ಲೋಕದರ್ಶನ ವರದಿ
ಶ್ರೀಧರಗಡ್ಡೆ ಗ್ರಾಮದ ನಿವೇಶನ ರಹಿತರಿಗೆ ನಿವೇಶನ ಹಂಚಲು ಮನವಿ
ಬಳ್ಳಾರಿ 16: ದಿನಾಂಕ 16 ರಂದು ಖಗಅಋ(ಅ) ಪಕ್ಷದ ಬಳ್ಳಾರಿ ಗ್ರಾಮೀಣ ಸ್ಥಳೀಯ ಸಮಿತಿಯ ವತಿಯಿಂದ ಶ್ರೀಧರಗಡ್ಡೆ ಗ್ರಾಮದಲ್ಲಿ ಪಂಚಾಯ್ತಿ ಕಾರ್ಯದರ್ಶಿ ರಾಜಾಸಾಬ್ ಅವರಿಗೆ ಮನವಿ ಸಲ್ಲಿಸಲಾಯಿತು. ನಿವೇಶನ ರಹಿತರಿಗೆ ನಿವೇಶನ ನೀಡಬೇಕು ಎಂದು ಸುಮಾರು 25 ವರ್ಷಗಳಿಂದ ಹೋರಾಟ ನಡೆಸುತ್ತಲೇ ಬಂದಿದ್ದು, ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧವಿದ್ದರೂ ಸಹ ಇಲ್ಲಿಯವರೆಗೂ ಯಾವುದೇ ಬೆಳವಣಿಗೆ ಆಗಿಲ್ಲ. ಸರ್ಕಾರಿ ಜಮೀನಿನಲ್ಲಿ ಬಡವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಇರುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಜನರಿಗೆ ಹಂಚಿಕೆ ಮಾಡಬೇಕು. ಈ ಹಿಂದೆ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರೂ ಕ್ರಮ ತೆಗೆದುಕೊಂಡಿಲ್ಲ, ಅಲ್ಲಿ ಅವರು ಹೇಳುವ ಪ್ರಕಾರ ಅದು ಪಂಚಾಯ್ತಿ ಮಟ್ಟದಲೇ ಬಗೆಹರಿಯಬೇಕಾದ ಸಮಸ್ಯೆ. ಹಾಗಾಗಿ ಕೂಡಲೇ ತುರ್ತಾಗಿ ಈ ಕುರಿತು ಕ್ರಮ ಕೈಗೊಳ್ಳಬೇಕು ಮತ್ತು ಅತೀ ಶೀಘ್ರದಲ್ಲೇ ನಿವೇಶನಗಳನ್ನು ಫಲಾನುಭವಿಗಳಿಗೆ ಹಂಚಬೇಕು, ಈ ಕೂಡಲೇ ಈ ಸಮಸ್ಯೆಗೆ ಪರಿಹಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕರೆ ನೀಡಲಾಯಿತು. ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳು ಮತ್ತು ಸದಸ್ಯರು ಬಸನಗೌಡ ಮತ್ತು ಪರಶುರಾಮ್ ಕೂಡಲೇ ನಿವೇಶನ ಹಂಚಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಖಗಅಋ(ಅ) ಗ್ರಾಮೀಣ ಸ್ಥಳೀಯ ಸಮಿತಿಯ ಕಾರ್ಯದರ್ಶಿಗಳಾದ ಎ.ದೇವದಾಸ್, ಸದಸ್ಯರಾದ ಈ. ಹನುಮಂತಪ್ಪ, ಜಗದೀಶ್ ನೇಮಕಲ್ ಮತ್ತು ಫಲಾನುಭವಿಗಳಾದ ಬಸಮ್ಮ, ಆಯೇಷಾ ಬೇಗಂ, ನಾಗಮ್ಮ, ಗೌರಮ್ಮ, ಗೌಸಿಯ ಬೇಗಂ, ಊರಿನ ಮುಖಂಡರಾದ ಹನುಮಂತಪ್ಪ, ದೊಡ್ಡಬಸಪ್ಪ ಉಪಸ್ಥಿತರಿದ್ದರು.