ಗದಗ-ಬೆಟಗೇರಿ ಮುಸ್ಲಿಂ ಸಮಾಜದ ವೇದಿಕೆಯಿಂದ ಎಸ್.ಐ.ಆರ್ ಕುರಿತು ಸಮಾಲೋಚನಾ ಸಭೆ
Gadag-Betageri Muslim Community Forum holds consultation meeting on SIR
ಲೋಕದರ್ಶನ ವರದಿ
ಗದಗ 18: ನಮ್ಮ ಭಾರತ ದೇಶದ ಸಂವಿಧಾನ ಎಲ್ಲಾ ನಾಗರೀಕರಿಗೊ ತಮ್ಮ ಮತವನ್ನು ಚಲಾಯಿಸುವ ಮೂಲಕ ಸರ್ಕಾರ ರಚನೆಗೆ ಅವಕಾಶ ನೀಡಿದೆ. ಆದರೆ ಕೇಂದ್ರ ಸರ್ಕಾರದ ಕುತಂತ್ರದಿಂದ ಮತ್ತು ಚುನಾವಣೆ ಆಯೋಗದ ಸಂವಿಧಾನ ವಿರೋಧಿ ನಡೆಯಿಂದ ಎಸ್.ಐ.ಆರ್ ಪ್ರಕ್ರಿಯೆ ಮೂಲಕ ನಮ್ಮ ಸಂವಿಧಾನಬದ್ದ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಗದಗ-ಬೆಟಗೇರಿ ಮುಸ್ಲಿಂ ಸಮಾಜದ ವೇದಿಕೆ ಅಧ್ಯಕ್ಷರಾದ ಮಹ್ಮದಯುಸುಫ ನಮಾಜಿ ಹೇಳಿದರು. ಅವರು ಗದಗ ನಗರದಲ್ಲಿ ಎಸ್.ಐ.ಆರ್. ಕುರಿತು ವೇದಿಕೆ ಪದಾಧಿಕಾರಿಗಳ ಮತ್ತು ಅಲ್ಪಸಂಖ್ಯಾತರ ಸಮುದಾಯದ ಮುಖಂಡರ ಸಮಾಲೋಚನೆ ಸಭೆಯನ್ನು ಉದ್ದೇಶಿಸಿ ಮಾತನಾಡಿ ಇತ್ತಿಚ್ಚಿಗೆ ಬಿಹಾರ ಮತ್ತು ಪಶ್ಚಿಮ ಬಂಗಾಳ ಚುನಾವಣೆ ಸಂದರ್ಭದಲ್ಲಿ ಚುನಾವಣೆ ಆಯೋಗದಿಂದ ನಡೆಸಲಾಗಿರುವ ಎಸ್.ಐ.ಆರ್ ಪ್ರಕ್ರಿಯೆದಿಂದ ಲಕ್ಷಾಂತರ ಜನರನ್ನು ಮತದಾನದ ಹಕ್ಕನಿಂದ ವಂಚಿಸಲಾಗಿದೆ.
ಚುನಾವಣೆ ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಎಸ್.ಐ.ಆರ್‌ನಲ್ಲಿ ಮತದಾನದ ಹಕ್ಕನ್ನು ಕಳೆದುಕೊಂಡಿರುವ ಜನರಿಗೆ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಕಲ್ಪಿಸಲಾಗುವುದಿಲ್ಲ ಎಂದು ನೇರವಾಗಿ ಘೋಷಣೆ ಮಾಡಿದೆ. ಆದ ಕಾರಣ ಎಸ್.ಐ.ಆರ್. ನಡೆಸುವ ಉದ್ದೇಶ ಏನ್ನು ಎಂಬುದನ್ನು ನಾವು ಅರ್ಥ ಮಾಡಿಕೊಂಡು ಪ್ರತಿಯೂಬ್ಬ ಕಾರ್ಯಕರತರು ಎಸ್.ಐ.ಆರ್ ಪ್ರಕ್ರಿಯೆ ಸಂದರ್ಭದಲ್ಲಿ ನಮ್ಮ ಸಮುದಾಯದ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಬೇಕೆಂದು ಹೇಳಿದರು. ವೇದಿಕೆ ಕಾರ್ಯದರ್ಶಿ ಇಮ್ತಿಯಾಜ.ಆರ್.ಮಾನ್ವಿ ಪ್ರಾಸ್ತಾವಿಕವಾಗಿ ಮಾತನಾಡಿ ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ತಮ್ಮ ಕೈಗೊಂಬೆಯಾಗಿ ಉಪಯೋಗಿಸಿ ದೇಶದಲ್ಲಿ ಎಸ್.ಐ.ಆರ್. ವಿಶೇಷ ತೀವ್ರ ಪರಿಷ್ಕರಣೆ ನೆಪ್ಪದಲ್ಲಿ ಭಾರತ ದೇಶದ ಮೂಲ ನಿವಾಸಿಗಳ ಸಂವಿಧಾನಬದ್ದ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿದೆ.
