ಲೋಕದರ್ಶನವರದಿ
ಹಿರೇಕೆರೂರ27: ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ವೇತನ ನೀಡುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳ ವರ್ತನೆಯನ್ನು ಖಂಡಿಸಿ ಹಾವೇರಿ ಜಿಲ್ಲಾ ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರ ಸಂಘದ ಸದಸ್ಯರು ಸ್ಥಳೀಯ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿ ಶೀಘ್ರ ವೇತನ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕ ಸಂಘದ ಅಧ್ಯಕ್ಷ ನವೀನ ಹೆಚ್ ಮಾತನಾಡಿ ಕಳೆದ 3 ತಿಂಗಳಿನಿಂದ ತಾಲೂಕಿನ 10 ಕ್ಕೂ ಹೆಚ್ಚು ಗ್ರಾಮ ಪಂಚಾಯತ್ಗಳಲ್ಲಿ ನರೇಗಾ ಯೋಜನೆಯಡಿಯಲ್ಲಿ ಕೂಲಿ ಕೆಲಸ ಮಾಡಿದ ಕಾಮರ್ಿಕರಿಗೆ ಸರಿಯಾಗಿ ಕೂಲಿ ಹಣ ನೀಡದೇ ಸತಾಯಿಸಲಾಗುತ್ತಿದೆ ಈ ಕುರಿತಂತೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲವೆಂದು ಆರೋಪಿಸಿದರು.
ಗ್ರಾಮೀಣ ಭಾಗದ ಜನರಿಗೆ ವರದಾನವಾಗಿರುವ ನರೇಗಾ ಯೋಜನೆಯಡಿ ಜನರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಜೊತೆಗೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿ ಕೆರೆ ಹೊಳುತ್ತುವುದು, ನೀರುಗಾಲುವೆ, ನಮ್ಮ ಹೊಲ ನಮ್ಮದಾರಿ, ಕೃಷಿ ಹೊಂಡ, ರೈತರ ಹೊಲಗಳ ಬದು ನಿರ್ಮಾಣ ಕಾಮಗಾರಿಗಳ ಮೂಲಕ ಸಮಗ್ರ ಗ್ರಾಮೀಣ ಅಭಿವೃದ್ಧಿಯನ್ನು ಸಾಧಿಸಲಾಗುತ್ತಿದ್ದು, ಆದರೆ ಈ ಯೋಜನೆಯಡಿಕೆಲಸ ನಿರ್ವಹಿಸಿದ ಕೂಲಿ ಕಾಮರ್ಿಕರಿಗೆ ಸಕಾಲಕ್ಕೆ ವೇತನ ನೀಡದೇ ಗ್ರಾಪಂ ಅಧಿಕಾರಿಗಳು ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ ಎಂದು ಆಪಾದಿಸಿದರು.
ಈರಮ್ಮ ಪಾಟೀಲ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಜನತೆಗೆ ಕೆಲಸವಿಲ್ಲದೆ ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ. ಇಂಥಹ ಸಂದರ್ಭದಲ್ಲಿ ನರೇಗಾ ಯೋಜನೆಯು ಗುಳೆ ಹೋಗುವ ಜನರಿಗೆ ಆಶಾ ಕಿರಣವಾಗಿ ಹೊಮ್ಮಿದ್ದು, ಆದರೆ ಈ ಯೋಜನೆಯಡಿ ಕೆಲಸ ಮಾಡಿದ ಕೂಲಿ ಕಾಮರ್ಿಕರಿಗೆ ಎನ್.ಎಂ.ಆರ್.ಮುಗಿದು 8 ದಿನದೊಳಗೆ ಕೂಲಿ ಪಾವತಿಸುವ ನಿಯಮಗಳಿದ್ದರೂ ತಾಲೂಕಿನ ಸುಮಾರು ಹತ್ತಕ್ಕೂ ಹೆಚ್ಚು ಗ್ರಾಪಂ ಪಿಡಿಓಗಳ ಮಾಡಿದ ನಿರ್ಲಕ್ಷ್ಯ, ಹಾಗೂ ಬೇಜವಾಬ್ದಾರಿತನದಿಂದ ಸುಮಾರು 500 ಕ್ಕೂ ಹೆಚ್ಚು ಕೂಲಿ ಕಾಮರ್ಿಕರಿಗೆ ಮೂರು ತಿಂಗಳಾದರೂ ಕೂಲಿ ಸಿಕ್ಕಿಲ್ಲ ಎಂದು ಆರೋಪಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ನರೇಗಾ ಸಹಾಯಕ ನಿದರ್ೇಶಕ ಸಂತéೋಷಕುಮಾರ ತಳಕಲ್ಲ, ನರೇಗಾ ಯೋಜನೆಯಡಿ ಕಾರ್ಯ ನಿರ್ವಹಿಸಿ ವೇತನ ವಂಚಿತರಾಗಿರುವ ಕೂಲಿ ಕಾರ್ಮಿಕರಿಗೆ ಶೀಘ್ರದಲ್ಲಿಯೇ ಗ್ರಾ,ಪಂ,ಗಳ ಮೂಲಕ ಕೂಲಿ ವೇತನವನ್ನು ನೀಡಲು ಕ್ರಮವಹಿಸಲಾಗುವುದು ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ಸದಸ್ಯರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಾ ದೊಣ್ಣೇರ, ಮುರುಡನಗೌಡ ಕರೇಗೌಡ್ರ, ರಮೇಶ ಮುದ್ದಿನಕೊಪ್ಪ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.