ಅಫ್ಘಾನಿಸ್ತಾನ ಕ್ರಿಕೆಟ್ ನಿರ್ದೇಶಕರಾಗಿ ಆ್ಯಂಡಿ ಮೋಲ್ಸ್ ನೇಮಕ

ನವದೆಹಲಿ, ಅ 4:   ಅಫ್ಘಾನಿಸ್ತಾನ ಕ್ರಿಕೆಟ್ನ ನಿರ್ದೇಶಕ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥರನ್ನಾಗಿ ಆ್ಯಂಡಿ ಮೋಲ್ಸ್ ಅವರನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ನೇಮಿಸಿದೆ.  ಇತ್ತೀಚೆಗೆ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದ ಅಫ್ಘಾನಿಸ್ತಾನ ತಂಡೆಕ್ಕೆ ಮೋಲ್ಸ್ ಅವರು ಮಧ್ಯಂತರ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಇವರು ಲೆವೆಲ್ ನಾಲ್ಕನೇ ಕೋಚ್ ಕೂಡ ಆಗಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶ ಪ್ರವಾಸವನ್ನು ಮುಗಿಸಿರುವ ಅಫ್ಘಾನಿಸ್ತಾನ ತಂಡದ ಮಧ್ಯಂತರ ಕೋಚ್ ಆಗಿ ಸೇವೆ ಸಲ್ಲಿಸಿದ್ದ ಆ್ಯಂಡಿ ಮೋಲ್ಸ್ ಅವರನ್ನು ಕ್ರಿಕೆಟ್ ನಿರ್ದೇಶಕ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿದೆ. ಆ್ಯಂಡಿ ಮೋಲ್ಸ್ ಅವರು ಕ್ರಿಕೆಟ್ನಲ್ಲಿ 25 ವರ್ಷ ಅನುಭವ ಹಾಗೂ ನಾಲ್ಕನೇ ಹಂತದ ಕೋಚ್ ಕೂಡ ಆಗಿದ್ದಾರೆ ಎಂದು ಇದೇ ವೇಳೆ ಎಸಿಬಿ ಉಲ್ಲೇಖಿಸಿದೆ.  ಕಳೆದ ಸೆ. 27 ರಂದು ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಲ್ಯಾನ್ಸ್ ಕ್ಲಸ್ನರ್ ಅವರನ್ನು ಅಫ್ಘಾನಿಸ್ತಾನ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಗಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಆಗಿ ಕ್ಲಸ್ನರ್ ಸೇವೆ ಸಲ್ಲಿಸಿದ್ದರು. ಲ್ಯಾನ್ಸ್ ಕ್ಲಸ್ನರ್ ಅವರು ದಕ್ಷಿಣ ಆಫ್ರಿಕಾ ನ್ಯಾಷನಲ್ ಅಕಾಡೆಮಿ ಸಲಹೆಗಾರ ಹಾಗೂ ಆಫ್ರಿಕಾ ಟೆಸ್ಟ್ ತಂಡೆಕ್ಕೆ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಜತೆಗೆ, ದೇಶೀಯ ಕ್ರಿಕೆಟ್ನ ಡಾಲ್ಫಿನ್ಸ್ ಗೆ  ಮುಖ್ಯ ಕೋಚ್ ಆಗಿ ಕೂಡ ಕೆಲಸ ನಿರ್ವಹಿಸಿದ್ದಾರೆ. ಅಲ್ಲದೆ, ಜಿಂಬಾಂಬ್ವೆ ತಂಡದ ಬ್ಯಾಟಿಂಗ್ ಕೋಚ್ ಕೂಡ ಆಗಿದ್ದರು. ಇತ್ತೀಚೆಗೆ ಅವರು ದಕ್ಷಿಣ ಆಫ್ರಿಕಾ ಟಿ-20 ತಂಡದ ಬ್ಯಾಟಿಂಗ್ ಕೋಚ್ ಆಗಿದ್ದರು.