ಲೋಕದರ್ಶನ ವರದಿ
ಸಿದ್ದಾಪುರ; ಎಲ್ಲರಿಗೂ ಕಡ್ಡಾಯ ಶಿಕ್ಷಣ ಸರ್ಕಾರದ ಉದ್ದೇಶ. ಅದಕ್ಕಾಗಿಯೇ 3 ವರ್ಷಕ್ಕೆ ಮಕ್ಕಳು ಶಾಲೆಗೆ. ಮಕ್ಕಳ ಶಾಲಾ ದಿನಗಳು ಅಂಗನವಾಡಿಯಿಂದ ಪ್ರಾರಂಭವಾಗುತ್ತವೆ. ಅಂಗನವಾಡಿಯಿಂದ ಹಿಡಿದು ಎಲ್ಲಾ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ, ಶಾಲಾ ಕಟ್ಟಡಕ್ಕೆ ಸರ್ಕಾರದಿಂದ ಪೌಷ್ಠಿಕ ಆಹಾರ, ವಿದ್ಯುತ್, ಶೌಚಾಲಯ, ನೀರು ಹೀಗೆ ಎಲ್ಲಾಅಗತ್ಯಸವಲತ್ತುಗಳು ದೊರೆಯುತ್ತವೆ. ಆದರೆ ಅಂಗನವಾಡಿ ಕೇಂದ್ರವೊಂದು ಮಂಜೂರಿಯಾಗಿ ಹತ್ತು ವರ್ಷ ಕಳೆದರೂ ಸ್ವಂತ ಕಟ್ಟಡ ಇಲ್ಲದೆ ಸರ್ಕಾರದಈ ಎಲ್ಲಾ ಸೌಲತ್ತುಗಳಿಂದ ವಂಚಿತವಾಗಿದೆ.
ಹೌದು ತಾಲೂಕಿನ ಕಡಕೇರಿಯ ಅಂಗನವಾಡಿ (2)2009 ರಲ್ಲಿ ಮಂಜೂರಿಯಾಗಿತ್ತು. ಆದರೆ ಹತ್ತು ವರ್ಷ ಕಳೆದರೂ ಇನ್ನು ಸ್ವಂತಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ.ಪ್ರಾರಂಭದಲ್ಲಿ ಖಾಸಗಿಯವರ ಒಂದು ಕೊಠಡಿ ಬಾಡಿಗೆ ಪಡೆದು ಅಲ್ಲಿ ಅಂಗನವಾಡಿ ನಡೆಸುತ್ತಿದ್ದರು. 2009 ರಿಂದ 3ವರ್ಷ ಒಂದು ಕಟ್ಟಡದಲ್ಲಿ, ನಂತರದಲ್ಲಿ ಇಲ್ಲಿಯವರೆಗೆ ಮತ್ತೊಂದು ಕಟ್ಟಡ ಬಾಡಿಗೆ ಪಡೆದು ಅಂಗನವಾಡಿ ನಡೆಸಲಾಗುತ್ತಿದೆ.ಇಲಾಖೆ ಅಂದಿನಿಂದ ಕೆಲವು ತಿಂಗಳು 750ರೂ ಬಾಡಿಗೆ ನೀಡಿದ್ದು ಬಿಟ್ಟರೆ, ಕೆಲವು ವರ್ಷಗಳಿಂದ 250ರೂ ಬಾಡಿಗೆ ನೀಡುತ್ತಿದೆ. ಆದರೆ ಇಂದಿನ ದಿನಗಳಲ್ಲಿ 250ರೂ ಬಾಡಿಗೆ ಎಂದರೆ ಬಾಡಿಗೆಗೆ ಕಟ್ಟಡಗಳು ಸಿಗುವುದು ಕಷ್ಟವಾಗಿದೆ.ಸಿಕ್ಕರೂ ಅಗತ್ಯಎಲ್ಲಾ ಸೌಭ್ಯಗಳು ಅಲ್ಲಿರುವುದಿಲ್ಲಾ.ಹಾಗೆಬಾಡಿಗೆಕಟ್ಟಡದಲ್ಲಿರುವ ಅಂಗನವಾಡಿಗಳಿಗೆ ಇಲಾಖೆಯಿಂದ ಕಟ್ಟಡಕ್ಕೆ ಸಂಬಂಧಿಸಿದ ಯಾವ ಸೌಲಭ್ಯಗಳು ಹಾಗೂ ಇನ್ನಿತರ ಕೆಲವು ಸೌಲಭ್ಯಗಳು ದೊರಕುತ್ತಿಲ್ಲಾ.
