ವಿಧನಸಭಾ ಕ್ಷೇತ್ರದಲ್ಲಿ 253 ಮತಗಟ್ಟೆಗಳು ಹಾಗೂ 210349 ಮತದಾರರು, 64-ಕೊಪ್ಪಳ ವಿಧನಸಭಾ ಕ್ಷೇತ್ರದಲ್ಲಿ 288 ಮತಗಟ್ಟೆಗಳು ಹಾಗೂ 240258 ಮತದಾರರು, ಜಿಲ್ಲೆಯ ಐದು ವಿಧಾನಸಭೆಗಳು ಸೇರಿ ಒಟ್ಟು ಮತಗಟ್ಟೆಗಳು 1307 ಹಾಗೂ 1090196 ಮತದಾರರಿದ್ದಾರೆ. 2020ರ ಜನವರಿ. 01ಕ್ಕೆ 18 ವರ್ಷ ವಯಸ್ಸು ಪೂರ್ಣಗೊಳ್ಳುವ ಮತದಾರರನ್ನು ಸೇರ್ಪಡೆ ಮಾಡಲು ಬೂತ್ ಮಟ್ಟದ ಏಜೆಂಟರ ಮುಖಾಂತರ ಕ್ರಮ ಕೈಗೊಳ್ಳುವುದು ಹಾಗೂ ಅದೇ ರೀತಿ ಯಾವುದೇ ಅನರ್ಹ ಮತದಾರರು/ ಖಾಯಂ ಸ್ಥಳಾಂತರಗೊಂಡ/ ಮರಣ ಹೊಂದಿದ ಮತದಾರರ ವಿವರಗಳನ್ನು ನೀಡಿದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದ್ದು, ಈ ಕುರಿತು ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದರು.
1950 ಜಿಲ್ಲಾ ಸಂಪರ್ಕ ಕೇಂದ್ರ (ಡಿಸಿಸಿ); ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಟೋಲ್-ಫ್ರೀ ಸಂಖ್ಯೆ 1950ರೊಂದಿಗೆ ಜಿಲ್ಲಾ ಸಂಪರ್ಕ ಕೇಂದ್ರವು ಕಾರ್ಯನಿರ್ವಹಿಸುತ್ತಲಿದ್ದು, ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 06 ಗಂಟೆಯವರೆಗೆ ಸಾರ್ವಜನಿಕರಿಗೆ ಚುನಾವಣಾ ಸಂಬಂಧಿತ ಮಾಹಿತಿಯನ್ನು ಒದಗಿಸಲಾಗುವುದು. ಈ ಕೇಂದ್ರವೂ ಕೂಡ ವೋಟರ್ ಫೆಸಿಲಿಟಿಟೇಷನ್ ಸೆಂಟರ್ ಕಾರ್ಯನಿರ್ವಹಿಸುತ್ತಿದ್ದು, ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಬಹುದು ಹಾಗೂ ತಿದ್ದುಪಡಿಗಾಗಿ ಅಜರ್ಿ ಸಲ್ಲಿಸಬಹುದು.
ಬೂತ್ ಮಟ್ಟದ ಅಧಿಕಾರಿಗಳಿಂದ ಮನೆ-ಮನೆ ಭೇಟಿ; ಮತಗಟ್ಟೆ ಅಧಿಕಾರಿಗಳು ಸೆಪ್ಟೆಂಬರ್. 30 ರವರೆಗೆ ಮನೆ-ಮನೆಗೆ ಭೇಟಿ ನೀಡಲಿದ್ದು, ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಲು, ತಿದ್ದುಪಡಿ ಮತ್ತು ನೊಂದಾಯಿತರಾಗದ ಅರ್ಹ ಮತದಾರರ ಸೇರ್ಪಡೆಗಾಗಿಯೂ ಅವಕಾಶವಿರುತ್ತದೆ. ಬೂತ್ ಮಟ್ಟದ ಅಧಿಕಾರಿಗಳಿಗಾಗಿ ಈ ಬಾರಿ ಭಾರತ ಚುನಾವಣಾ ಆಯೋಗವು ಬಿ.ಎಲ್.ಒ ಆ್ಯಪ್ (ಃಐಔ ಂಠಿಠಿ) ಸಿದ್ಧಪಡಿಸಿದ್ದು, ಸ್ಥಳದಲ್ಲೇ ಅಜರ್ಿದಾರರ ಅಜರ್ಿಯನ್ನು ಆನ್ಲೈನ್ನಲ್ಲಿ ಸ್ವೀಕರಿಸಲಾಗುವುದು ಮತ್ತು ಮನೆಯ ಜಿ.ಐ.ಎಸ್ ಕೋ-ಆಡರ್ಿನೇಟ್ ಪಡೆದು ಮ್ಯಾಪ್ ಮಾಡಲಾಗುವುದು ಮತ್ತು ಒಂದೇ ಕುಟುಂಬದ ಎಲ್ಲಾ ಮತದಾರರನ್ನು ಒಟ್ಟುಗೂಡಿಸಲಾಗುವುದು. ಈ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಲು ಬೂತ್ ಮಟ್ಟದ ಏಜೆಂಟರ ಹಾಗೂ ರಾಜಕೀಯ ಪಕ್ಷಗಳ ಸಹಕಾರ ಅತ್ಯವಶ್ಯಕವಾಗಿದೆ.
