ಮಹಾರಾಷ್ಟ್ರದ ನಾಗಪುರದಲ್ಲಿ ಮತ್ತೊಂದು ಸೋಂಕು ಪ್ರಕರಣ ದಾಖಲು

ನಾಗ್ಪುರ, ಎಪ್ರಿಲ್ 4,ದೆಹಲಿ ಧಾರ್ಮಿಕ ಸಭೆಗೆ ಹಾಜರಾಗಿದ್ದ ರಾಜ್ಯದ  ಮತ್ತೊಬ್ಬ   ವ್ಯಕ್ತಿಗೆ ಕರೋನ ಸೋಂಕು ಇರುವುದು ವೈದ್ಯಕೀಯ ಪರೀಕ್ಷೆಯಿಂದ  ಖಚಿತವಾಗಿದೆ. ಮೂಲಗಳ ಪ್ರಕಾರ, ನಾಲ್ಕು ಜನರ ಗಂಟಲಿನ ಸ್ವ್ಯಾಬ್ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು  ಅದರಲ್ಲಿ ಒಬ್ಬರಿಗೆ ಸೋಂಕು ಇರುವುದು ಖಚಿತವಾಗಿದ್ದು ಅವರನ್ನು ಇಲ್ಲಿನ ಜನರಲ್ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ನಲ್ಲಿ, ಅವರ ಜೊತೆ ಸಂಪರ್ಕ  ಹೊಂದಿದ , ಇತರ  ಮೂವರನ್ನು ಕ್ಯಾರೆಂಟೈನ್ ವಾರ್ಡ್ನಲ್ಲಿ ಇರಿಸಲಾಗಿದೆ.ಆರಂಭದಲ್ಲಿ ವ್ಯಕ್ತಿಯು ದೆಹಲಿ ಮಾರ್ಕಜ್ ಭೇಟಿ  ನೀಡುವುದನ್ನು ನಿರಾಕರಿಸಿದ್ದರು ಆದರೆ ಅಂತಿಮವಾಗಿ ಅವರು ಅಲ್ಲಿದ್ದರು ಎಂಬುದು ನಂತರ  ಮೊಬೈಲ್ ಸ್ಥಳ ಖಚಿತಪಡಿಸಿದ ನಂತರ ಅವರು ಕೊನೆಗೆ ಸತ್ಯ ಒಪ್ಪಿಕೊಂಡರು.ಇನ್ನೂ ಇಬ್ಬರು ವ್ಯಕ್ತಿಗಳ ಮಾದರಿ ವರದಿಗಾಗಿ  ಕಾಯಲಾಗುತ್ತಿದೆ  ಎಂದು ಮೂಲಗಳು ತಿಳಿಸಿವೆ.