ವಿವಿಧ ಬೇಡಿಕೆ ಈಡೇರಿಕೆಗಾಗಿ ಅಂಗವಾಡಿ ಕಾರ್ಯಕತರ್ೆಯರ ಪ್ರತಿಭಟನೆ

ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಐಸಿಡಿಸಿ ಯೋಜನೆಗೆ ಅನುದಾನ ಹೆಚ್ಚಿಸಬೇಕು, ಕೊರೊನಾ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ನೌಕರರಿಗೆ ಸುರಕ್ಷಿತ ಸಾಧನ ನೀಡಬೇಕು, ಹಲ್ಲೆ ಘಟನೆ ಮರುಕಳಿಸದಂತೆ ಮುಂಜಾಗ್ರತೆ ವಹಿಸಬೇಕು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸಿಐಟಿಯು ಸಂಯೋಜಿತ ರಾಜ್ಯ ಅಂಗನವಾಡಿ ನೌಕರರ ಸಂಘದ ಕಾಯಕತರ್ೆಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸಿದರು.

      ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ನೂರಾರು ಕಾರ್ಯಕತರ್ೆಯರು ಕುರಿತು ಜಿಲ್ಲಾಧಿಕಾರಿಗಖ ಮೂಲಕ ಸರಕಾರಕ್ಕೆ ಮನವಿಯೊಂದನ್ನು ಸಲ್ಲಿಸಿ, ಅಂಗನವಾಡಿ ಕಾರ್ಯಕತರ್ೆಯರ ಮೇಲೆನ ಹಲ್ಲೆ ತಡೆಯಬೇಕು, ಪ್ರತಿ ತಿಂಗಳು ಗೌರವಧನ ನೀಡಬೇಕು. ಅಂಗನವಾಡಿ ನೌಕರರಿಗೆ ಮಾಸ್ಕ್, ಪಿಪಿಇ ಕಿಟ್, ಸ್ಯಾನಿಟೈಸರ್ ಮತ್ತಿತರ ಸುರಕ್ಷಿತ ಸಾಧನ ನೀಡುವ ಕುರಿತು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾಯಕತರ್ೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸಕರ್ಾರದ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕತರ್ೆ ಯೊಬ್ಬರು ಮಾತನಾಡಿ, ಅಂಗನವಾಡಿ ಕಾರ್ಯಕತರ್ೆಯರಿಗೆ ಪ್ರತಿತಿಂಗಳು ಗೌರವಧನ ಸಿಗುತ್ತಿಲ್ಲ. ಕೊರೋನಾ ವಾರಿಯರ್ಸಗಳಾಗಿ ಸೇವೆ ಸಲ್ಲಿಸುವವರಿಗೆ ಸುರಕ್ಷಿತ ಸಾಧನಗಳನ್ನು ವಿತರಿಸಿಲ್ಲ. ಅಂಗನವಾಡಿ ಕಾರ್ಯಕತರ್ೆಯರಿಗೆ ರಕ್ಷಣೆ

ಸಿಗುತ್ತಿಲ್ಲ.

      ಸಕರ್ಾರ ಅಂಗನವಾಡಿ ಕಾರ್ಯಕತರ್ೆ ಯರನ್ನು ನಿರ್ಲಕ್ಷಿಸುತ್ತಿರುವುದನ್ನು ಮುಂದುವರಿಸಿದರೆ ದೊಡ್ಡ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು. ಸಂದರ್ಭದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯದಶರ್ಿ ಸಂಧ್ಯಾ ಕುಲಕಣರ್ಿ, .ವಿ.ಪಾಟೀಲ, ಗಗೂಣಾಯಿ ಕದಂ, ಎನ್.ಬಿ.ಪತ್ತಾರ್, ಕೆ.ಆರ್. ತೋಪಿನಕಟ್ಟಿ, ವಿ.ಎಸ್.ಲಾಖೆ, ಮಂದು ಮಿರಜಿ ಸೇರಿದಂತೆ ಹಲವಾರು ಕಾರ್ಯಕತರ್ೆಯರು ಉಪಸ್ಥಿತರಿದ್ದರು.