ಸುಕ್ಷೇತ್ರ ಶ್ರೀಶೈಲದಲ್ಲಿ ಶ್ರೀಶೈಲಗೌಡ ಬಿರಾದಾರ, ಸ್ನೇಹಿತರ ಬಳಗದಿಂದ ಅನ್ನಪ್ರಸಾದ ಸೇವೆ
ಸಿಂದಗಿ, 27; ನೆರೆಯ ಆಂದ್ರ್ರದೇಶ ರಾಜ್ಯದ ಸುಕ್ಷೇತ್ರ ಶ್ರೀಶೈಲದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ನಿಮಿತ್ಯ ಅನ್ನಪ್ರಸಾದ ಸೇವೆ ಮಾಡುವುದಕ್ಕಾಗಿ ಸಿಂದಗಿ ಪಟ್ಟಣದ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ(ಮಾಗಣಗೇರಿ) ಮತ್ತು ಸ್ನೇಹಿತರ ಬಳಗದ ವತಿಯಿಂದ ಭಕ್ತಾಧಿಗಳು ಶ್ರೀಶೈಲಕ್ಕೆ ತೆರಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ(ಮಾಗಣಗೇರಿ) ಮಾತನಾಡಿ, ಹನ್ನೇರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ದೇವರ ಜಾತ್ರಾಮಹೋತ್ಸವವು ಪ್ರತಿವರ್ಷ ಯುಗಾದಿ ಅಮವಾಸ್ಯೆಯಂದು ಜರುಗುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಿಂದ ಲಕ್ಷಾಂತರ ಭಕ್ತರು ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ದೇವರ ದರ್ಶನಕ್ಕೆ ತೆರಳುತ್ತಾರೆ. ಅದರಲ್ಲಿ ವಿಶೇಷವಾಗಿ ಉತ್ತರಕರ್ನಾಟಕದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಹೋಗುವುದು ವಾಡಿಕೆಯಾಗಿದೆ. ಹೀಗಾಗಿ ಪ್ರತಿವರ್ಷ ನಾನು ಮತ್ತು ನಮ್ಮ ಸ್ನೇಹಿತರ ಬಳಗದಿಂದ ಶ್ರೀಶೈಲಕ್ಕೆ ಆಗಮಿಸುವ ಭಕ್ತರಿಗೆ ಅನ್ನಪ್ರಸಾದ ಸೇವೆಯನ್ನು ನೆರವೇರಿಸುತ್ತಾ ಬಂದಿದ್ದು, ಈ ನಿಟ್ಟಿನಲ್ಲಿ ಶ್ರೀಶೈಲಕ್ಕೆ ತೆರಳುತ್ತಿರುವುದಾಗಿ ತಿಳಿಸಿದರು.
ಈ ವೇಳೆ ಗುರುಸಂಗಪ್ಪ ಪಟ್ಟಣಶೆಟ್ಟಿ, ನಿಂಗಪ್ಪ ಮುಂಡೇವಾಡಗಿ, ರವಿ ಬಿರಾದಾರ, ದವಲತರಾಯಗೌಡ ಮನ್ನಾಪೂರ, ವಿಜು ಪಟ್ಟಣಶೆಟ್ಟಿ, ಚನ್ನು ಮುಂಡೇವಾಡಗಿ, ಉಮೇಶ ಜೋಗೂರ, ಮಲ್ಲೇಶಪ್ಪ ಕುಂಬಾರ, ರುದ್ರಯ್ಯ ಮಠ, ಗುರುಪ್ಪ ಬಡಿಗೇರ, ಪರಶುರಾಮ ಕುಂಬಾರ, ಮಯೂರಮಠ, ಪಿಂಟ್ಯಾ ಹಡಪದ ಸೇರಿದಂತೆ ಹಲವರು ಇದ್ದರು.