ಗವಿಮಠಕ್ಕೆ ರೊಟ್ಟಿ, ನಿಂಬೆ ಹಣ್ಣು, 20ಕ್ವಿಂಟಾಲ್ ಶೇಂಗಾ ಚಟ್ನಿ, ಮೆಣಸಿನಕಾಯಿ, ಬೆಲ್ಲ ಭಕ್ತರಿಂದ ಅರೆ್ಣ
ಕೊಪ್ಪಳ 15: ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮ ಪಂಚಾಯಿತಿ ನರೇಗಾ ಕೂಲಿ ಕಾರ್ಮಿಕರ ವತಿಯಿಂದ ಕೊಪ್ಪಳ ಗವಿಸಿದ್ದೇಶ್ವರ ಮಠಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಮಠದಜಾತ್ರಾ ಮಹಾದಾಸೋಹಕ್ಕೆ ಹತ್ತು ಸಾವಿರರೊಟ್ಟಿ, 2 ಕ್ವಿಂಟಲ್ ಕರ್ಚಿಕಾಯಿ (ಕಡಬು),50ಕೆ.ಜಿ. ಕಾಳು ಗವಿಸಿದ್ದೇಶ್ವರ ಮಠಕ್ಕೆ ಹನುಮನಾಳದ ಹಾಗೂ ತುಗ್ಗಲದೋಣಿ ಸಧ್ಬಕ್ತರು ಭಜನಾ ಮುಖಾಂತರ 26 ರಂದು ಮಠಕ್ಕೆ ಅರ್ಿಸಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕುಷ್ಟಗಿ ತಾಲೂಕ ತಾವರಗೇರಾ ಹಾಗೂ ಹಂಚಿನಾಳ ಗ್ರಾಮಸ್ಥರಿಂದ ಲಿಂಬಿಕಾಯಿ, ಉಪ್ಪಿನಕಾಯಿ, ಹುಣಸೆಕಾಯಿ ಚಟ್ನಿಗಳನ್ನು ತಯಾರು ಮಾಡಲಾಗುತ್ತಿದೆ. ಸುಮಾರು 27 ಸಾವಿರ ನಿಂಬೆ ಹಣ್ಣುಗಳಿಂದ ತಯಾರಿಸಿದ ನಿಂಬೆಕಾಯಿ ಚಟ್ನಿಯನ್ನು ಹದಿನೈದು ದಿನಗಳ ಕಾಲ ನಡೆಯುವ ಜಾತ್ರಾ ಮಹಾ ದಾಸೋಹಕ್ಕಾಗಿ ಎರಡು ಗ್ರಾಮದ ಗ್ರಾಮಸ್ಥರು ತಯಾರಿಸಿ ಮಠಕ್ಕೆ ತಂದು ಅರ್ಿಸಲಿದ್ದಾರೆ.
ಗುಲ್ಬರ್ಗಾ ಜಿಲ್ಲೆಯ ಜೀವರ್ಗಿ ತಾಲೂಕ ಹಾಗರ ಗುಂಡಿ ಗ್ರಾಮದಿಂದ 20ಕ್ವಿಂಟಲ್ ಶೇಂಗಾ ಚಟ್ನಿಯನ್ನು ಕೈಯಿಂದ ಕುಟ್ಟಿ ಪುಡಿ ಮಾಡಿ ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ. ಈ ಗ್ರಾಮದ ಸದ್ಭಕ್ತರು ಜಾತ್ರೆಯ ಮುನ್ನಾದಿನ ಮಠಕ್ಕೆ ಅರ್ಿಸಲಿದ್ದಾರೆ. ಬ್ಯಾಡಗಿ ನಗರದ ಮೆಣಸಿನಕಾಯಿ ವರ್ತಕರಿಂದ ಜಾತ್ರಾ ಮಹಾ ದಾಸೋಹಕ್ಕಾಗಿ ಸುಮಾರು 21 ಚೀಲ ಮೆಣಸಿನಕಾಯಿ ಚೀಲಗಳನ್ನು ಕೆಂಪು ಚಟ್ನಿ ತಯಾರ ಮಾಡುವುದಕ್ಕಾಗಿ ಜಾತ್ರಾ ಮಹಾ ದಾಸೋಹಕ್ಕೆ ಸಲ್ಲಿಸಿದ್ದಾರೆ. ಕೊಪ್ಪಳ ತಾಲೂಕಿನ ಗುಡಗೇರಿ ಗ್ರಾಮದ ಭಕ್ತರಿಂದ 3000 ರೊಟ್ಟಿ, 2 ಹೆಸರು ಪ್ಯಾಕೆಟ್ ಇತರ ಧಾನ್ಯಗಳನ್ನು, ರೋಣ ತಾಲೂಕು ಇಟಗಿ ಗ್ರಾಮದ ಗವಿಸಿದ್ದೇಶ್ವರ ಶಾಖಾ ಮಠದ ಸದ್ಭಕ್ತರಿಂದ ಕೊಪ್ಪಳ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಮಹಾಪ್ರಸಾದಕ್ಕೆ 11 ಕ್ವಿಂಟಲ್ ಲಾಡು ಮಹಾ ಪ್ರಸಾದವನ್ನು ಸಮರ್ಿಸಿದ್ದಾರೆ. ದಾನಿಗಳಿಗೆ ಪೂಜ್ಯರು ಆಶಿರ್ವದಿಸಿದ್ದಾರೆ.