ಪ್ರಾಥಮಿಕ ಶಿಕ್ಷಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಡಿಸಿಗೆ ಮನವಿ

ಬಾಗಲಕೋಟೆ: ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರಿಗೆ ಕನರ್ಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಸೋಮವಾರ ಮನವಿ ಸಲ್ಲಿಸಿತು. 

ಜಿಲ್ಲಾಡಳಿತ ಭವನದ ಮುಖ್ಯ ದ್ವಾರದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಶಿಕ್ಷಕರ ಸಂಘವು ನೂತನ ಪಿಂಚಣಿ ಯೋಜನೆಗಳಿಂದ ಶಿಕ್ಷಕರಿಗೆ ಯಾವುದೇ ರೀತಿಯ ಲಾಭದಾಯಕವಾಗಿರುವದಿಲ್ಲ. ಆದ್ದರಿಂದ ಹಳೆ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು. ತಾತ್ಕಾಲಿಕ ಅಥವಾ ಅತಿಥಿ ಶಿಕ್ಷಕರ ನೇಮಕಾತಿ ಪದ್ದತಿಯನ್ನು ಕೈ ಬಿಟ್ಟು ಶಿಕ್ಷಕರ ಖಾಯಂ ನೇಮಕಾತಿ ಪದ್ದತಿಯನ್ನು ಜಾರಿಗೆ ತರಬೇಕು ಎಂದು ಮನವಿಯಲ್ಲಿ ತಿಳಿಸಿದೆ.

ಶಿಕ್ಷಕರ ನೇಮಕಾತಿ ಮತ್ತು ಸೌಲಭ್ಯಗಳನ್ನು ಕೇಂದ್ರದ ಮಾದರಿಯಂತೆ ಜಾರಿಗೆ ತರಬೇಕು. ಕೇಂದ್ರ ಸರಕಾರ ಬಿಡುಗಡೆ ಮಾಡುವ ಪ್ರಾಥಮಿಕ ಶಿಕ್ಷಣದ ಬಜೆಟ್ನ ಅನುದಾನವನ್ನು ಪ್ರಾಥಮಿಕ ಶಿಕ್ಷಣಕ್ಕಾಗಿಯೇ ಬಳಸಬೇಕು. ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಶಿಕ್ಷಕರನ್ನು ಬಳಸದೆ ಅದಕ್ಕಾಗಿ ಪಯರ್ಾಯ ವ್ಯವಸ್ಥೆಯನ್ನು ಮಾಡಬೇಕು. ಹೊಸ ಶಾಲಾ ಶಿಕ್ಷಣ ಆಯೋಗವನ್ನು ಸ್ಥಾಪಿಸಬೇಕು. ಸ್ವತಂತ್ರ ರಾಜ್ಯ ಕಾರ್ಯನಿರ್ವಹಣಾ ಮಂಡಳಿಯನ್ನು ಸ್ಥಾಪಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು.

      ಪ್ರತಿಯೊಂದು ಶಾಲೆಯಲ್ಲಿ ಕನಿಷ್ಠ ಒಬ್ಬರನ್ನು ಮೇಲ್ವಿಚಾರಕ ಮತ್ತು ಒಬ್ಬರನು ಸಹಾಯಕ ನೇಮಕ ಮಾಡಿಕೊಳ್ಳುವಂತಹ ಯೋಜನೆಯನ್ನು ಜಾರಿಗೆ ತರಬೇಕು.

  ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕೇಂದ್ರ ಸಕರ್ಾರದ ಮಾದರಿಯಂತೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು. ಆಸ್ಪತ್ರೆಗೆ ದಾಖಲಾಗುವ ಅನುಕೂಲ ಮತ್ತು ವೈದ್ಯಕೀಯ ಭತ್ಯೆ ನೀಡುವದು.

    ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಕೂಡಾ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ನೀಡಬೇಕು ಎಂದು ತಿಳಿಸಿದ್ದಾರೆ.ಮನವಿ ಸಲ್ಲಿಸುವ ಸಂದರ್ಭದಲ್ಲಿ ಕನರ್ಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಜಿ.ಸನ್ನಿ, ಪ್ರಧಾನ ಕಾರ್ಯದಶರ್ಿ ಅವಿನಾಶ ಹಿರೇಮಠ, ರಾಜ್ಯ ಕಾರ್ಯದಶರ್ಿ ಜಿ.ಕೆ.ತಳವಾರ, ವಿಭಾಗೀಯ ಪ್ರಮುಖರಾದ ದಯಾನಂದ ಸಿಕ್ಕೇ ಸೇರಿದಂತೆ ವಿವಿಧ ಪದಾಧಿಕಾರಿಗಳಾದ ಎಮ್.ಎಚ್.ಮಹೇಂದ್ರಕರ, ಎಚ್.ಎನ್.ನಾಯನೆಗಲಿ, ಎಸ್.ಎ. ಬರಮಗೌಡ್ರ, ಎಲ್.ವಿ.ವಿರಕ್ತಮಠ, ಪಿ.ಎಮ್.ಹೊಸಮನಿ, ವಿ.ಎಲ್.ಚವ್ಹಾಣ, ಅಶೋಕ ಮಾಡಗಿ ಸೇರಿದಂತೆ ಇತರರು ಇದ್ದರು.