ಓಷಧೀಯ ಭವನದಲ್ಲಿ ನಡೆದ ಪ್ಲಾಸ್ಟಿಕ್ ಬಳಕೆಯ ವಿರೋಧಿ ಕಾರ್ಯಕ್ರಮ
ಗಂಗಾವತಿ 20: ಜನ ಪ್ರತಿನಿಧಿಗಳಿಗೆ ಅಭಿವೃದ್ಧಿ ಕೆಲಸಮಾಡುವ ಇಚ್ಚಾ ಶಕ್ತಿ ಇರಬೇಕು ಎಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಯಲಬುರ್ಗಾ ತಾಲೂಕು ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಭಾನಾಪೂರ ಹೇಳಿದರು.ಬುಧವಾರದಂದು ನಗರದ ಓಷಧೀಯ ಭವನದಲ್ಲಿ ನಡೆದ ಪ್ಲಾಸ್ಟಿಕ್ ಬಳಕೆಯ ವಿರೋಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.ಗಂಗಾವತಿ-ದರೋಜಿ-ಬಾಗಲಕೋಟ್ ನೂತನ ರೇಲ್ವೆ ಲೈನ್ ಮಾರ್ಗಕ್ಕೆ ಅನುದಾನ, ಸಿಂಧನೂರು-ರಾಯಚೂರು ರೇಲ್ವೇ ಲೈನ್ ಮಾರ್ಗದ ರಚನೆ, ಸಿಂಧನೂರು-ಗೋವಾ ನೂತನ ರೈಲು ಆರಂಭಿಸಲು,ಭೂದುಗುಂಪಾ-ಗಂಗಾವತಿ-ಬಳ್ಳಾರಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಮತ್ತು ಕಲಬುರ್ಗಿ-ಮುದಗಲ್ ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸುವಂತೆ ಕೋರಿ ನಮ್ಮ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಬಹಳ ಪ್ರಯತ್ನ ಮಾಡುತ್ತಿದ್ದಾರೆ.ಅವರಿಗಿರುವ ಇಚ್ಚಾಶಕ್ತಿ ಜನ ಪ್ರತಿನಿಧಿಗಳಿಗೆ ಬೇಕು,ಆಗ ಮಾತ್ರ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ,ಅಶೋಕಸ್ವಾಮಿ ಹೇರೂರ ಜನಪರ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಪರಿಗಣಿಸಬೇಕು ಎಂದು ಅಭಿಪ್ರಾಯ ಪಟ್ಟರು.ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರರಾದ ಶಾಸಕ ರಾಯರೆಡ್ಡಿಯವರ ಇಚ್ಚಾ ಶಕ್ತಿಯಿಂದ ಇಡೀ ಯಲಬುರ್ಗಾ ಕ್ಷೇತ್ರ ಅಭಿವೃದ್ಧಿಯತ್ತ ಸಾಗಿದೆ.ಇದೇ ರೀತಿಯ ಆಕಾಂಕ್ಷೆ ಎಲ್ಲಾ ರಾಜಕಾರಣಿಗಳಲ್ಲಿ ಬರಬೇಕು,ಇಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ ಎಂದರು.ಈ ಸಂಧರ್ಭದಲ್ಲಿ ಗಂಗಾವತಿ-ದರೋಜಿ- ಬಾಗಲಕೋಟ ನೂತನ ರೇಲ್ವೇ ಮಾರ್ಗ ರಚನೆಯ ಬಗ್ಗೆ ಮಂತ್ರಿ ಮಂಡಳಿಯ ತೀರ್ಮಾನ ತೀರ್ಮಾನದ ಆದೇಶ ಮತ್ತು ರಾಜ್ಯ ಸರಕಾರ ಮಂಜೂರು ಮಾಡುವ ಹಣವನ್ನು ಬಿಡುಗಡೆ ಮಾಡುವ ಕೆಲಸ ರಾಜ್ಯ ಸರಕಾರದಲ್ಲಿ ಬಾಕಿ ಇದ್ದು, ಶಾಸಕ ರಾಯರೆಡ್ಡಿಯವರ ಮೂಲಕ ಈ ಕೆಲಸ ಮಾಡಿಸಿಕೊಡಬೇಕೆಂದು ಚಂದ್ರಶೇಖರಯ್ಯ ಅವರನ್ನು ಹೇರೂರ ಕೋರಿದರು.ಈ ಬಗ್ಗೆ ಭರವಸೆ ನೀಡಿದ ಅವರು ರಾಯರೆಡ್ಡಿಯವರನ್ನು ಭೇಟಿಯಾಗಿ ವಿಷಯಗಳನ್ನು ಚರ್ಚಿಸೋಣ ಎಂದು ಹೇಳಿದರು.ಗಂಗಾವತಿ ಭಾಗದಿಂದ ರೇಲ್ವೆ ಇಲಾಖೆಗೆ ಸಾಕಷ್ಟು ಲಾಭವಿದ್ದು,ರೇಲ್ವೆ ಇಲಾಖೆಯವರು ಈ ಭಾಗದ ಹೊಸ ಮಾರ್ಗಗಳನ್ನು ರಚಿಸಲು ಕೂಡಲೇ ಮುಂದಾಗಬೇಕೆಂದು ಅವರು ಕರೆ ನೀಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಲಿಂಗಾರೆಡ್ಡಿ ಆಲೂರ, ಪತ್ರಿಕೋದ್ಯಮದ ಪ್ರಶಸ್ತಿಗಳಿಗೆ ಭಾಜನರಾದ ವೀರಾಪೂರ ಕೃಷ್ಣ, ಚಂದ್ರಶೇಖರ ಮುಕ್ಕುಂದಿ,ಸಹಕಾರಿ ರತ್ನ ಪ್ರಶಸ್ತಿ ಪಡೆದ ದೊಡ್ಡಪ್ಪ ದೇಸಾಯಿ, ಹಿರಿಯ ಪತ್ರಕರ್ತರಾದ ವಿ.ಎಸ್.ಪಾಟೀಲ್, ನಗರಸಭಾ ಸದಸ್ಯರಾದ ಮನೋಹರ ಸ್ವಾಮಿ,ನ್ಯಾಯವಾದಿ ಸಂಧ್ಯಾ ಹೇರೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಚಂದ್ರಶೇಖರಯ್ಯ ಹೇರೂರ, ವೀರಣ್ಣ ಕಾರಂಜಿ, ಅಮರೇಶ್ ಅರಳಿ,ಮಂಜುನಾಥ ಸುಳೇಕಲ್ ಸೇರಿದಂತೆ ಹಲವು ಓಷಧ ವ್ಯಾಪಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.