ಸೊನ್ನಲಿಗೆ ಸಿದ್ದರಾಮೇಶ್ವರ ಜಯಂತಿ ಆಚರಣೆ
ಮಹಾಲಿಂಗಪುರ: ನಗರದ ಕೇಂಗೇರಿಮಡ್ಡಿ ಬಡಾವಣೆಯಲ್ಲಿ ಕಾಯಕಯೋಗಿ ಸಿದ್ಧರಾಮೇಶ್ವರ 852ನೇಯ ಜಯಂತಿಯ ಅಂಗವಾಗಿ ಮಾತನಾಡಿದ ಶೇಖರ ಅಂಗಡಿ 12ನೇ ಶತಮಾನದಲ್ಲಿ ಕೆರೆ ಕಟ್ಟೆಗಳನ್ನು ಕಟ್ಟಿಸುವ ಮೂಲಕ ತನ್ನದೇ ಆದ ಕಾಯಕ ಮಾಡುತ್ತಿದ್ದ ಸಿದ್ದರಾಮೇಶ್ವರರು, ಅಲ್ಲಮ ಪ್ರಭುದೇವ ಅವನನ್ನು ಕಲ್ಯಾಣಕ್ಕೆ ಕರೆದೋಯ್ದು ಚೆನ್ನಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆ ಕೊಡಿಸಿದ ಬಸವಾದಿ ಶಿವಶರಣರ ಜತೆಯಲ್ಲಿ ಶರಣ ತತ್ವಗಳನ್ನು ಅನುಷ್ಠಾನ ಮಾಡುತ್ತಿದ್ದ. ಅಂದಿನಿಂದಲೂ ಸಿದ್ದರಾಮೇಶ್ವರನ ಭಕ್ತರು ಮತ್ತು ಅನುಯಾಯಿಗಳು ನಾಡಿನ ಉದ್ದಗಲಕ್ಕೂ ನೆಲೆಸಿದ್ದಾರೆ ಎಂದರು.
ಫೋಟೋ ಪೂಜೆ ಮಾಡಿ ಪುಷ್ಪಾರ್ಚನೆ ಮಾಡುವ ಮುಖಂತಾರ ಜಯಂತಿ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಶೇಖರ ಅಂಗಡಿ, ವಿಠ್ಠಲ ಕುಳಲಿ, ಮುತ್ತಪ್ಪ ಕುಂದ್ರಾಳ, ಗಂಗಪ್ಪ ದಿನ್ನಿಮನಿ, ಭೋವಿ ಸಮಾಜಯ ಮುಖಂಡರಾದ ತಿಪ್ಪಣ್ಣ ಬಂಡಿವಡ್ಡರ, ಬಸವರಾಜ ಬಂಡಿವಡ್ಡರ, ತಿಪ್ಪಣ್ಣ ಪಾತ್ರೋಟ, ಸಿದ್ರಾಮ ಬಂಡಿವಡ್ಡರ, ಮಹೇಶ ಗಾಡಿವಡ್ಡರ, ಮಹೇಶ್ ಪಾತ್ರೋಟ, ಪವನ ಪಾತ್ರೋಟ, ಬಾಲರಾಜ ರಬಕವಿ, ಪಿಂಟು ದಳವಾಯಿ, ಯಲ್ಲಪ್ಪ ಪಾತ್ರೋಟ, ಲಕ್ಷ್ಮಣ ಬಂಡಿವಡ್ಡರ, ರಾಮು ಬಂಡಿವಡ್ಡರ, ಯಂಕಪ್ಪ ಬಂಡಿವಡ್ಡರ, ಹಣಮಂತ ಬಂಡಿವಡ್ಡರ, ಅಣ್ಣಪ್ಪ ಬಂಡಿವಡ್ಡರ, ತಮ್ಮಣ್ಣ ಬಂಡಿವಡ್ಡರ, ಮಹಾಲಿಂಗಪ್ಪ ಬಂಡಿವಡ್ಡರ ಇನ್ನು ಕೆಲವರು ಇದ್ದರು.