ಲೋಕದರ್ಶನ ವರದಿ
ಮುಂಡಗೋಡ 9: ಭಾರತ್ ಬಂದ್ ಕರೆ ನೀಡಿದ್ದ ಹಿನ್ನಲೆಯಲ್ಲಿ ವಿವಿಧ ಸಂಘಟನೆಯವರು ಪ್ರತಿಭಟನಾ ಮೇರವಣಿಗೆ ನಡೆಸುತ್ತಿರುವಾಗ ಅಂಗನವಾಡಿ ಸಹಾಯಕಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.
ತಾಲೂಕಿನ ಶಿಡ್ಲಗುಂಡಿ ಅಂಗನವಾಡಿ ಸಹಾಯಕಿ ಶಾಂತವ್ವ ಚಕ್ರಸಾಲಿ (57) ಎಂಬುವಳು ಸಾವನ್ನಪ್ಪಿದ ಮಹಿಳೆಯಾಗಿದ್ದಾಳೆ. ಪಟ್ಟಣದ ಲೋಕೋಪಯೋಗಿ ಇಲಾಖೆಯ ಆವರಣದಿಂದ ವಿವಿಧ ಸಂಘಟನೆಯವರು ಪ್ರತಿಭಟನಾ ಮೇರವಣಿಗೆ ಆರಂಭಿಸಿದರು.
ಈ ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕತರ್ೆಯರು, ಸಹಾಯಕಿಯರು, ಕೂಲಿ ಕಾಮರ್ಿಕ ಸಂಘಟನೆಯವರು, ಆಶಾ ಕಾರ್ಯಕತರ್ೆಯರು ಹೀಗೆ ವಿವಿಧ ಸಂಘಟನೆಯವರು ಭಾಗವಹಿಸಿದ್ದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೇರವಣಿಗೆ ನಡೆಸಿ ತಹಸೀಲ್ದಾರ್ ಕಚೇರಿಗೆ ಮೇರವಣಿಗೆ ಸಾಗುತ್ತೀರುವಾಗ ಮಾರ್ಗ ಮಧ್ಯ ತಾಲೂಕು ಪಂಚಾಯತ ಎದುರು ಅಂಗನವಾಡಿ ಸಹಾಯಕಿ ಶಾಂತವ್ವ ಚಕ್ರಸಾಲಿ ಕುಸಿದು ಬಿದ್ದಿದ್ದು ಈ ವೇಳೆ ಅವಳಿಗೆ ನೀರು ಕುಡಿಸಿ ಎದುರಿಗಿದ್ದ ತಾಲೂಕು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಆದರೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಸರಕಾರಿ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ.
ಜಮಾಯಿಸಿದ ಕಾರ್ಯಕತರ್ೆಯರು
ಅಂಗನವಾಡಿಯ ಸಹಾಯಕಿ ಕುಸಿದು ಬಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಮೇರವಣಿಗೆ ತಹಸೀಲ್ದಾರ್ ಕಚೇರಿಗೆ ತೆರಳಿತ್ತು ಆದರೆ ಆಸ್ಪತ್ರೆಗೆ ದಾಖಲಾಗಿದ್ದ ಸಹಾಯಕಿ ಸಾವನ್ನಪ್ಪಿದ ಸುದ್ದಿ ತಿಳಿದ ತಕ್ಷಣ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲ ಮಹಿಳೆಯರು ಸರಕಾರಿ ಆಸ್ಪತ್ರೆಯ ಬಳಿ ಎಲ್ಲರು ಜಮಾಯಿಸಿದರು.
ಮೃತಳ ಅಂತಿಮ ದರ್ಶನ ಪಡೆದುಕೊಂಡರು ಮತ್ತೆ ಕೆಲವರು ಕಂಬನಿ ಮಿಡಿಯುತ್ತಿರುವುದು ಕಂಡು ಬಂದಿತು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿದರ್ೆಶಕರು ರಾಜೇಂದ್ರ ಬೇಕಲ್ ಭೇಟಿ ನೀಡಿ ಮೃತಳ ಕುಟುಂಬಕ್ಕೆ ಸಕರ್ಾರದಿಂದ ಬರುವಂತಾ ಪರಿಹಾರವನ್ನು ಮುಟ್ಟಿಸುವ ಬರವಸೆ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಅಧಿಕಾರಿಗಳ ಭೇಟಿ
ವಿಷಯ ತಿಳಿಯುತ್ತಿದ್ದಂತೆ ತಹಸೀಲ್ದಾರ್ ಅಶೋಕ ಗುರಾಣಿ, ಸಿಪಿಐ ಶಿವಾನಂದ ಚಲವಾದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಎಚ್.ಬಿ.ಬೈಲ್ಪತ್ತಾರ್ ಆಸ್ಪತ್ರೆಗೆ ಭೇಟಿ ನೀಡಿದರು ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದರು.