ವಾರ್ಷಿಕ ಸ್ನೇಹ ಸಮ್ಮೇಳನ ಪಾರಿತೋಷಕ ವಿತರಣೆ

ವಾರ್ಷಿಕ ಸ್ನೇಹ ಸಮ್ಮೇಳನ ಪಾರಿತೋಷಕ ವಿತರಣೆ  Annual Friendship Conference Award Distribution

ಲೋಕದರ್ಶನ ವರದಿ 

ಯಮಕನಮರಡಿ 18 : ಸ್ಥಳೀಯ ಸಿಈಎಸ್ ವಾಣಿಜ್ಯ ಮಹಾವಿದ್ಯಾಲಯ ಸನ್ 25 26ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವು ದಿನಾಂಕ 16 ರಂದು ಕಾಲೇಜಿನ ಸಭಾಭವನದಲ್ಲಿ ಯಶಸ್ವಿಯಾಗಿ  ಜರುಗಿತು ಆರಂಭದಲ್ಲಿ ಪ್ರಾಚಾರ್ಯ ಕುಮಾರಿ ಅರುಣ ಸೂಜಿ ಅವರು ಸ್ವಾಗತಿಸಿ ಪರಿಚಯ ಭಾಷಣ ಮಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಿರಣ್ ಕಮತೆ ಐಎಎಸ್ ಭಾರತೀಯ ಆಡಳಿತ ಸೇವ ತರಬೇತಿದಾರರು ಆಗಮಿಸಿ ಮಾತನಾಡುತ್ತ ವಿದ್ಯಾರ್ಥಿಗಳು ಮುಂದಿನ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿ ಕೊಳ್ಳಬೇಕಾದರೆ ಏಕ ಚಿತ್ತದಿಂದ ಅಧ್ಯಯನ ಮಾಡಿ ಹೆಚ್ಚಿನ ಅಂಕಗಳನ್ನು ಪಡೆಯಿರಿ ಮುಂದಿನ ತಮ್ಮ ಯುಪಿಎಸ್ ಐಪಿಎಸ್ ಐಎಎಸ್ ಪದವಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿ ಸದರಿ ಸಿಈಎಸ್ ಸಂಸ್ಥೆಗೆ ಹೆಸರು ತರಬೇಕೆಂದು ಹೇಳಿದರು. 

 ಈಗಾಗಲೇ ಸಿಈಎಸ್ ಸಂಸ್ಥೆಯಿಂದ ವಿದ್ಯೆ ಪಡೆದ ವಿದ್ಯಾರ್ಥಿಗಳು ವಿದೇಶಗಳಲ್ಲಿ ಉನ್ನತ ಸ್ಥಾನಗಳಲ್ಲಿ ನೌಕರಿ ಮಾಡುವದರ ಜೊತೆಗೆ ನಮ್ಮ ಸಂಸ್ಥೆಯ ದೇಶದ ಹೆಸರು ತಂದವರಾಗಿದ್ದಾರೆ ಅದರಂತೆ ತಾವುಗಳು ಉತ್ತಮ ವಿದ್ಯಾವಂತರಾಗಿ ಹೊರಹೊಮ್ಮಬೇಕೆಂದು ಹೇಳಿದರು. ಸಂಸ್ಥೆಯ ಉಪಾಧ್ಯಕ್ಷರಾದ ಈರಣ್ಣ ದುಗ್ಗಾಣ್ಣಿ ಮೋಹನ್ ತುಬಚಿ ಪ್ರಾಚಾರ್ಯ ವಿಬಿ ನಾಶಿಪೂಡಿ ನಿವೃತ್ತಿ ಪ್ರಾಚಾರ್ಯ ಅವಲಕ್ಕಿ ಹಾಗೂ ಉಪನ್ಯಾಸಕಿಯರ ಬಳಗ ಉಪಸ್ಥಿತರಿದ್ದು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಪಾರಿತೋಷಕ ವಿತರಣಾ ಸಮಾರಂಭವು ಜರುಗಿತು.