ಬೆಳಗಾವಿ, 14: ನಗರದ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರಿಗೆ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಬೆನಕೆ ಅವರು ಹೋಮ್ ಕಾರಂಟೈನ್ ಗೆ ಒಳಗಾಗಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆಯವರು ತಮ್ಮ ಕ್ಷೇತ್ರದ ಜನರಿಗಾಗಿ ಕ್ಷೆತ್ರದಲ್ಲಿ ಅಲೆದಾಡಿ ಸಾಕ್ಷಷ್ಟು ಜನರಿಗೆ ಸಹಾಯ ಮಾಡಿದ್ದರು. ಅಲ್ಲದೆ ಸೋಂಕಿತರಿಗೆ ಅಭಯದ ಹಸ್ತ ಚಾಚಿದ್ದರು. ಈಗ ಬೆನಕೆ ಅವರಿಗೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಶನಿವಾರ ಅವರು ತಪಾಸಣೆಗೆ ಒಳಗಾಗಿದ್ದರು. ಆದರೆ ಅವರಿಗೆ ತಪಾಸಣೆ ವೇಳೆ ಸೋಂಕು ಇರುವ ಲಕ್ಷಣಗಳು ಕಂಡು ಬಂದಿರುವ ಹಿನ್ನೆಲೆ ಹೋಮ್ ಕಾರಂಟೈನ್ ಗೆ ಒಳಗಾಗಿದ್ದಾರೆ.