ಬೆಂಗಳೂರು, ಮಾ.19, ಕೊರೊನಾ ವೈರಸ್ ಹರಡದಂತೆ ಆಂಟಿವೈಕ್ರೊಬಿಯಲ್ ತಂತ್ರಜ್ಞಾನದ ಮೂಲಕ ವಾಹನಗಳನ್ನು ಶುದ್ಧೀಕರಿಸುವ ಸೇವೆಗೆ ಡ್ರೂವ್ ಸಂಸ್ಥೆಯು ಚಾಲನೆ ನೀಡಿದೆ. ಡ್ರಾಪ್ ಲೆಟ್ ಆಧಾರಿತ ವೈರಸ್ ಗಳು ವಾಹನದ ಮೇಲೆ ಉಳಿಯುವುದನ್ನು ಈ ತಂತ್ರಜ್ಞಾನ ನಾಶಪಡಿಸುತ್ತದೆ ಹಾಗು ಸುಮಾರು 4 ತಿಂಗಳಗಳ ಕಾಲ ವೈರಸ್ ಗಳು ವಾಹನದ ಮೇಲೆ ಇರುವುದಿಲ್ಲ. ಸಾರ್ಸ್ ಕಾಯಿಲೆ ಬಂದಾಗ ಈ ತಂತ್ರಜ್ಞಾನವನ್ನು ಬಳಸಲಾಗಿತ್ತು ಹಾಗು ಅದು ಯಶಸ್ಸು ಕೂಡ ಕಂಡಿತ್ತು.
ಈ ತಂತ್ರಜ್ಞಾನವನ್ನು ಬಳಸಿ ವಾಹನಗಳನ್ನು ಶುದ್ಧೀಕರಿಸಿದರೆ ವಾಹನದ ಮೇಲೆ ಬ್ಯಾಕ್ಟೀರಿಯಾ, ಆಲ್ಗೆ, ಈಸ್ಟ್ ಹಾಗು ಮತ್ತಿತರ ಸೂಕ್ಷಜೀವಿಗಳು ಬೆಳೆಯುವುದನ್ನು ತಡೆಗಟ್ಟುತ್ತದೆ. ಕೈಗೆಟುಕುವ ದರದಲ್ಲಿ ಈ ತಂತ್ರಜ್ಞಾನದ ಲಾಭವನ್ನು ಜನತೆ ಪಡೆದುಕೊಳ್ಳಬಹುದು. “ಯಾವುದೇ ವಸ್ತುವಿನ ಮೇಲ್ಪದರದ ಮೇಲೆ ಸೂಕ್ಷಜೀವಿಗಳು ಇರುತ್ತವೆ. ಇವುಗಳನ್ನು ಮುಟ್ಟುವುದರಿಂದ ರೋಗಗಳು ಹರಡುವ ಸಾಧ್ಯತೆ ಹೆಚ್ಚು. ಕೊರೊನಾ ವೈರೆಸ್ ಸುಮಾರು 4 ದಿನಗಳ ಕಾಲ ಮೇಲ್ಪದರದ ಮೇಲೆ ಬದುಕುತ್ತದೆ ಎನ್ನಲಾಗುತ್ತಿದೆ. 14 ದಿನಗಳ ನಂತರ ಜನರು ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಅವರ ವಾಹನಗಳು ಕೊರೊನಾ ವೈರೆಸ್ ನಿಂದ ಮುಕ್ತವಾಗಿಸಲು ಈ ತಂತ್ರಜ್ಞಾನ ಬಹಳ ಅನುಕೂಲಕಾರಿ” ಎಂದು ಡ್ರೂಮ್ ಸಂಸ್ಥೆಯ ಎಂಟರ್ ಪ್ರೈಸಸ್ ಅಂಡ್ ಸ್ಟ್ರಾಟಜಿ ವಿಭಾಗದ ಉಪಾಧ್ಯಕ್ಷ ಅಕ್ಷಯ್ ಸಿಂಗ್ ತಿಳಿಸಿದ್ದಾರೆ.