ವಾರ್ಷಿಕೋತ್ಸವ, ರಾಷ್ಟ್ರ ಮಟ್ಟದ ತಾಂತ್ರಿಕ ಉತ್ಸವ ಕಾರ್ಯಕ್ರಮ
ಬೆಳಗಾವಿ, 26; ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಪರಮ ಪೂಜ್ಯ ಶ್ರೀ. ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿಗಳು ಹಾಗೂ ಪೂಜ್ಯಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ರಾಷ್ಟ್ರ ಮಟ್ಟದ ತಾಂತ್ರಿಕ ಉತ್ಸವ ಕಾರ್ಯಕ್ರಮ “ಬ್ಲಿಸ್ 2025” ಮಾರ್ಚ, 27 ರಂದು ನಡೆಯಲಿದ್ದು ಅದರ ಪೂರ್ವಭಾವಿಯಾಗಿ 2025 ಮಾರ್ಚ್ 26 ರಂದು ರಾಷ್ಟ್ರೀಯ ಟೆಕ್ ಫೆಸ್ಟ್ 2ಞ25 ಸಂವೀಕ್ಷಣ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ನೆರವೇರಿಸಲಾಯಿತು.
ಎಸ್. ಜಿ.ಬಿ.ಐ.ಟಿ. ಯ ಚೇರಮನ್ ರಾದ ಡಾ. ಎಫ್. ವ್ಹಿ. ಮಾನ್ವಿ ಅವರು ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಪ್ರಾಚಾರ್ಯ ಡಾ. ಬಿ.ಆರ್.ಪಟಗುಂದಿ ಅವರು ಸ್ವಾಗತ ನುಡಿಗಳನ್ನಾಡಿದರು.ಈ ಕಾರ್ಯಕ್ರಮದ ಸಂಚಾಲಕರಾದ ಡಾಽಽ ಕೆ. ಬಿ. ಪ್ರಕಾಶ ಅವರು ತಾಂತ್ರಿಕ ಕೌಶಲ್ಯದ ಜೊತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹಮದ್ ರೋಶನ್ ಅವರು ಈ ಫೆಸ್ಟ್ ನಲ್ಲಿ ಭಾಗವಹಿಸಿದಂತ ವಿಧ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಎಂಬುವುದು ಕೇವಲ ಪದವಿಯಲ್ಲ ರಾಷ್ಟ್ರ ನಿರ್ಮಾಣದ ಬುನಾದಿಯಾಗಿದ್ದು ವಿದ್ಯಾರ್ಥಿಗಳೆಲ್ಲರೂ ಸದೃಢ ರಾಷ್ಟ್ರ ನಿರ್ಮಿಸುವತ್ತ ನಡೆಯಬೇಕು. ಯಶಸ್ಸನ್ನು ಸಾಧಿಸಲು ಮೊದಲು ಸರಿಯಾದ ಮಾರ್ಗವನ್ನು ಹುಡುಕಬೇಕು. ನಂತರದಲ್ಲಿ ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕು, ಮೊದಲನೇಯ ಸೋಲಿಗೆ ಹೆದರದೆ ಮತ್ತೆ ಮತ್ತೆ ಪ್ರಯತ್ನಿಸಬೇಕೆಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ಆಕ್ಸಿಜನ್ ಪ್ರೈ.ಲಿ ವ್ಯವಸ್ಥಾಪಕ ನಿರ್ದೇಶಕರಾದ ವೆಂಕಟೇಶ ಪಾಟೀಲ ಅವರು ತಂತ್ರಜ್ಞಾನವು ದೇಶವನ್ನು ಮುನ್ನಡೆಸುವ ಸಾಧನ, ಅದನ್ನು ಬಳಸಿಕೊಂಡು ಹೆಚ್ಚೆಚ್ಚು ಆವಿಷ್ಕಾರಗಳನ್ನು ಮಾಡಲು ಪ್ರೇರೆಪಿಸಿದರು.
ಪರಮ ಪೂಜ್ಯಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಅವರು ಕಾರ್ಯಕ್ರಮದಲ್ಲಿ ಸಿದ್ಧರಾಮೇಶ್ವರ ಸಂಸ್ಥೆಯು ಆರಂಭದಲ್ಲಿ ಅನುಭವಿಸಿದ ಕಷ್ಟಗಳನ್ನು ನೆನಪಿಸಿಕೊಂಡು ಇದೊಂದು ಸಂಸ್ಥೆ ಮಾತ್ರವಾಗಿರದೆ ವಿದ್ಯಾರ್ಥಿಗಳಿಗೆ ಉಚಿತ ವಸತಿನಿಲಯ ಹಾಗೂ ವೃದ್ಧಾಶ್ರಮಗಳಂತಹ ಸಾಮಾಜಿಕ ಕಳಕಳಿ ಇರುವ ಕೆಲಸಗಳನ್ನು ನಡೆಸಿಕೊಂಡು ಬರುತ್ತಿದೆ, ಹಾಗಾಗಿ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಸಮಯವನ್ನು ವ್ಯರ್ಥಗೊಳಿಸದೆ ಸದ್ಬಳಕೆ ಮಾಡಿಕೊಳ್ಳಬೇಕೆಂದು ಆಶೀರ್ವಚನ ನೀಡಿದರು.
ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಗೌರಿ ಸಾವಳಗಿ ಮತ್ತು ವರುಣ ಕರೋಶಿ ಇವರು ನಿರೂಪಣೆ ಮಾಡಿದರು.
ಈ ಕಾರ್ಯಕ್ರಮದ ಸಂಯೋಜಕರಾದ ಡಾಽಽ ಸಂತೋಷ ಚಿಕ್ಕಬಾಗೇವಾಡಿ ಮತ್ತು ಪ್ರೋ. ವಿವೇಕಾನಂದ ಕೋರಿಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾದವರನ್ನು ಅಭಿನಂದಿಸಿ, ಸರ್ವರಿಗೂ ಧನ್ಯವಾದಗಳನ್ನು ಸಮರ್ಿಸಿದರು.