ಮತದಾರರ ವಿಶೇಷ ಪರಿಷ್ಕರಣೆ ಹಿಂದೆ ಕೇಂದ್ರದ ಬಿಜೆಪಿ ಸರ್ಕಾರದ ಕುತಂತ್ರ ಇದೆ. ಚುನಾವಣಾ ಆಯೋವನ್ನು ದುರಪಯೋಗ ಪಡಿಸಿಕೊಂಡು ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿರಿಸಿ ಚುನಾವಣೆ ಗೆಲ್ಲಲು ಬಿಜೆಪಿ ಈ ಪರಿಷ್ಕರಣೆ ನಡೆಸುತ್ತಿದೆ. ಹಾಗಾಗಿ ನಾವು ಎಲ್ಲರೂ ಒಗ್ಗೂಡಿ ಎಸ್.ಐ.ಆರ್ ಪ್ರಕ್ರಿಯೆ ನಡೆಯುವ ಸಮಯದಲ್ಲಿ ಜನಜಾಗೃತ ಆಂದೋಲನ ಮಾಡಬೇಕಾಗಿದೆ ಎಂದು ಹೇಳಿದರು. ಎಂ.ಬಿ.ನದಾಫ ವಕೀಲರು ಮಾತನಾಡಿ ಎಸ್.ಐ.ಆರ್. ಪ್ರಕ್ರಿಯೆ ಸಂವಿಧಾನ ವಿರೋಧಿಯಾಗಿದೆ ಇದನ್ನು ಎಲ್ಲಾ ಸಮುದಾಯಗಳು ಒಗ್ಗೂಡಿ ಖಂಡಿಸಬೇಕು. ಎಸ್.ಐ.ಆರ್ ಪ್ರಕ್ರಿಯೆ ನಡೆಯುವ ಸಮಯದಲ್ಲಿ ನಮ್ಮ ಸಮುದಾಯದ ಯುವಕರು ಬೂತ್ ಮಟ್ಟದಲ್ಲಿ ಸ್ವಯಂ ಪ್ರೇರಿತವಾಗಿ ಕೆಲಸ ಮಾಡಿ ಜನರ ಸಂವಿಧಾನಬದ್ದ ಮತದಾನದ ಹಕ್ಕನ್ನು ಕಾಪಾಡಲು ಮುಂದಾಗಬೇಕೆಂದು ಹೇಳಿದರು. ನಗರಸಭೆ ಸದಸ್ಯರಾದ ಜೂನಸಾನ ನಮಾಜಿ ಮಾತನಾಡಿ ಗದಗ-ಬೆಟಗೇರಿ ನಗರದ ಎಲ್ಲಾ ವಾರ್ಡಗಳಲ್ಲಿ ಯುವರಕನ್ನು ಸೇರಿಸಿ ಮಾಹಿತಿ ನೀಡುವ ಜೊತೆಗೆ ಎಸ್.ಐ.ಆರ್ ಪ್ರಕ್ರಿಯೆದಲ್ಲಿ ಕೇಳಲಾಗುವ ಎಲ್ಲಾ ದಾಖಲೆಗಳನ್ನು ಕೂಡ್ರಿಕರಿಸಲು ತಿಳಿಸಬೇಕು.
ಗದಗ-ಬೆಟಗೇರಿ ಮುಸ್ಲಿಂ ಸಮಾಜದ ವೇದಿಕೆಯಿಂದ ವಾರ್ಡ ಮಟ್ಟದಲ್ಲಿ ಹಾಗೂ ಬೂತ್ ಮಟ್ಟಗಳಲ್ಲಿ ಜನಜಾಗೃತ ಆಂದೋಲನ ಪ್ರಾರಂಭಿಸಬೇಕೆಂದು ತಿಳಿಸಿದರು. ಜಮಿಯತೆ ಉಲ್ಲಮಾ ಸಂಘಟನೆ ಮುಖಂಡರಾದ ಮೌಲಾನಾ ಶಬ್ಬೀರಹ್ಮದ ಬೋದ್ಲೇಖಾನ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆ ಮುಖಂಡರಾದ ಅನ್ವರ ಶಿರಹಟ್ಟಿ ಕಾರ್ಯಕ್ರಮ ನಿರೊಪಿಸಿ ವಂದಿಸಿದರು. ವೇದಿಕೆ ಮುಖಂಡರಾದ ಬಾಬಾಜಾನ ಬಳಗಾನೂರ, ಮುನ್ನಾ ಶೇಖ, ರಫೀಕ ಜಮಾಲಖಾನವರ, ಅಂಜುಮನ ಸಂಸ್ಥೆಯ ನಿರ್ದೇಶಕರಾದ ಸುಲೇಮಾನ ಮಾಳೆಕೊಪ್ಪ, ಇರ್ಫಾನ ಡಂಬಳ, ವಾಶೀಮ ಖಾಜಿ, ಅಸ್ಲಂ ಎಸ್.ಜಿ, ಉಮರಫಾರುಖ ಹುಬ್ಬಳ್ಳಿ, ಎ.ಹೆಚ್.ಹೊಸಳ್ಳಿ, ಅಲ್ತಾಫ ಹುಬ್ಬಳ್ಳಿ, ಅಲ್ಲಾಭಕ್ಷ ದೊಡ್ಡಮನಿ, ದಾವಲಸಾಬ ಇರಕಲ್ಲ, ಇಬ್ರಾಹಿಂ ಹಳ್ಳಿಕೇರಿ, ಮಹ್ಮದಸಾಬ ಮುಲ್ಲಾ, ಕರೀಮಸಾಬ ಸುಣಗಾರ, ಆರೀಫ ಹುನಗುಂದ, ಸಾದೀಕ ನರೇಗಲ್ಲ, ಮುನ್ನಾ ಕಲ್ಮನಿ, ರಿಯಾಜ ಪಾಮಡಿ, ಶಬ್ಬೀರ ಪೀರಜಾದೆ, ಮೌಲಾಸಾಬ ಗಚ್ಚಿ ಹಾಗೂ ನೂರಾರು ಪದಾಧಿಕಾರಿಗಳು ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿದ್ದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 