ಥಾಣೆ, ಜೂನ್ 2, ಕರೋನ ಸೋಂಕಿಗೆ ಥಾಣೆ ನಗರ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದು, ಈವರೆಗೆ ಇಬ್ಬರು ಮಾರಕ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಲ್ಹಾಸ್‌ನಗರ ವಿಭಾಗದ ಪೊಲೀಸ್ ಸಿಬ್ಬಂದಿ ಕಳದೆ 27 ರಂದು ನಿಧನರಾಗಿದ್ದು, ನಂತರ ಮೇ 30 ರಂದು ನಡೆದ ಗಂಟಲು ದ್ರವ ಪರೀಕ್ಷೆಯಲ್ಲಿ ಮೃತರಿಗೆ ಕರೋನಾ ಸೋಂಕು ಇರುವುದು ವೈದ್ಯಕೀಯ ವರದಿಯಿಂದ ಖಚಿತವಾಗಿದೆ ಎಂದು ಅವರು ಹೇಳಿದರು.
ಇದಕ್ಕೂ ಮೊದಲು, ಕೆಲವು ವಾರಗಳ ಹಿಂದೆ, ಸೋಂಕಿಗೆ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಸಾವನ್ನಪ್ಪಿದ್ದರು.ಈ ನಡುವೆ ಜಿಲ್ಲಾ ಕೇಂದ್ರ ಕಚೇರಿಯಿಂದ ಬಂದ ವರದಿಗಳ ಪ್ರಕಾರ 398 ಹೊಸ ಪ್ರಕರಣಗಳ ಸೇರ್ಪಡೆಯಿಂದ , ಜಿಲ್ಲೆಯಲ್ಲಿ ಒಟ್ಟು ರೋಗಿಗಳ ಸಂಖ್ಯೆ 8,665 ಕ್ಕೆಏರಿಕೆಯಾಗಿದೆ. ಒಂದೇ ದಿನ 17 ಸಾವುಗಳು ಸಂಭವಿಸಿದ್ದು, ಜಿಲ್ಲೆಯಲ್ಲಿ ಈವರೆಗೆ 273 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.ಥಾಣೆ ನಗರದಲ್ಲಿ ಇಂದಿನವರೆಗೂ 94 ಸಾವುಗಳನ್ನು ವರದಿಯಾಗಿದ್ದರೆ. ನೆರೆಯ ನವೀ ಮುಂಬಯಿನಲ್ಲಿ ಇಲ್ಲಿಯವರೆಗೆ ಒಟ್ಟು 75 ಸಾವಿನ ಪ್ರಕರಣ ವರದಿಯಾಗಿದೆ.