ಲೋಕದರ್ಶನ ವರದಿ
ಮುದ್ದೇಬಿಹಾಳ: 10: ಪಟ್ಟಣದ ಬಸ್ ನಿಲ್ದಾಣ ಎದುರು, ತೋಟಗಾರಿಕೆ ಕಚೇರಿ ಕಂಪೌಂಡಿಗೆ ಹೊಂದಿಕೊಂಡು ಇರುವ ಬಡವರ ಡಬ್ಬಾ ಅಂಗಡಿಗಳನ್ನು ರಾಜ್ಯ ಹೆದ್ದಾರಿ ಅಗಲೀಕರಣ ನೆಪದಲ್ಲಿ ತೆರವುಗೊಳಿಲು ಹುನ್ನಾರ ನಡೆದಿದೆ. ಕೂಡಲೇ ಇದಕ್ಕೆ ಕಡಿವಾಣ ಹಾಕಿ ಬಡ ಕುಟುಂಬಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಡಬ್ಬಾ ಅಂಗಡಿಕಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸೋಮವಾರ ಇಲ್ಲಿನ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಪುರಸಭೆ ಮುಖ್ಯಾಧಿಕಾರಿ ಹಾಗೂ ಕೆಆರ್ಡಿಸಿಎಲ್ ಎಂಜಿನೀಯರುಗಳು, ಗುತ್ತಿಗೆದಾರರ ಪ್ರತಿನಿಧಿಗಳು ಈ ಡಬ್ಬಾ ಅಂಗಡಿ ತೆರವುಗೊಳಿಸಲು ಒತ್ತಡ ಹೇರುತ್ತಿದ್ದಾರೆ. ಸಕರ್ಾರದ ನಿಯಮದ ಪ್ರಕಾರ ರಸ್ತೆ ಮಧ್ಯದಿಂದ 11.25 ಮೀಟರ್ವರೆಗೆ ಮಾತ್ರ ಅಗಲೀಕರಣ ನಡೆಸಲು ಅವಕಾಶ ಇದೆ. ಇದರ ನಂತರದ ಅಳತೆಯಲ್ಲಿ ಬರುವ ಅಂಗಡಿಗಳನ್ನು ತೆರವುಗೊಳಿಸಲು ಅವಕಾಶ ಇಲ್ಲ. ಹೀಗಾಗಿ ಸಧ್ಯ ಡಬ್ಬಾ ಅಂಗಡಿ ತೆರವು ಹುನ್ನಾರ ತಡೆಗಟ್ಟಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ರಸ್ತೆಯ ಒಂದು ಬದಿ 11.25ಮೀಟರ್ಗಿಂತ ಹೆಚ್ಚು ಅಗಲೀಕರಣಗೊಳಿಸಿದಲ್ಲಿ ಹಲವಾರು ವರ್ಷಗಳಿಂದ ಡಬ್ಬಾ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿರುವ ಬಡಕುಟುಂಬಗಳು ಬೀದಿ ಪಾಲಾಗುತ್ತವೆ ಎನ್ನುವುದನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿಯಲ್ಲಿ ಕೋರಲಾಗಿದೆ. ಕಾಮಗಾರಿ ನಡೆಸುತ್ತಿರುವವರು ಈಗಾಗಲೇ ಒಂದು ಬದಿಗೆ 11.25 ಮೀಟರ್ ಅಗಲೀಕರಣ ಮಾಡಿದ್ದಾರೆ. ಇನ್ನೊಂದು ಬದಿಗೂ 11.25 ಮೀಟರ್ ಮಾಡುವುದನ್ನು ಬಿಟ್ಟು ಹೆಚ್ಚುವರಿಯಾಗಿ ಅಗಲೀಕರಣಕ್ಕೆ ಮುಂದಾಗಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ ಎಂದು ಖಂಡಿಸಲಾಗಿದೆ.
ಒಂದು ವೇಳೆ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಲೇಬೇಕು ಎನ್ನುವುದಾದಲ್ಲಿ ಈಗಾಗಲೇ ಇಲ್ಲಿ ವ್ಯಾಪಾರ ನಡೆಸುತ್ತಿರುವವರಿಗೆ ಪಯರ್ಾಯ ವ್ಯವಸ್ಥೆ ಕಲ್ಪಿಸಿ ನಂತರವೇ ತೆರವುಗೊಳಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಅಧಿಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹುಸೇನ ಮುಲ್ಲಾ, ಶ್ರೀಧರ ಮಡಿವಾಳರ, ಬಿ.ವೈ.ಮಡಿವಾಳರ, ಎಸ್.ಎಂ.ಪತ್ರಿ, ಪಿ.ಎನ್.ಕೋರವಾರಮಠ, ಪಿ.ಎಂ.ಉದಪುಡಿ, ಎನ್.ಎಂ.ಹಡಪದ, ಶೇಖಪ್ಪ ಹಡಪದ, ಸಿ.ಆರ್.ಕೆಂಧೂಳಿ, ಐ.ಪಿ.ಮಾಡಗಿ, ಅರುಣ ಪಾಟೀಲ, ಮುನ್ನಾ ಬಾಗವಾನ, ಬಸವರಾಜ ಬೆನಕಟ್ಟಿ, ಎ.ಎಲ್.ಮುಲ್ಲಾ, ಪಿ.ಆರ್.ಕೆಂಧೂಳಿ, ಎಚ್.ವೈ.ಕುಂದರಗಿ, ಆರ್.ಎಂ.ಜತ್ತಿ, ಮಮತಾಜ ಜಾನ್ವೇಕರ್ ಸೇರಿದಂತೆ ಹಲವರು ಮನವಿ ಸಲ್ಲಿಸುವಾಗ ಇದ್ದರು.