ಕರಡು ಮತದಾರರ ಪಟ್ಟಿ ಪ್ರಕಟಣೆ: ಅಕ್ಟೋಬರ್. 15 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಬಹುದು ಮತ್ತು ಅಕ್ಟೋಬರ್. 15 ರಿಂದ ನವೆಂಬರ್. 30 ರವರೆಗೆ ಕರಡು ಮತದಾರರ ಪಟ್ಟಿಗೆ ಹಕ್ಕು ಮತ್ತು ಅಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಈ ಅವಧಿಯಲ್ಲಿಯೂ ಕೂಡ ಮತದಾರರು ಅರ್ಹ ಮತದಾರರ ಸೇರ್ಪಡೆಗಾಗಿ (ನಮೂನೆ-6), ಅನರ್ಹ/ ಖಾಯಂ ಸ್ಥಾಳಾಂತರಗೊಂಡ/ ಮರಣ ಹೊಂದಿದ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು (ನಮೂನೆ-7) ತಿದ್ದುಪಡಿಗಾಗಿ (ನಮೂನೆ-8), ಮತ್ತು ವಿ.ಸ.ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಳಾಂತರಕ್ಕಾಗಿ ಅಜರ್ಿಯನ್ನು ಬೂತ್ಮಟ್ಟದ ಅಧಿಕಾರಿಗಳಿಗೆ ಅಥವಾ ಆನ್ಲೈನ್, ವೋಟರ್ ಫೆಸಿಲಿಟೇಶನ್ ಸೆಂಟರ್ಸ್, ಸಾಮಾನ್ಯ ಸೇವಾ ಕೇಂದ್ರಗಳ ಮೂಲಕವೂ ಅಜರ್ಿಗಳನ್ನು ಸಲ್ಲಿಸಬಹುದು.
ವಿಶೇಷ ಅಭಿಯಾನ; ನವೆಂಬರ್. 02 & 03 ಹಾಗೂ 09 & 10, ಈ ದಿನಗಳಂದು ವಿಶೇಷ ಅಭಿಯಾನವನ್ನು ಆಯೋಜಿಸಲಿದ್ದು, ಈ ಅವಧಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ನಿಗದಿತ ಬೂತ್ಗಳಲ್ಲಿ ಹಾಜರಿರುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಯುವ ಮತದಾರರು ನೊಂದಾಯಿತರಾಗುವಂತೆ ಬೂತ್ ಮಟ್ಟದ ಏಜೆಂಟರ ಮೂಲಕ ಉತ್ತೇಜಿಸುವಂತೆ ಹಾಗೂ ಜಾಗೃತಿ ಮೂಡಿಸಲು ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದರು.
ಅಂತಿಮ ಮತದಾರರ ಪಟ್ಟಿ ಪ್ರಕಟಣೆ; ಮೇಲಿನ ಎಲ್ಲಾ ಕಾರ್ಯಗಳ ನಂತರ 2020ರ ಜನವರಿ. 01 ರಿಂದ 15ರ ಅವಧಿಯಲ್ಲಿ ಭಾರತ ಚುನಾವಣಾ ಆಯೋಗವು ನಿಗದಿಪಡಿಸುವ ಒಂದು ದಿನ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿ, ಸಾರ್ವಜನಿಕರ ಮಾಹಿತಿಗಾಗಿ ಎಲ್ಲಾ ಬೂತ್ಗಳಲ್ಲಿ, ತಹಶೀಲ್ದಾರ ಕಛೇರಿಗಳಲ್ಲಿ, ಸಹಾಯಕ ಆಯುಕ್ತರ ಕಛೇರಿಯಲ್ಲಿ ಮತ್ತು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪ್ರಚುರಪಡಿಸಲಾಗುವುದು ಹಾಗೂ ರಾಜಕೀಯ ಪಕ್ಷಗಳಿಗೂ ಅದರ ಒಂದು ಪ್ರತಿಯನ್ನು ನೀಡಲಾಗುವುದು. ಇದರೊಂದಿಗೆ ಜಿಲ್ಲೆಯ ಯಾವುದೇ ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದಾದರೂ ಮತಗಟ್ಟೆಗಳನ್ನು ಬದಲಾವಣೆ ಮಾಡಬೇಕಿದ್ದಲ್ಲಿ ಸಕಾರಣಗಳೊಂದಿಗೆ ಅಜರ್ಿಯನ್ನು ಸಲ್ಲಿಸಲು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತಿಳಿಸಲಾಯಿತು.
ಅಂತಿಮವಾಗಿ ರಾಜಕೀಯ ಪಕ್ಷಗಳು ಭಾರತ ಚುನಾವಣಾ ಆಯೋಗವು ಉದ್ದೇಶಿತ ಮತದಾರರ ಪರಿಶೀಲನಾ ಕಾರ್ಯ ಹಾಗೂ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯವನ್ನು ಯಶಸ್ವಿಗೊಳಿಸಲು ಮತ್ತು ಮತದಾರರ ಪಟ್ಟಿಯನ್ನು ಶುದ್ಧ ಹಾಗೂ ದೋಷರಹಿತವಾಗಿ ತಯಾರಿಸುವಲ್ಲಿ ಸಂಪೂರ್ಣ ಸಹಕಾರ ನೀಡುವಂತೆ ಜಿಲ್ಲಾಧಿಖಾರಿ ಪಿ.ಸುನೀಲ್ ಕುಮಾರ್ ಕೋರಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ಕೊಪ್ಪಳ ತಹಶೀಲ್ದಾರ ಜೆ.ಬಿ ಮಜ್ಗಿ ಸೇರಿದಂತೆ ರಾಜಕೀಯ ಪಕ್ಷಗಳ ಪ್ರತಿನಿದಿಗಳು ಉಪಸ್ಥಿತರಿದ್ದರು.