ಕಡಕೇರಿಯಲ್ಲಿ ಈಗ ನಡೆಸುತ್ತಿರುವ ಅಂಗನವಾಡಿ(2) ಬಾಡಿಗೆ ಕಟ್ಟಡದಲ್ಲಿ ವಿದ್ಯುತ್, ಶೌಚಾಲಯ ಸೌಲಭ್ಯಕೂಡಇಲ್ಲಾ. ನೀರು ಬಾಡಿಗೆ ನೀಡಿದ ಮನೆಯವರಿಂದ ಸಿಗುತ್ತದೆಯಾದರೂ ಬೆಸಿಗೆಯಲ್ಲಿ ಅದಕ್ಕೂ ತೊಂದರೆಯಾಗುತ್ತಿದೆ.ಮಳೆಗಾಲ ಬಂತೆಂದರೆ ಗಾಳಿ ಮಳೆಗೆ ನೀರು ಕಟ್ಟಡದ ಒಳಗೆ ಸಿಡಿಯುತ್ತದೆ. ಇನ್ನು ಮಕ್ಕಳು ಮಳೆಯಲ್ಲಿ ಶೌಚಕ್ಕೆ ಹೋಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ. ಮಳೆಗಾಲದಲ್ಲಿ ಮಕ್ಕಳಿಗೆ ನೀಡುವ ಆಹಾರ ಧಾನ್ಯಗಳನ್ನು ಸುರಕ್ಷಿತವಾಗಿಡುವುದಕ್ಕೂ ತೊಂದರೆಯಾಗುತ್ತಿದೆ.ಇನ್ನು ಬಾಡಿಗೆ ಕಟ್ಟಡ ಸಿಗದಿದ್ದರೆ ಮಕ್ಕಳ ಗತಿ ಏನು?ಇದು ಅಧಿಕಾರಿಗಳ ಗಮನಕ್ಕೆ ಬಾರಲಿಲ್ಲವೆನೋ? ತಿಳಿಯುತ್ತಿಲ್ಲಾ.
ಸುಶಿಕ್ಷಿತರಿರುವ ಊರಿನಲ್ಲಿ ಅಂಗನವಾಡಿ ಕಟ್ಟಡ ಕಟ್ಟಲು ಇರುವತೊಂದರೆ ಏನು?ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃಧ್ಧಿ ಯೋಜನಾಧಿಕಾರಿಳಿಗೆ ಈ ಕುರಿತು ಮಾಹಿತಿ ಇಲ್ಲವೇನೋ? ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿಲ್ಲವೇ?.ಅಥವಾ ಏನು ಮಾಡಲಾರದ ಸ್ಥಿತಿಯಲ್ಲಿದ್ದಾರೋ ಗೊತ್ತಿಲ್ಲಾ.ಹಿರಿಯ ಅಧಿಕಾರಿಗಳಿಗೆ ಸಮಸ್ಯೆಯ ಬಗ್ಗೆ ಅರಿವಿಲ್ಲವೋ? ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಬೇಕಾದವರೇ ಮೌನ ವಹಿಸಿದ್ದಾರೆಯೇ?.ಅಥವಾ ರಾಜಕೀಯ ಒತ್ತಡದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣವಾಗದೆ ನಿಂತಿದೆಯೇ?.ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಎದ್ದು ಕಾಣುತ್ತಿದೆ. ರಾಜಕೀಯ ಕೆರಚಾಟದಲ್ಲಿ ಅಂಗನವಾಡಿ ನಿರ್ಮಾಣಕ್ಕೆ ತೊಂದರೆಯಾಗುತ್ತಿದೆಯೇ?. ತಮ್ಮ ಒಣ ಪ್ರತಿಷ್ಠೆಯಿಂದ ಅಭಿವೃದ್ಧಿ ಕುಂಟಿತವಾಗುತ್ತದೆಯೇ?. ಹೀಗೆ ಹಲವಾರು ಅನುಮಾನಗಳು ಮೂಡುತ್ತಿವೆ. ತಂದೆ ತಾಯಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಏನು ಅರಿಯದ ಮಕ್ಕಳು ಮಾತ್ರ ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಪಾಲಕರು ಈ ಕುರಿತು ಗಮನ ಹರಿಸಬೇಕಿದೆ. ಇಲಾಖೆ ಇದಕ್ಕೆ ಸೂಕ್ತ ಹಾಗೂ ದೃಢ ನಿರ್ಧಾರ ಕೈಗೊಳ್ಳಬೇಕಿದೆ. ಸರಿಯಾದ ಜಾಗ ಸಿಗದಿದ್ದರೆ ಇಲಾಖೆಯ ನಿಯಮದ ಪ್ರಕಾರ ಸೂಕ್ತ ಸ್ಥಳದಲ್ಲಿ ಅಂಗನವಾಡಿ ನಿಮರ್ಾಣವಾಗಬೇಕಿದೆ. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಇದಕ್ಕೊಂದು ಸೂಕ್ತ ಪರಿಹಾರ ದೊರಕಿಸಿಕೊಡಬೇಕು. ಕೂಡಲೇ ಎಲ್ಲರಿಗೂ ಅನುಕೂಲವಾಗುವಂತ ಜಾಗದಲ್ಲಿ ಅಂಗನವಾಡಿ ನಿರ್ಮಾಣವಾಗಬೇಕಿದೆ.ಅಂಗನವಾಡಿ ಕಟ್ಟಡದ ನಿರ್ಮಾಣ ಇನ್ನು ವಿಳಂಬವಾದರೆ ತೊಂದರೆ ಅನುಭವಿಸುತ್ತಿರುವ ಮಕ್ಕಳು, ಪಾಲಕರು ಸಂಬಂಧಪಟ್ಟವರಿಗೆ ಹಿಡಿ ಶಾಪ ಹಾಕದೆ ಇರಲಾರರು.